- ರಸ್ತೆ ಮೂಲಕ ಸಾಗಿಸಿದ್ದರೆ ಸಾಗಾಣಿಕೆಗೆ ದುಬಾರಿ
- ಕೆಜಿ ಮಾವು ಸಾಗಿಸಲು 10 ರಿಂದ 12 ರೂಪಾಯಿ ಆಗುತಿತ್ತು
- ರೈಲಿನಲ್ಲಿ ಕೆಜಿ ಮಾವು 2 ರಿಂದ 3 ರೂಪಾಯಿ ವೆಚ್ಚ ಆಗುತ್ತಂತೆ
- ಕಿಸಾನ್ ರೈಲಿನಲ್ಲಿ ಮೂವತ್ತು ಸಾವಿರ ಟನ್ ಮಾವು ಸಾಗಾಣಿಕೆ
ಶ್ರೀನಿವಾಸಪುರ:– ಶ್ರೀನಿವಾಸಪುರ ಭಾಗದ ಸುಮಾರು ಮೂವತ್ತು ಸಾವಿರ ಟನ್ ಮಾವಿನ ಕಾಯಿಯನ್ನು ವಿಶೇಷ ಕಿಸಾನ್ ರೈಲಿನಲ್ಲಿ ಇದುವರಿಗೂ ಉತ್ತರ ಭಾರತಕ್ಕೆ ರವಾನೆ ಮಾಡಿದೆ.
ಶ್ರೀನಿವಾಸಪುರ-ಚಿಂತಾಮಣಿ ನಡುವಿನ ಪೆದ್ದನೆತ್ತ ರೈಲ್ವೇ ಸ್ಟೇಷನ್ ನಿಂದ ಮಾವಿನ ಕಾಯಿ ಹೊತ್ತು ಹೋರಡುವ ಕಿಸಾನ್ ರೈಲು ಇದುವರಿಗೂ 12 ಬಾರಿ ಇಲ್ಲಿಂದ ಹೋಗಿದ್ದು ಪ್ರತಿ ಬಾರಿ ಅಂದಾಜು 250 ಟನ್ ಮಾವಿನ ಕಾಯಿಯನ್ನು ಸಾಗಿಸುತ್ತಿದೆ ಎಂದು ರೈಲ್ವೆ ಸಿಬ್ಬಂದಿ ಹೇಳುತ್ತಾರೆ.
ಪೆದ್ದನೆತ್ತ ರೈಲ್ವೇ ಸ್ಟೇಷನಿಂದ ದೆಹಲಿಯ ಆದರ್ಶ ನಗರ ರೈಲ್ವೇ ಸ್ಠಷನ್ ಗೆ ಹೋಗುವ ರೈಲಿನಲ್ಲಿ ಇದುವರಿಗೂ ಬೆನುಷಾ(ಬೈಗಂಪಲ್ಲಿ) ಜಾತಿಯ ಮಾವಿನ ಕಾಯಿಯನ್ನು ಮಾತ್ರ ರವಾನಿಸಿದೆ ಎಂದು ಮಾವಿನ ವ್ಯಾಪರಸ್ಥ ರಾಜಧಾನಿ ಸಂಸ್ಥೆಯ ಮುಜಾಯಿದ್ ಅನ್ಸಾರಿ ತಿಳಿಸಿರುತ್ತಾರೆ ದೆಹಲಿಯ ಖ್ಯಾತ ವ್ಯಾಪರಸ್ಥರೊಬ್ಬರು ಕೇವಲ ಬೆನುಷಾ ಜಾತಿಯ ಮಾವನ್ನು ಹೆಚ್ಚು ಖರಿದಿಸಿ ರೈಲಿನ ಮೂಲಕ ಸಾಗಾಣಿಕೆ ಮಾಡುತ್ತಿದ್ದಾರೆ ಎಂದು ವಿವರಿಸಿದರು.
ರೈಲಿನಲ್ಲಿ ಸಾಗಾಣಿಕೆ ಖರ್ಚ ಕಡಿಮೆ
ಶ್ರೀನಿವಾಸಪುರದಿಂದ ಉತ್ತರ ಭಾರತಕ್ಕೆ ಮಾವು ರವಾನಿಸಬೇಕಾದರೆ 10 ರಿಂದ 14 ಟನ್ ಮಾವು ಸಾಗಾಣಿಕೆಗೆ ಅಂದಾಜು 1 ಲಕ್ಷ ಇಪ್ಪತ್ತ ರಿಂದ ಮೂವತ್ತು ಸಾವಿರ ರೂಪಾಯಿ ವೆಚ್ಚವಾಗುತ್ತಿತ್ತು ಅಂದಾಜು ಪ್ರತಿ ಕೆಜಿಗೆ 12 ರಿಂದ 13 ರೂಪಾಯಿ ಆಗುತಿತ್ತು ರೈಲಿನಲ್ಲಿ ಸಾಗಾಣಿಕೆಯಿಂದ ಪ್ರತಿ ಕೆಜಿಗೆ ಅಂದಾಜು ಮೂರು ರೂಪಾಯಿ ಆಗುತ್ತಿದೆ ಎನ್ನುತ್ತಾರೆ ಬೆನುಷಾ ಮಾವು ರಪ್ತುದಾರ ಚಂದ್ರಶೇಖರರೆಡ್ಡಿ.ದೊಡ್ಡನತ್ತ ರೈಲ್ವೆ ನಿಲ್ದಾಣದಿಂದ ಹೊರಟಿರುವ ಕಿಸಾನ್ ರೈಲಿನಲ್ಲಿ 22 ಬೋಗಿಗಳು ಇದ್ದು, 250 ಟನ್ ತೂಕದ ಮಾವನ್ನ ಕಾಟನ್ ಪೆಟ್ಟಿಗೆಗಳಲ್ಲಿ ಪ್ಯಾಕ್ ಮಾಡಿ ರೈಲಿಗೆ ತುಂಬಿಸಿ ಕಳಿಸಲಾಗುತ್ತದೆ.ರಸ್ತೆ ಸಾರಿಗೆ ಮೂಲಕ ದೆಹಲಿಗೆ ತಲುಪಲು 4 ದಿನ ಆಗುತ್ತಿದ್ದು, ಈಗ ಕೇವಲ 40 ಗಂಟೆಗಳ ಅವಧಿಯಲ್ಲಿ ದೆಹಲಿ ತಲುಪುತ್ತಿದೆ ಎನ್ನುತ್ತಾರೆ.
ಕೊರೋನಾ ಲಾಕ್ಡೌನ್ ರೈಲು ಸಾಗಾಣಿಕೆಗೆ ಪ್ರೇರಣೆ
ಪ್ರಪಂಚ ಪ್ರಸಿದ್ದ ಮಾವಿಗೆ ಖ್ಯಾತ ಶ್ರೀನಿವಾಸಪುರದ ಮಾವು ತಿನ್ನಲು ಉತ್ತರ ಭಾರತೀಯರು ತುಂಬಾ ಆಸಕ್ತರು ಆದರೆ ಕಳೆದ ವರ್ಷ ಕೊರೋನಾ ಲಾಕ್ಡೌನಿಂದ ದುಬಾರಿ ಧರದಲ್ಲಿ ಮಾವು ಸಾಗಾಣಿಕೆ ಮಾಡಲಾಗಿ ಅಷ್ಟಕಷ್ಟಗಳನ್ನು ಅನುಭವಿಸಿದ ಉತ್ತರ ಭಾರತದ ಮಾವು ವ್ಯಾಪರಸ್ಥರು ಕರ್ನಾಟಕ ಭಾಗದ ರೈಲ್ವೇ ಅಧಿಕಾರಿಗಳನ್ನು ಭೇಟಿ ಮಾಡಿ ಮಾವು ಸಾಗಾಣಿಕೆಗೆ ಅನಕೂಲ ಮಾಡಿಕೊಡಬೇಕು ಎಂದು ಮನವಿ ಇಟ್ಟ ಹಿನ್ನಲೆಯಲ್ಲಿ ಅದಕ್ಕೆ ಸ್ಪಂದಿಸಿದ ಶ್ರೀನಿವಾಸಪುರ ಹಾಗು ಚಿಂತಾಮಣಿ ಮೂಲದ ಇಬ್ಬರು ರೈಲ್ವೇ ಅಧಿಕಾರಗಳ ಶ್ರಮದಿಂದ ಮತ್ತು ಕೋಲಾರದ ಸಂಸದ ಮುನಿಸ್ವಾಮಿ ಸಹಕಾರದಿಂದ ಮಾವು ಸಾಗಾಣಿಕೆ ಮಾಡಲು ವಿಶೇಷ ಕಿಸಾನ್ ರೈಲು ಸಾಗಿಸಲಾಗುತ್ತಿದೆ.
ಕೋಲಾರದ ಸಂಸದ ಮುನಿಸ್ವಾಮಿ ಕೋಲಾರದ ರೈತರ ಮನವಿಗೆ ಸ್ಪಂದಿಸಿ ಉತ್ತರ ಭಾರತದಿಂದ ಮರ್ರಾ ಎಮ್ಮೆಗಳನ್ನು ಮತ್ತು ಗಿರ್ ಹಾಗು ಇತರೆ ದೇಶಿ ತಳಿ ಹಸುಗಳನ್ನು ರೈಲು ಮೂಲಕ ತರಸಿದ್ದರು.
ಈಗಾಗಲೆ ತೆಲಂಗಾಣ ಮತ್ತು ಆಂಧ್ರದ ನ್ಯೂಜಿವಿಡು ವಿನಿಂದ ರೈಲು ಮೂಲಕ ಮಾವು ಉತ್ತರ ಭಾರತಕ್ಕೆ ರವಾನೆಯಾಗುತ್ತಿದಿಯಂತೆ.
ವಿಶೇಷ ವರದಿ.ಚ.ಶ್ರೀನಿವಾಸಮೂರ್ತಿ