ಶ್ರೀನಿವಾಸಪುರ:– ದ್ವಿಚಕ್ರವಾಹನದಲ್ಲಿ ಮನೆಗೆ ಹೋಗುತ್ತಿದ್ದ ಬಂಗಾರದ ವ್ಯಾಪಾರಿಯೊಬ್ಬನನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಹಲ್ಲೆ ನಡೆಸಿ ಬಂಗಾರ, ನಗದು ಕಿತ್ತುಕೊಳ್ಳಲು ಯತ್ನಿಸಿ ವಿಫರಾಗಿರುವ ಘಟನೆ ತಾಲ್ಲೂಕಿನ ಗುಂದೇಡು-ಲಕ್ಷ್ಮೀಪುರ ಕ್ರಾಸ್ ನಡುವೆ ಬೆಂಗಳೂರು-ಕಡಪಾ ರಸ್ತೆಯಲ್ಲಿ ನಡೆದಿರುತ್ತದೆ.
ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯನ್ನು ಗುಂದೇಡು ಗ್ರಾಮದ ಹರಿನಾಥ್ ರೆಡ್ಡಿ ಎಂದು ಗುರುತಿಸಲಾಗಿದೆ ಈತ ತಾಲ್ಲೂಕಿನ ಲಕ್ಷ್ಮೀಪುರ ಕ್ರಾಸ್ ನಲ್ಲಿ ಸಣ್ಣ ಮಟ್ಟದ ಬಂಗಾರದ ಅಂಗಡಿ ನಡೆಸುತ್ತಿದ್ದ.
ಎಂದಿನಂತೆ ಈತ ಸಂಜೆ ಅಂಗಡಿ ಮುಚ್ಚಿ ಮನೆಗೆ ಹಣ ಹಾಗೂ ಬಂಗಾರದ ಒಡವೇಗಳನ್ನು ಗ್ರಾಮದ ಮನೆಗೆ ತಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ 4 ಜನ ದುಷ್ಕರ್ಮಿಗಳು ಮಾರುತಿ ಹಳೇಯ ಜೆನ್ ಕಾರಿನಲ್ಲಿ ಆಗಮಿಸಿ ಲಾಂಗು, ಮಚ್ಚುಗಳಿಂದ ಹಲ್ಲೆ ನಡೆಸಿರುತ್ತರೆ ನಂತರ ಅವನ ಬಳಿ ಇದ್ದ ಹಣ, ಒಡವೇಗಳನ್ನು ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಹರಿನಾಥ್ ರೆಡ್ಡಿ ಮತ್ತು ದುಷ್ಕರ್ಮಿಗಳ ನಡುವೆ ಕೆಲ ಹೊತ್ತು ನೂಕಾಟ ತಳ್ಳಾಟಗಳು ನಡೆಯುತ್ತಿರುವಾಗ ಹರಿನಾಥ್ ಕಾರಿನ ಬೀಗವನ್ನು ತಗೆದು ಪಕ್ಕದ ಹೊಲಗಳಲ್ಲಿ ಬಿಸಾಡಿ ಸಹಾಯಕ್ಕಾಗಿ ದಾರಿ ಹೋಕರನ್ನು ಅಂಗಲಾಚಿದಾಗ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದದವರು ಸಹಾಯಕ್ಕೆ ಬರುವಷ್ಟರಲ್ಲಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬಂಗಾರದ ವ್ಯಾಪಾರಸ್ಥನ ಬಗ್ಗೆ ಮಾಹಿತಿ ಇರುವಂತವರ ಕೃತ್ಯ ಎನ್ನಲಾಗಿದೆ
ಸುದ್ದಿ ಸಹಕಾರ:- ನಂದೀಶ್