- ಮೂಲ ಶ್ರೀ ಅಪ್ರಮೇಯ ದೇವರು
- ದೇವಾಲಯದ ಆವರಣದಲ್ಲಿ ಅಂಬೆಗಾಲು ಕೃಷ್ಣನ ಗುಡಿ
“ಜಗದೋದ್ದಾರನ ಆಡಿಸಿದಳೆಶೋದೆ” ಈ ಹಾಡನ್ನು ಕೇಳದ ಕನ್ನಡಿಗರಿಲ್ಲ ಪುರಂದರದಾಸರಿಗೆ ಈ ಹಾಡನ್ನು ಬರೆಯಲು ಸ್ಪೂರ್ತಿಯಾದ ಅಂಬೆಗಾಲು ಕೃಷ್ಣನ ಬಗ್ಗೆ ತಿಳಿಯೋಣ. ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚೆನ್ನಪಟ್ಟಣ ನಗರದಿಂದ 1ಕಿಮೀ ದೂರದಲ್ಲಿನ ದೊಡ್ಡಮಳೂರು ಎಂಬಲ್ಲಿದೆ ಇಲ್ಲಿನ (ನವನೀತ) ಅಂಬೆಗಾಲು ಕೃಷ್ಣನ ಗುಡಿಯಲ್ಲಿ ಮತ್ತೆಲ್ಲೂ ಕಾಣದ ಕಪ್ಪುಶಿಲೆಯ ಕೃಷ್ಣನ ಮೂರ್ತಿ ಕೈಯಲ್ಲಿ ಬೆಣ್ಣೆ ಮುದ್ದೆ ಹಿಡಿದು ತೆವಳುತ್ತಾ ಗರುಡಪೀಠದ ಮೇಲೆ ಕುಳಿತಿರುವ ಬಾಲ ಕೃಷ್ಣನನ್ನು ನೋಡುವುದೇ ಒಂದು ಸೊಗಸು. ಹರಿಣದಂತಹ ಕಣ್ಣುಗಳು, ಗುಂಗುರು ಕೂದಲು , ಕೊರಳಲಲ್ಲಿ ಹುಲಿ ಉಗುರಿನ ಪದಕ, ಕಂಠೀಹಾರ,ನಡುವಲ್ಲಿ ಒಡ್ಯಾಣ(ಡಾಬು), ಕಿಣಿ ಕಿಣಿ ನಾದದ ಕಾಲಂದಿಗೆಗಳಿಂದ ಶೋಭಿತವಾಗಿರುವಂತೆ ಮೂರ್ತಿಯನ್ನು ಕೆತ್ತಿಸಿ ಪ್ರತಿಷ್ಟಾಪಿಸಿದ್ದು ವ್ಯಾಸ ಮಹರ್ಷಿ ಎಂದು ಹೇಳಲಾಗುತ್ತದೆ. ಮುಖ ಚಂದ್ರಬಿಂಬದಂತೆ ಇದ್ದು ನಿಮ್ಮೆಡೆಗೆ ಅಂಬೆಗಾಲು ಇಡುತ್ತಾ ಬರುವಂತೆ ಭಾಸವಾಗುತ್ತದೆ. ಪುರಂದರದಾಸರು ಈ ಕ್ಷೇತ್ರಕ್ಕೆ ಭೇಟಿ ನೀಡಿದಾಗ ಈ ಮೂರ್ತಿಯನ್ನು ನೋಡಿ ಮೋಹಿತರಾಗಿ ಭಾವಪರವಶತೆಯಿಂದ “ಜಗದೋದ್ದಾರನ ಆಡಿಸಿದಳೆಶೋದೆ” ಕೀರ್ತನೆ ರಚಿಸಿದರು. ಅವರ ಪ್ರಕಾರ ಕೃಷ್ಣನ ಕೈಯಲ್ಲಿರುವುದು ಬೆಣ್ಣೆ ಮುದ್ದೆಯಲ್ಲ ಆ ರೂಪದಲ್ಲಿ ಇರುವ ಆತ್ಮಸಾಕ್ಷಾತ್ಕಾರದ ಜ್ಞಾನ, ನಾವು ಬೇಡಿದರೆ ಆತ ಅದನ್ನು ಕೊಡಲು ಸಿದ್ಧ ಎನ್ನಲಾಗಿದೆ.
ಸಂತಾನ ಕರುಣಿಸುವ ಗೋಪಾಲ ಕೃಷ್ಣ
ತೆವಳುತ್ತಿರುವ ಕೃಷ್ಣನ ಪೂಜಿಸಿದರೆ, ಸಂತಾನ ಕರುಣಿಸುತ್ತಾನೆ ಎಂಬ ಪ್ರತೀತಿ ಮಕ್ಕಳಿಲ್ಲದ ದಂಪತಿಗಳು ಇಲ್ಲಿ ಬಂದು ನವನಿತ ಕೃಷ್ಣನನ್ನು ಪೂಜಿಸಿ ಮರದ ಅಥಾವ ಬೆಳ್ಳಿಯ ತೊಟ್ಟಿಲು ಕಟ್ಟಿ ಹರಕೆ ಹೊತ್ತರೆ ಮಕ್ಕಳಾಗುತ್ತಾರೆ ಎಂಬ ನಂಬಿಕೆಯಲ್ಲಿ ವ್ರತಾಚರಣೆ ಮಾಡುತ್ತಾರೆ.
ಅಪ್ರಮೇಯ ದೇವಾಲಯದ ಇತಿಹಾಸ
ಈ ದೇವಾಲಯದ ಮೂಲ ದೇವರು ಶ್ರೀ ವಿಷ್ಣು ಇಲ್ಲಿ ವಿಷ್ಣುವನ್ನು ಶ್ರೀ ಅಪ್ರಮೇಯ ಹಾಗು ಮಹಾಲಕ್ಷ್ಮೀ ಯನ್ನು ಅರವಿಂದವಲ್ಲಿ ಎಂಬ ಹೆಸರಿನಿಂದ ಪೂಜಿಸಲಾಗುತ್ತದೆ.
ಕಣ್ವಾ ನದಿಯ ದಡದಲ್ಲಿ ಮಳೂರು ಇದ್ದು ಈ ಗ್ರಾಮವು ಶ್ರೀ ಅಪ್ರಮೇಯಸ್ವಾಮಿ, ಅರವಿಂದವಲ್ಲಿ ಮತ್ತು ಅಂಬೆಗಾಲು ನವನೀತಾ ಕೃಷ್ಣ (ತೆವಳುತ್ತಿರುವ ಕೃಷ್ಣ) ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಈ ದೇವಾಲಯವನ್ನುಬಹುಶಃ 12 ನೇ ಶತಮಾನದಲ್ಲಿ ದಕ್ಷಿಣ ಭಾರತದ ತಮಿಳು ಆಡಳಿತಗಾರರಾದ ಚೋಳರ ಅವಧಿಯ ರಾಜನಾದ ಚೋಳ ಚಕ್ರವರ್ತಿ ರಾಜೇಂದ್ರ ಸಿಂಹ ನಿರ್ಮಿಸಿದನೆಂದು ಇತಿಹಾಸವಿದೆ. ಈ ದೇವಾಲಯವನ್ನು ಅಪ್ರಮೇಯನ ಸನ್ನಿಧಾನ ಎಂದು ಕರೆಯಲಾಗುತ್ತದೆ. ರಾಜವಂಶವು ನಿರ್ಮಿಸಿದ್ದಾರಂತೆ ವಿಗ್ರಹವನ್ನು ದ್ವೈತ ವೇದಾಂತದ ಪ್ರಮುಖ ಸಂತರಾಗಿದ್ದ ವ್ಯಾಸರಾಜ (ಅಕಾ ವ್ಯಾಸತಿರ್ಥ) ಸ್ಥಾಪಿಸಿದ್ದು ಎನ್ನಲಾಗಿದೆ
ಊರ ಹೆಸರಿನ ಇತಿಹಾಸ
ಶ್ರೀ ಅಪ್ರಮೇಯ ಸ್ವಾಮಿ ದೇವಾಲಯದ ಮುಖ್ಯ ದ್ವಾರ ಕಣ್ವಾ ನದಿಯ ದಡದಲ್ಲಿದೆ ಮತ್ತು ನದಿಯ ಭಾಗದ ಹಳ್ಳಿಯ ಪ್ರಮುಖ ಭಾಗವಾಗಿದೆ, ಆದ್ದರಿಂದ ಈ ಸ್ಥಳವನ್ನು ಮರಳೂರು ಎಂದು ಕರೆಯಲಾಗುತ್ತದೆ, ತಮಿಳು ಮೂಲದ “ಮನಲ್-ಉರ್” ಎಂದರೆ ಮರಳಿನ ಊರು ನಂತರ ಮರಳು ನಗರ, ನಂತರ ಕನ್ನಡದ ಮಳೂರು ಎಂದು ರೂಪಾಂತರವಾಗಿದೆ ಎಂದು ವಿವರಿಸುತ್ತಾರೆ.
ಮರಳಿನ ಮೇಲೆ ಭಗವಾನ್ ಅಪ್ರಮೇಯ ಸ್ವಾಮಿ ದೇವಾಲಯವನ್ನು ನಿರ್ಮಿಸಲಾಗಿದೆ ಎಂದು ದಂತಕಥೆಗಳು ಹೇಳುತ್ತವೆ, ಇದು ತಂಜಾವೂರಿನ ಬೃಹದೀಶ್ವರ ದೇವಾಲಯದಂತೆಯೇ ಬಲವಾದ ಅಡಿಪಾಯವನ್ನು ಹೊಂದಿಲ್ಲ ಎನ್ನುತ್ತಾರೆ.
ಸಂಗ್ರಹ ಬರಹ:- ಸುವರ್ಣಲಕ್ಷ್ಮೀ ಟೀಚರ್