ನ್ಯೂಜ್ ಡೆಸ್ಕ್: ವಿಶ್ವದ ಟೆಕ್ ದಿಗ್ಗಜ ಸಂಸ್ಥೆ ಮೈಕ್ರೋ ಸಾಫ್ಟ್ ಸಂಸ್ಥೆಯ ಸಿಇಒ ಆಗಿದ್ದ ಸತ್ಯನಾದೇಳ್ಲ ಈಗ ಮೈಕ್ರೋಸಾಫ್ಟ್ ಕಂಪನಿಗೆ ಅಧ್ಯಕ್ಷರಾಗಿದ್ದಾರೆ. ದಕ್ಷಿಣ ಭಾರತದ ಹೈದರಾಬಾದ್ ಮೂಲದ ಸತ್ಯನಾದೇಳ್ಲ ಕರ್ನಾಟಕದ ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಓದಿರುವುದು ಅವರು ಮೈಕ್ರೋಸಾಫ್ಟ್ ಕಂಪನಿಯಲ್ಲಿ ಹಲವಾರು ಜವಾಬ್ದಾರಿಯುತ ಹುದ್ದೇಗಳನ್ನು ನಿರ್ವಹಿಸಿದ್ದ ಅವರನ್ನು ಮೈಕ್ರೋಸಾಫ್ಟ್ ಸಂಸ್ಥೆಯ ನಿರ್ದೇಶಕರ ಮಂಡಳಿ ಸರ್ವಾನುಮತದಿಂದ ಅಧ್ಯಕ್ಷರನ್ನಾಗಿ ಆಯ್ಕೆಮಾಡಿದೆ. ಈ ಬಗ್ಗೆ ಬುಧವಾರ ಮೈಕ್ರೋಸಾಫ್ಟ್ ಕಾರ್ಪೊರೇಷನ್ ಘೋಷಿಸಿತು. ಹಾಲಿ ಅಧ್ಯಕ್ಷರಾದ ಜಾನ್ ಡಬ್ಲ್ಯೂ. ಥಾಮ್ಸನ್ ಅವರನ್ನು ಸಂಸ್ಥೆಯ ಸ್ವತಂತ್ರ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.
ಸತ್ಯನಾದೇಲ್ಲ 2014 ರಿಂದ ಮೈಕ್ರೋಸಾಫ್ಟ್ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಹುದ್ದೆಗೆ ಸತ್ಯಜಿತ್ ರೇ ಬದಲಿಗೆ ಸ್ಟೀವ್ ಬಾಲ್ಮರ್ ಅವರನ್ನು ಆಯ್ಕೆ ಮಾಡಲಾಯಿತು. ಸಿಇಒ ಆಗಿ ಅಧಿಕಾರ ವಹಿಸಿಕೊಂಡ ಸತ್ಯ ನಾದೇಲ್ಲಾ ಮೈಕ್ರೋಸಾಫ್ಟ್ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿದೆ. ಮೈಕ್ರೋಸಾಫ್ಟ್ನ ಬೆಳವಣಿಗೆಗೆ ಸಹಕಾರಿಯಾಗಿದ್ದ ಶತಕೋಟಿ ಡಾಲರ್ ಸಂಸ್ಥೆಗಳಾದ ನುವಾನ್ಸ್ ಕಮ್ಯುನಿಕೇಷನ್ಸ್,ಲಿಂಕ್ಡ್ಇನ್ ಮತ್ತು ಜೆನಿಮ್ಯಾಕ್ಸ್ ಮತ್ತು ಹಲವಾರು ವ್ಯವಹಾರಗಳು ಯಶಸ್ವಿಯಾಗಲು ಸತ್ಯನಾದೇಳ್ಳ ಜವಾಬ್ದಾರಿಯಾಗಿ ವರ್ತಿಸಿದ್ದರು.
ವರದಿ:ಚ.ಶ್ರೀನಿವಾಸಮೂರ್ತಿ