ಶ್ರೀನಿವಾಸಪುರ:-ಮಾವು ಬೆಳೆ ಈ ಬಾರಿಯೂ ಇಳುವರಿ ಕಡಿಮೆ ಹಾಗು ಲಾಕ್ಡೌನ್ ನಿಂದಾಗಿ ಮಾರುಕಟ್ಟೆ ಇಲ್ಲದೆ ಮಾವು ಬೆಳೆಗಾರರು ನಷ್ಟದಲ್ಲಿದ್ದಾರೆ ಇವರಿಗೆ ಬೆಂಬಲ ಬೆಲೆ ನೀಡುವ ಮೂಲಕ ಮಾವು ಬೆಳೆಗಾರರನ್ನು ಕೈ ಹಿಡಿಯುವಂತೆ ಮಾವು ಬೆಳೆಗಾರ ಸಂಘದ ಅಧ್ಯಕ್ಷ ನಿಲಟೂರುಚಿನ್ನಪ್ಪರೆಡ್ಡಿ ತೋಟಗಾರಿಕಾ ಹಾಗು ರೇಷ್ಮೆ ಖಾತೆ ಸಚಿವ ಶಂಕರ್ ಅವರಿಗೆ ಮನವಿ ಪತ್ರ ನೀಡಿ ಒತ್ತಾಯಿಸಿದರು.
ಕೋವಿಡ್ ಸಂಕಷ್ಟದ ಮಾವು ಬೆಳೆಗಾರರಿಗೆ ಸರ್ಕಾರ ಈಗ ಘೋಷಿಸಿರುವ ಒಂದು ಹೆಕ್ಟರ್ ಗೆ ಹತ್ತು ಸಾವಿರ ಯಾವುದಕ್ಕೂ ಸಾಲುವುದಿಲ್ಲ ಕನಿಷ್ಟ ಐವತ್ತು ಸಾವಿರ ರೂಪಾಯಿ ಘೋಷಿಸಬೇಕು ಹಾಗೇ ಒಂದು ಟನ್ ಮಾವಿಗೆ ಐದು ಸಾವಿರ ಬೆಂಬಲ ಬೆಲೆ ಘೋಷಿಸಬೇಕು ಎಂದು ಹೇಳಿದರು ಇದಕ್ಕೆ ಸ್ಪಂದಿಸಿದ ಸಚಿವ ಶಂಕರ್ ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ಮಾಹಿತಿ ಸಾದ್ಯವಾದಷ್ಟು ಜಾರಿಗೆ ತರುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ರೈತ ಸಂಘದಿಂದಲೂ ಮನವಿ
ಮಾವಿನ ವಿಷಯದಲ್ಲಿ ಸರ್ಕಾರ ಶೀಘ್ರವಾಗಿ ತಿರ್ಮಾನ ತೆಗೆದುಕೊಂಡು ಬೆಂಬಲ ಬೆಲೆ ಘೋಷಿಸ ಬೇಕು ಮತ್ತು ದೊಡ್ದ ಮೊತ್ತದಲ್ಲಿ ನಷ್ಟ ಪರಿಹಾರ ನೀಡಬೇಕು ಎಂದು ರೈತ ಸಂಘದ ಅಧ್ಯಕ್ಷ ಶ್ರೀರಾಮರೆಡ್ಡಿ ಅಗ್ರಹಿಸಿದರು ಬೈಚಪ್ಪ ಮುಂತಾದವರು ಇದ್ದರು.