ಶ್ರೀನಿವಾಸಪುರ:-ಶ್ರೀನಿವಾಸಪುರದ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಅಡಳಿತಾರೂಡ ಪಕ್ಷದಲ್ಲಿಯೇ ಅಧ್ಯಕ್ಷ ಸ್ಥಾನಕ್ಕೆ ಏರಲು ಜಟಾಪಟಿ ಶೂರುವಾಗಿದೆ ಒಟ್ಟು 15 ಸದಸ್ಯರ ಸಂಖ್ಯಾಬಲದ ಆಡಳಿತ ಮಂಡಳಿಯಲ್ಲಿ ಕಾಂಗ್ರೆಸ್ 8 ಜೆ.ಡಿ.ಎಸ್ 4 ಮತ್ತು ಬಿ.ಜೆ.ಪಿ ಮೂವರು ನಾಮ ನಿರ್ದೇಶಕ ಸದಸ್ಯರಿದ್ದು ಈಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಕಾಂಗ್ರೆಸ್ ಪಕ್ಷದ ಸೋಮಯಾಜಲಹಳ್ಳಿ ರಮೆಶ್ ಬಾಬು ಅಧ್ಯಕ್ಷರಾಗಿ ಮತ್ತು ರಾಜಣ್ಣ ಉಪಾಧ್ಯಕ್ಷರಾಗಿದ್ದಾರೆ. ಈ ಹಿಂದಿನ ಒಪ್ಪಂದಂತೆ ಕಾಂಗ್ರೆಸ್ ಸದಸ್ಯೆ ರೂಪ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ನಡೆದ ಮಾತುಕತೆ ವಿಫಲವಾದ ಹಿನ್ನಲೆಯಲ್ಲಿ ಅಧ್ಯಕ್ಷ ಹಾಗು ಉಪಾಧ್ಯಕ್ಷರನ್ನು ಅಧಿಕಾರದಿಂದ ಕೆಳಗಿಸಲು ಕಾಂಗ್ರೆಸ್ಸಿನ ಕೆಲ ಸದಸ್ಯರು ಜೆ.ಡಿ.ಎಸ್ ಹಾಗು ಬಿ.ಜೆ.ಪಿ ಸದಸ್ಯರ ಬೆಂಬಲ ಪಡೆದು ಅಧ್ಯಕ್ಷರ ವಿರುದ್ದ ಅವಿಶ್ವಾಸಕ್ಕೆ ಮುಂದಾದಾಗ ರೆಬಲ್ ಆಗಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಇಬ್ಬರು ಸದಸ್ಯರು ಮತ್ತು ಒರ್ವ ಬಿ.ಜೆ.ಪಿ ನಾಮ ನಿರ್ದೇಶಕ ಸದಸ್ಯ ಕೊನೆಗಳಿಗೆಯಲ್ಲಿ ಅಧ್ಯಕ್ಷ ಹಾಗು ಉಪಾಧ್ಯಕ್ಷರಿಗೇ ಬೆಂಬಲ ನೀಡಿದ್ದು ಮತ್ತು ರೂಪಾವತಿ ಅಧ್ಯಕ್ಷರಾಗಬೇಕು ಎಂದು ಅವಿಶ್ವಾಸ ನಿರ್ಣಯಕ್ಕೆ ಸಹಿ ಮಾಡಿದ್ದ ಕೆಲ ಸದಸ್ಯರು ಪ್ರಕ್ರಿಯೆಯಲ್ಲಿ ಭಾಗವಹಿಸದೆ ದೂರ ಉಳಿದ ಪರಿಣಾಮ ಸೋಮಯಾಜಲಹಳ್ಳಿ ರಮೆಶ್ ಬಾಬು ಅಧ್ಯಕ್ಷರಾಗಿ ಮತ್ತು ರಾಜಣ್ಣ ಉಪಾಧ್ಯಕ್ಷರಾಗಿ ಮುಂದುವರೆದಿದ್ದಾರೆ. ಇದರಿಂದ ಅವಿಶ್ವಾಸ ನಿರ್ಣಯದ ಸೂತ್ರಧಾರಿ ಹಾಗು ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ರಾಜೇಂದ್ರಪ್ರಸಾದ್ ಹಿನ್ನಡೆಯಾಗಿದೆ.
ಅಧ್ಯಕ್ಷರಾಗಬೇಕು ಎಂದು ಮೂಂಚೂಣಿಯಲ್ಲಿದ್ದ ರೂಪಾವತಿ ಸಹ ಅವಿಶ್ವಾಸ ನಿರ್ಣಯದ ಪ್ರಕ್ರಿಯೆಯಿಂದ ದೂರ ಉಳಿಯುವ ಮೂಲಕ ರಾಜಕೀಯ ಜಾಣ್ಮೆ ತೋರಿದ್ದಾರೆ.