ನ್ಯೂಜ್ ಡೆಸ್ಕ್:-ಹಂತ ಹಂತವಾಗಿ ಲಾಕ್ ಡೌನ್ ಅನ್ನು ಜೂನ್ 7ರ ನಂತರ ತೆರವು ಗೋಳಿಸಲಾಗುವುದು ಎಂದು ಹೇಳಲಾಗುತ್ತಿದೆ
3 ಷರತ್ತು ಪಾಲನೆಯಾದರೆ ಮಾತ್ರವಷ್ಟೆ ಲಾಕ್ ಡೌನ್ ತೆರವು ಮಾಡಲು ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದರಂತೆ.
ವರದಿಯಲ್ಲಿ ಹೇಳಿರುವಂತೆ ಆಸ್ಟ್ರೇಲಿಯಾದ ವಿಕ್ಟೋರಿಯಾ ಮಾಡೆಲ್ ಪ್ರಸ್ತಾಪಿಸಿದ್ದು ಲಾಕ್ ಡೌನ್ ತೆರಿವಿಗೆ 3 ಪ್ರಮುಖ ಷರತ್ತುಗಳನ್ನು ಸೂಚಿಸಿದ್ದು. 3 ಷರತ್ತು ಪಾಲನೆಯಾದರಷ್ಟೇ ಲಾಕ್ ಡೌನ್ ತೆರವು ಮಾಡಿ ಇಲ್ಲವಾದಲ್ಲಿ ಲಾಕ್ಡೌನ್ ಮುಂದುವರಿಸುವುದು ಅನಿವಾರ್ಯ ಎಂದಿರುತ್ತಾರೆ.
ಒಂದು ವೇಳೆ 3 ಷರತ್ತು ಪಾಲನೆ ಆಗದೇ ಹೋದರೆ ಜೂನ್ 14ರವರೆಗೆ ಲಾಕ್ಡೌನ್ ವಿಸ್ತರಣೆ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ.
ತಜ್ಞರ ವರದಿಯ ಸಾರಾಂಶವನ್ನು ಹೊತ್ತೊಯ್ದ ಸುಧಾಕರ್,ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಚರ್ಚೆ ನಡೆಸಿದ್ದಾರಂತೆ ಈ ವೇಳೆ, ತಜ್ಞರ ವರದಿಯನ್ನೇ ಪರಿಗಣಿಸೋಣ, ಸಚಿವರ ಜೊತೆಯೂ ಮಾತಾಡೋಣ. ಇನ್ನೊಂದು ವಾರ ಮುಂದುವರಿಸುವ ಬಗ್ಗೆ ಎರಡ್ಮೂರು ದಿನದಲ್ಲಿ ನಿರ್ಧಾರ ಮಾಡೋಣ ಎಂದು ಮುಖ್ಯಮಂತ್ರಿ ಹೇಳಿರುವುದಾಗಿ ತಿಳಿದು ಬಂದಿದೆ. ಇದರ ಬೆನ್ನಲ್ಲೇ, ನಾಳೆ ಕೋವಿಡ್ ನಿರ್ವಹಣಾ ಸಚಿವರ ಜೊತೆ ಸಿಎಂ ಸಭೆ ಕರೆದಿದ್ದಾರೆ. ಸಭೆ ಬಳಿಕ ಎರಡು ದಿನಗಳಲ್ಲಿ ಮತ್ತೊಮ್ಮೆ ಸಚಿವರು, ಅಧಿಕಾರಿಗಳು, ತಜ್ಞರ ಜೊತೆ ಸಭೆ ನಡೆಸಿ, ಶುಕ್ರವಾರದೊಳಗೆ ಲಾಕ್ ಡೌನ್ ವಿಸ್ತರಣೆ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ
ಆರ್ಥಿಕ ಚಟುವಟಿಕೆಗಳಿಗೆ ಚೈತನ್ಯ ಸಿ.ಎಂ
ಈ ಮದ್ಯೆ ಬುಧವಾರ ಸಂಜೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿರುವಂತೆ ಕರೋನಾವೈರಸ್ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ ಮತ್ತು ಗ್ರಾಮೀಣ ಪ್ರದೇಶದಲ್ಲಿ ಪ್ರಕರಣಗಳು ಇನ್ನೂ ಹೆಚ್ಚಿವೆ ಇರುವುದರಿಂದ ಕಠಿಣ ಕ್ರಮಗಳನ್ನು ಮುಂದುವರಿಸುವ ಇರಾದೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು ಆರ್ಥಿಕ ಚಟುವಟಿಕೆಗಳಿಗೆ ಚೈತನ್ಯ ತುಂಬುವ ನಿಟ್ಟಿನಲ್ಲಿ ರಫ್ತು ಆಧಾರಿತ ವ್ಯವಹಾರಗಳಿಗೆ ಗುರುವಾರದಿಂದ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗುವುದು ಎಂದು ಹೇಳಿರುವುದು ಕೆಲವು ಕ್ಷೇತ್ರಗಳಿಗೆ ವಿನಾಯಿತಿ ನೀಡಬಹುದು ಎಂದು ಅಂದಾಜಿಸಲಾಗಿದೆ.
ಏಕಾಏಕಿ ಲಾಕ್ ಡೌನ್ ತೆರವುಗೊಳಿಸಿದ್ದೆ ಆದಲ್ಲಿ ಗ್ರಾಮೀಣ ಭಾಗದಲ್ಲಿ ಇನ್ನೂ ಇರುವ ರೂಪಾಂತರಿ ವೈರಸ್ ಮತ್ತಷ್ಟು ಹರಡಬಹುದು ಎಂಬುದು ತಜ್ಙರ ಆತಂಕ ಎನ್ನಲಾಗಿದೆ.