- ಮಾವು ದಲ್ಲಾಲರ ವಿರುದ್ದ ಕೇಸು ದಾಖಲಿಸಲು ಸಚಿವ ಸೂಚನೆ.
- ಕಾಂಗ್ರೆಸ್ ಮುಖಂಡ ಬೇಟಪ್ಪ ಗುಲಾಬಿ ಪಾಲಿ ಹೌಸ್ ಸಚಿವ ಭೇಟಿ.
ಶ್ರೀನಿವಾಸಪುರ:-ಮುಂದಿನ 2 ವರ್ಷದ ಅವಧಿಗೂ ಬಿ.ಸ್.ವೈ ಅವರೇ ಸಿಎಂ ಆಗಿ ಇರುತ್ತಾರೆ ಇದರಲ್ಲಿ ಯಾವುದೇ ಅನುಮಾನ ಇಲ್ಲ ಸಿಎಂ ಬದಲಾವಣೆ ಎಂಬುದು ವದಂತಿ ಎಂದು ತೋಟಗಾರಿಕಾ ಹಾಗು ರೇಷ್ಮೆ ಖಾತೆ ಸಚಿವ ಸಚಿವ ಆರ್ ಶಂಕರ್ ಇಂದು ಶ್ರೀನಿವಾಸಪುರದಲ್ಲಿ ಹೇಳಿದರು.
ಪಕ್ಷದಲ್ಲಿ ಯಾವುದೇ ರಿತಿಯ ಭಿನ್ನಮತ ಇಲ್ಲ ಧಾರವಾಡ ಗ್ರಾಮೀಣ ಶಾಸಕ ಅರವಿಂದ್ ಬೆಲ್ಲದ್ ಅವರು ದೆಹಲಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಅವರು ವೈಯಕ್ತಿಕ ಕೆಲಸದ ನಿಮಿತ್ತ ಅಲ್ಲಿಗೆ ಹೋಗಿದ್ದಾಗಿ ಬೆಲ್ಲದ್ ಹೇಳಿದ್ದಾರೆ.
ರಾಜ್ಯದಲ್ಲಿ ಸಿಎಂ ಬದಲಾವಣೆ ಅನ್ನೋದು ಕೆವಲ ಊಹಾಪೋಹ,ವೈಯಕ್ತಿಕ ವಿಚಾರಗಳಿಗೆ ದೆಹಲಿಗೆ ತೆರಳಿದ್ರೆ ಅದಕ್ಕೆ ರೆಕ್ಕೆಪುಕ್ಕ ಕಟ್ಟಿ ಮಾತೋಡುದು ಬೇಡಎಂದರು.ಅವರು ಇಂದು ಶ್ರೀನಿವಾಸಪುರದ ಸನ್ ಸಿಪ್ ಆಗ್ರೋ ಫೂಡ್ಸ್ ಮಾವಿನ ಹಣ್ಣಿನ ಸಂಸ್ಕರಣ ಘಟಕ(ಜ್ಯೂಸ್ ಫ್ಯಾಕ್ಟರಿ), ಹೊಸಹಳ್ಳಿಯ ಮಾವು ಮಾಗಿಸಿವ ಕೇಂದ್ರ ಕೊಳತೂರಿನಲ್ಲಿ ಟಮ್ಯಾಟೊ ದಿಂದ ನಷ್ಟವಾದ ರೈತನೊಂದೊಗೆ ಸಂವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ನಂತರ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಹೊಗಳಗೆರೆ ಜಿ.ನಾರಾಯಣಗೌಡ ತೋಟಗಾರಿಕೆ ಕ್ಷೇತ್ರ ಹಾಗೂ ತಾಲ್ಲೂಕಿನ ಮಾವು ಅಭಿವೃದ್ದಿ ಕೇಂದ್ರಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಿಳಿಸಿದರು.
ಮಾವು ರೈತರಿಂದ ಹೆಚ್ಚು ಕಮೀಶನ್ ಪಡೆಯುತ್ತಿರುವ ಮಾವು ದಲ್ಲಾಲರ ವಿರುದ್ದ ಪೋಲಿಸ್ ಕೇಸು ದಾಖಲಿಸುವಂತೆ ತೋಟಗಾರಿಕೆ ಇಲಾಖೆ ಕೋಲಾರ ಉಪ ನಿರ್ದೇಶಕಿ ಗಾಯಿತ್ರಿ ಅವರಿಗೆ ಸಚಿವ ಸೂಚಿಸಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ವೈ.ಎ.ನಾರಯಣಸ್ವಾಮಿ ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್ ತಾಲೂಕು ಅಧ್ಯಕ್ಷ ಅಶೋಕರೆಡ್ಡಿ ಮುಂತಾದವರು ಇದ್ದರು.
ಬೇಟಪ್ಪನವರ ತೋಟಕ್ಕೆ ಸಚಿವ ಭೇಟಿ
ತೋಟಗಾರಿಕೆ ಸಚಿವ ಶಂಕರ್ ಕಾಂಗ್ರೆಸ್ ಮುಖಂಡ ಬೇಟಪ್ಪ ಅವರ ಗುಲಾಬಿ ಪಾಲಿ ಹೌಸ್ ಹಾಗು ಸಮುದಾಯ ಕೃಷಿ ಹೊಂಡ ವೀಕ್ಷಣೆ ಮಾಡಿದರು ಇಲ್ಲಿನ ಕಾರ್ಯವೈಖರಿ ಕುರಿತಾಗಿ ಮೆಚ್ಚುಗೆ ಸೂಚಿಸಿದರು. ಬೇಟಪ್ಪ ಅವರ ಮಗ ವೇಣು ಸಚಿವರನ್ನು ಬರಮಾಡಿಕೊಂಡರು
ವರದಿ:ಹರ್ಷವರ್ಧನ