ಶ್ರೀನಿವಾಸಪುರ:- ಜಡಿಮಳೆಯಲ್ಲಿ ಬೆಂಗಳೂರಿನಿಂದ ಶ್ರೀನಿವಾಸಪುರದ ಕಡೆ ಬರುತ್ತಿದ್ದ ಖಾಸಗಿ ಬಸ್ಸಿಗೆ ಚಿಂತಾಮಣಿ ಕಡೆಗೆ ಹೋರಟಿದ್ದ ಕ್ಯಾಂಟರ್ ಡಿಕ್ಕಿ ಹೋಡೆದು ಬಸ್ಸಿನಲ್ಲಿದ್ದ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಇಂದು ಸಂಜೆ ಚಿಂತಾಮಣಿ-ಶ್ರೀನಿವಾಸಪುರ ರಸ್ತೆಯ ಕಲ್ಲೂರು ಕೆರೆ ಕಟ್ಟೆ ಮೇಲೆ ನಡೆದಿರುತ್ತದೆ.
ಶ್ರೀನಿವಾಸಪುರದಿಂದ ಚಿಂತಾಮಣಿ ಕಡೆಗೆ ಹೋರಟಿದ್ದ ಕ್ಯಾಂಟರ್ ಅತಿವೇಗದಿಂದ ವಾಹನ ಚಾಲನೆ ಮಾಡಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಕ್ಯಾಂಟರ್ ಶ್ರೀನಿವಾಸಪುರದ ಕಡೆಗೆ ಬರುತ್ತಿದ್ದ ಬೆಂಗಳೂರು MBS ಖಾಸಗಿ ಬಸ್ ಗೆ ಡಿಕ್ಕಿ ಹೊಡೆದಿರುತ್ತಾನೆ,ಬಸ್ಸಿನಲ್ಲಿದ್ದ ಸುಮಾರು 30 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು ಯಾವುದೆ ಪ್ರಾಣಪಯವಾಗಿಲ್ಲ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಬಸ್ ಚಾಲಕನ ಸಮಯ ಪ್ರಙ್ಞೆಯಿಂದ ಬಸ್ಸು ಕಲ್ಲೂರು ಕೆರೆಗೆ ಬೀಳುವುದನ್ನು ತಪ್ಪಿಸಿದ್ದಾಗಿ ಬಸ್ ಪ್ರಯಾಣಿಕರು ಹೇಳುತ್ತಾರೆ.
ಅಪಘಾತ ನಡೆದು ಸ್ಥಳಿಯರು ಮಾಹಿತಿ ನೀಡಿದರಾದರೂ ಸಮಯಕ್ಕೆ 108 ಅಂಬೂಲೆನ್ಸ್ ಬಾರದೇ ಹೋಯಿತು ಎನ್ನುತ್ತಾರೆ ಪ್ರತ್ಯಕ್ಷ ದರ್ಶಿಗಳು.
ರಾಷ್ಟ್ರೀಯ ಹೆದ್ದಾರಿ ಇಂಜನೀಯರಗಳ ನಿರ್ಲಕ್ಷ್ಯ ಕೆರೆ ಕಟ್ಟೆಗೆ ತಡೆ ಗೋಡೆ ಇಲ್ಲ!
ರಾಷ್ಟ್ರೀಯ ಹೆದ್ದಾರಿ 234 ಕಲ್ಲೂರು ಕೆರೆ ಕಟ್ಟೆ ಮೇಲೆ ಹಾದು ಹೋಗಿದೆ ಬಹುಶಃ ಈ ರಸ್ತೆಯಲ್ಲಿ ಅತಿ ದೊಡ್ದದಾದ ಹಾಗು ಆಳದ ಕೆರೆ ಎನ್ನುವ ಕಲ್ಲೂರು ಕೆರೆಗೆ ಇದುವರಿಗೂ ತಡೆ ಗೋಡೆ ನಿರ್ಮಿಸದೆ ನಿರ್ಲಕ್ಷ್ಯ ವಹಿಸಿರುವುದು ರಾಷ್ಟ್ರೀಯ ಹೆದ್ದಾರಿ ಇಂಜನೀಯರಗಳ ಕಾರ್ಯವೈಖರಿಗೆ ಸಾಕ್ಷಿ ಎನ್ನುತ್ತಾರೆ ಸ್ಟಳಿಯ ಗ್ರಾಮಸ್ಥರು.
ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಮುಗಿದು 6-7 ವರ್ಷಗಳು ಕಳೆದಿದೆ ಪಾತಪಲ್ಲಿ-ಕಲ್ಲೂರು ಎರಡು ಗ್ರಾಮಗಳನ್ನು ಬೆಸೆಯುವ ಕಲ್ಲೂರು ದೊಡ್ಡ ಕೆರೆಗೆ ತಡೆ ಗೋಡೆ ನಿರ್ಮಾಣ ಮಾಡಲು ಸಾದ್ಯವಾಗಲಿಲ್ಲಾವ ಎಂಬುದು ಸಾರ್ವಜನಿಕರ ಪ್ರಶ್ನೆ? ತಡೆ ಗೋಡೆ ಕೆರೆ ಕಟ್ಟೆ ಮೇಲೆ ಇದುವರಿಗೂ ಸಾಕಷ್ಟು ಅಪಘಾತಗಳು ನಡೆದು ಪ್ರಾಣಹಾನಿಗಳು ಸಹ ನಡೆದಿದೆ ಆದರೂ ರಾಷ್ಟ್ರೀಯ ಹೆದ್ದಾರಿ ಇಂಜನೀಯರಗಳ ಈ ಬಗ್ಗೆ ಆಸಕ್ತಿ ವಹಿಸದೆ ಇರುವುದು ದುರಂತವೆ ಸರಿ.
ಕಳೆದ 3-4 ವರ್ಷಗಳಿಂದ ಬಿಳುತ್ತಿರುವ ಮಳೆಯಿಂದ ಶ್ರೀನಿವಾಸಪುರ-ಚಿಂತಾಮಣಿ ಹಾಗು ಶ್ರೀನಿವಾಸಪುರ-ಮುಳಬಾಗಿಲು ರಸ್ತೆ ಹಾಳಾಗುತ್ತಿದೆ ಅದನ್ನು ಸರಿಪಡಿಸುವ ಕಾರ್ಯವನ್ನು ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಹೆದ್ದಾರಿ ಇಂಜನೀಯರಗಳಿಗೆ ಈ ರಸ್ತೆಯಲ್ಲಿ ಓಡಾಡುವ ವಾಹನ ಸವಾರರು ಹಿಡಿ ಶಾಪಹಾಕುತ್ತಾರೆ.