ಶ್ರೀನಿವಾಸಪುರ:- ತಾಲೂಕಿನ ರಾಯಲ್ಪಾಡು ಪೋಲಿಸ್ ಸಬ್ ಇನ್ಸಪೇಕ್ಟರ್ ವಿರುದ್ದ ಮಾಜಿ ಸ್ಪೀಕರ್ ರಮೇಶಕುಮಾರ್ ತಿರುಗಿ ಬಿದಿದ್ದಾರೆ ಸ್ವತಃ ಅಖಾಡಕ್ಕೆ ಇಳಿದ ಅವರು ಇಂದು ಬೆಂಗಳೂರು-ಕಡಪ ರಾಜ್ಯ ಹೆದ್ದಾರಿಯ ಕರ್ನಾಟಕ-ಆಂಧ್ರ ಗಡಿಯಲ್ಲಿ ಸ್ವತಃ ಧರಣಿ ಕುಳಿತು ರಾಯಲ್ಪಾಡು ಟಾಠೆ ಸಬ್ ಇನ್ಸಪೇಕ್ಟರ್
ನರಸಿಂಹಮೂರ್ತಿ ಭ್ರಷ್ಟಾಚಾರದ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಪೋಲಿಸ್ ವ್ಯವಸ್ಥೆ ವಿರುದ್ದ ಗುಡುಗಿದ್ದಾರೆ. ಪೋಲಿಸ್ ಚೆಕ್ ಪೋಸ್ಟ್ ನಲ್ಲಿ ಅಕ್ರಮವಾಗಿ ರೈತರನ್ನು, ದ್ವಿಚಕ್ರ ವಾಹನದ ಸವಾರನ್ನು, ರೋಗಿಗಳನ್ನು ಹಾಗು ಹಾಲು ಡೈರಿ ವಾಹನಗಳನ್ನು ಬಿಡದೆ ಹಣ ಕಿಳುತ್ತಿದ್ದಾರೆ ಇದರ ಜೋತೆಗೆ ಲಂಚದ ಹಣ ನೀಡಲಿಲ್ಲ ಎಂದರೆ ಮಾರನೆ ದಿನ ಮನೆ ಬಳಿ ಸಾಲಗಾರನ ರೀತಿಯಲ್ಲಿ ಹಣ ವಸೂಲಾತಿಗೆ ಬರುತ್ತಾರೆ ಎಂದು ಸಾರ್ವಜನಿಕರಿಂದ ಪೋಲಿಸ್ ಲಂಚಾವತಾರದ ಬಗ್ಗೆ ದೂರುಗಳು ಬಂದ ಹಿನ್ನಲೆಯಲ್ಲಿ ಇಂದು ಏಕಾಏಕಿ ಅಖಾಡಕ್ಕೆ ಇಳಿದ ರಮೇಶಕುಮಾರ್ ಬೆಂಗಳೂರು-ಕಡಪ ರಾಜ್ಯ ಹೆದ್ದಾರಿಯ ಹಕ್ಕಿ ಪಿಕ್ಕಿ ಕಾಲೋನಿ ಬಳಿ ಇರುವಂತ ಪೋಲಿಸ್ ಚೆಕ್ ಪೋಸ್ಟ್ ಬಳಿ ಹೆದ್ದಾರಿಯಲ್ಲಿಯೇ ಧರಣಿ ಕುಳಿತು ಪ್ರತಿಭಟಿಸಿದರು.
ಹಿರಿಯ ಪೋಲಿಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವ ವರಿಗೂ ಏಳುವುದಿಲ್ಲ ಎಂದು ಕುಳಿತ ಅವರಲ್ಲಿಗೆ ಮುಳಬಾಗಿಲು ಡಿ.ವೈ.ಎಸ್.ಪಿ ಗಿರಿ, ಶ್ರೀನಿವಾಸಪುರ ಗ್ರಾಮೀಣ ವೃತ್ತಾಧಿಕಾರಿ ರಾಘವೇಂದ್ರಪ್ರಕಾಶ್, ಶ್ರೀನಿವಾಸಪುರ ಠಾಣಾಧಿಕಾರಿ ರವಿಕುಮಾರ್ ಭೇಟಿ ನೀಡಿ ನಂತರ ಹಿರಿಯ ಅಧಿಕಾರಿಗಳಿಗೆ ಮಾಹಿತಿ ಸಲ್ಲಿಸಿ ಕ್ರಮ ಜರುಗಿಸುತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡಿದ ನಂತರ ರಮೇಶಕುಮಾರ್ ಧರಣಿ ವಾಪಸ್ಸು ಪಡೆದಿರುತ್ತಾರೆ.ಧರಣಿ ಕಾರ್ಯಕ್ರಮದಲ್ಲಿ ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಬಗ್ಗಲಘಟ್ಟ ಶ್ರೀನಿವಾಸರೆಡ್ದಿ,ಸ್ಟೂಡಿಯೋ ಆಶೋಕ್,ಪಂಚಾಯಿತಿ ಅಧ್ಯಕ್ಷ ಅರುಣಾವೆಂಕಟ್.ಸದಸ್ಯ ಗಂಗಾಧರ,ಚಿಕ್ಕನಾರಯಣಪ್ಪ,ವಿಶ್ವನಾಥರೆಡ್ದಿ ಶಿವರಾಜಗೌಡ,ವೇಣು ಹರಿಷ್ ಯಾದವ್ ಮುಂತಾದವರು ಇದ್ದರು.
ಧರಣಿ ಕಾರ್ಯಕ್ರಮ ಮುಗಿಯುವಷ್ಟರಲ್ಲಿ ರಾಯಲ್ಪಾಡು ಠಾಣೆ ಸಬ್ ಇನ್ಸಪೇಕ್ಟರ್ ನರಸಿಂಹಮೂರ್ತಿ ಅವರನ್ನು ಅಮಾನತ್ತು ಮಾಡಲಾಗಿದೆ ಎಂದು ಪೋಲಿಸ್ ಇಲಾಖೆ ಮೂಲಗಳಿಂದ ತಿಳಿದುಬಂದಿದೆ.
ವರದಿ:ಹರ್ಷವರ್ಧನ್