- ಮೃತ ತಂದೆ ನಿವೃತ್ತ ಶಿಕ್ಷ್ಕಕ ವೆಂಕಟೇಶ್
- ಮಗನಿಗೆ ಬುದ್ದಿ ಹೇಳಿದಕ್ಕೆ ತಂದೆ ಕೊಲೆ
- ತಂದೆ ಕೊಂದ ಆರೋಪಿ ವಿಕೃತ ವರ್ತನೆ
ಶ್ರೀನಿವಾಸಪುರ:– ವೈವಾಹಿಕ ಜೀವನ ಸರಿಮಾಡಲಿಲ್ಲ ಎಂಬ ಆರೋಪದಲ್ಲಿ ಜನ್ಮ ಕೊಟ್ಟ ತಂದೆಯನ್ನೇ ಮಗ ಕೊಲೆಮಾಡಿರುವ ಧಾರುಣ ಘಟನೆ ಶ್ರೀನಿವಾಸಪುರ ಪಟ್ಟಣದ ಅಂಬೇಡ್ಕರ್ ಪಾಳ್ಯದಲ್ಲಿ ನಡೆದಿದೆ. ಶುಕ್ರವಾರ ಮುಂಜಾನೆ ನಾಲ್ಕು ಗಂಟೆ ಸಮಯಲದಲ್ಲಿ ಮಲಗಿದ್ದ ತಂದೆಯ ತೆಲೆಗೆ ರುಬ್ಬುವ ಗುಂಡುನಿಂದ ಹೊಡೆದು ಅಮಾನುಷವಾಗಿ ಕೊಲೆಮಾಡಿರುತ್ತಾನೆ ಕೊಲೆಯಾದ ದುರದೈವಿ ತಂದೆ ವೆಂಕಟೇಶ್(65) ವೃತ್ತಿಯಲ್ಲಿ ಶಿಕ್ಷಕರಾಗಿ ನಿವೃತ್ತಿಯಾಗಿದ್ದರು
ತಂದೆಯನ್ನೆ ಬರ್ಬರವಾಗಿ ಕೊಂದ ಬಳಿಕ ಪಾಪಿ ಮಗ ನವೀನ್ ನನ್ನು ಮನೆಯ ಸುಮುತ್ತಲಿನವರು ಹಿಡಿದು ಪೋಲಿಸರಿಗೆ ಒಪ್ಪಿಸಿರುತ್ತಾರೆ.
ಆರೋಪಿ ನವೀನ್ ಇಂಜನಿಯರ್ ಪದವಿಧರನಾಗಿದ್ದು ತಾನು ವಾಸವಿರುವ ಅಂಬೇಡ್ಕರ್ ಪಾಳ್ಯದ ನಿವಾಸಿ ಯುವತಿಯನ್ನು ಪ್ರೀತಿಸಿ ಎರಡು ಕುಡುಂಬದವರನ್ನು ಒಪ್ಪಿಸಿ ಮದೆಯಾಗಿದ್ದ ಅಕೆಯೂ ಇಂಜನಿಯರ್ ಪದವಿಧರೆಯಾದ ಹಿನ್ನಲೆಯಲ್ಲಿ ಮದುವೆಯಾದ ನಂತರ ಇಬ್ಬರು ಹೈದರಾಬಾದ್ ನಲ್ಲಿ ಮನೆ ಮಾಡಿ ಸಂಸಾರ ಇದ್ದರಾದರು ಇಬ್ಬರ ನಡುವೆ ಅನ್ಯೂನ್ಯತೆ ಇಲ್ಲದೆ ನವೀನ್ ಪತ್ನಿ ಅಲ್ಲಿಂದ ವಾಪಾಸ್ಸಾಗಿದ್ದು ಈ ಬಗ್ಗೆ ಆರೋಪಿ ನವೀನ್ ತಂದೆಯನ್ನು ತನ್ನ ವೈವಾಹಿಕ ಜೀವನ ಸರಿ ಮಾಡುವಂತೆ ಪೀಡಿಸುತ್ತಿದ್ದ ಹಿನ್ನಲೆಯಲ್ಲಿ ತಂದೆ ವೆಂಕಟೇಶ್ ಮುಖಂಡ ಸಮ್ಮುಖದಲ್ಲಿ ಹಲವಾರು ಬಾರಿ ನ್ಯಾಯ ಪಂಚಾಯಿತಿಗಳು ನಡೆದ್ದರಾದರೂ ನವೀನ್ ಪತ್ನಿ ಸಂಸಾರ ನಡೆಸಲು ಒಪ್ಪಿರಲಿಲ್ಲ ಇದರ ಮಧ್ಯೆ ವೆಂಕಟೇಶ್ ತನ್ನ ಚಿಕ್ಕಮಗಳಿಗೆ ಮದುವೆ ಮಾಡುವ ಸಂಬಂಧ ಗುರುವಾರ ನಿಶ್ಚಿತಾರ್ಥ ನಡೆಸಿರುತ್ತಾರೆ ಇದರಿಂದ ಆರೋಪಿ ನವೀನ್ ಮೇಲೆ ತೀವ್ರ ಪರಿಣಾಮ ಉಂಟಾಗಿ ಈ ಕೃತ್ಯ ನಡೆಸಿದ್ದಾನೆ ಎಂದು ಸ್ಥಳಿಯರು ಶಂಕೆ ವ್ಯಕ್ತಪಡಿಸಿರುತ್ತಾರೆ.
ವಿಕೃತವಾಗಿ ಸಂಬ್ರಮಿಸಿದ ಮಗ!
ಘಟನೆ ನಡೆದ ಬಳಿಕ ಆರೋಪಿ ಮಗ ತೀವ್ರ ರಕ್ತಸ್ರಾವದಿಂದ ತಂದೆ ಒದ್ದಾಡುತ್ತಿದ್ದರೆ ರಕ್ತ ಸಂಗ್ರಹಿಸಿ ಮೈಮೇಲೆ ಎರಚಿಕೊಂಡು, ಕೈಯಿಂದಲೇ ರಕ್ತ ಸೇವಿಸಿ ವಿಕೃತವಾಗಿ ರಾಕ್ಷಸಿ ಸಂಭ್ರಮ ಪಟ್ಟಿರುವ ಬಗ್ಗೆ ಸ್ಥಳಿಯ ಜನತೆ ಆತಂಕದಿಂದ ಹೇಳುತ್ತಾರೆ.
ಘಟನಾ ಸ್ಥಳಕ್ಕೆ ಮುಳಬಾಗಿಲು ಡಿ.ವೈ.ಎಸ್.ಪಿ ಗಿರಿ,ಪೋಲಿಸ್ ಇನ್ಸಪೇಕ್ಟರ್ ರವಿಕುಮಾರ್ ಭೇಟಿ ನೀಡಿ ಘಟನೆ ಸಂಬಂಧಿಸಿದಂತೆ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ
ವರದಿ:- ಹರ್ಷವರ್ಧನ, ಶ್ರೀನಿವಾಸಪುರ