ನ್ಯೂಜ್ ಡೆಸ್ಕ್:-ಕೋವಿಡ್ ಸೋಂಕಿತರನ್ನು ರಂಜಿಸಿ ಮನೋ ಧೈರ್ಯ ತುಂಬುವ ಸಲುವಾಗಿ ಮಂಡ್ಯ ಜಿಲ್ಲೆಯ ಮಳವಳ್ಳಿ ಶಾಸಕ ಡಾ.ಕೆ.ಅನ್ನದಾನಿ ಹಾಡಿ, ನೃತ್ಯ ಮಾಡಿರುತ್ತಾರೆ.ಮಳವಳ್ಳಿ ಪಟ್ಡಣದ KSRTC ತರಬೇತಿ ಕೇಂದ್ರದಲ್ಲಿ ನಡೆಯುತ್ತಿರುವ ಕೋವಿಡ್ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಸೋಂಕಿತರನ್ನು ರಂಜಿಸಲು ನೃತ್ಯ ಮಾಡಿದ್ದಾರೆ.
ಸೋಂಕಿತರಿಗೆ ಮನೋರಂಜನೆ ನೀಡುವುದಕ್ಕೆ ಸಾಂಸ್ಕತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿ ಈ ಸಂದರ್ಭದಲ್ಲಿ ಗ್ರಾಮೀಣ ಸೋಗಡಿನ ಜನಪದ ಗೀತೆಗಳಿಗೆ ಶಾಸಕ ಹಾಡಿ ನೃತ್ಯ ಮಾಡಿದಾಗ ಸೋಂಕಿತರು ಸಹ ತಾವು ನಿಂತಿದ್ದ ಜಾಗದಲ್ಲೇ ನೃತ್ಯ ಮಾಡಿ ಆನಂದಿಸಿದರು.ವೃತ್ತಿಯಲ್ಲಿ ವೈದ್ಯರಾಗಿರುವ ಶಾಸಕ ಡಾ.ಕೆ.ಅನ್ನದಾನಿ ಸ್ವತಃ ಜಾನಪದ ಗಾಯಕರು ಹಾಗೂ ಕಲಾವಿದರಾಗಿದ್ದು, ಸೋಂಕಿತರಿಗೆ ಉತ್ಸಾಹ ತುಂಬಿ ಮನೋ ಧೈರ್ಯ ತುಂಬುವ ಉದ್ದೇಶದಿಂದ ವೃತ್ತಿಪರ ಜಾನಪದ ಕಲಾವಿದರು ಮತ್ತು ಹಾಡುಗಾರರನ್ನು ಕರೆಯಿಸಿ ಕಾರ್ಯಕ್ರಮ ಆಯೋಜಿಸಿರುವುದಾಗಿ ಹೇಳಲಾಗಿದೆ.
- ಕೊರೊನ ದಿಂದ ರಕ್ಷಿಸಿಕೊಳ್ಳಲು ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಬಿಸಿ ನೀರಿನ ಸ್ನಾನ ಮಾಡಿ.ಸ್ವಚ್ಚತೆ ಕಾಪಾಡಿಕೊಳ್ಳಿ.
- ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
- ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
- ಜನ ನಿಬಿಡ ಪ್ರದೇಶದಿಂದ ಅದಷ್ಟು ದೂರವಿರಿ.
- ಸಮೀಪದ ಅಂಗಡಿಯಲ್ಲೇ ಅಗತ್ಯ ದಿನಸಿ ಇತರೆ ವಸ್ತುಗಳನ್ನು ತರಿಸಿಕೊಳ್ಳಿ.
- ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿಕೊಳ್ಳಿ.
- ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
- ಇದು vcsnewz.com ಕಳಕಳಿಯ ವಿನಂತಿ.