- ಶ್ರೀನಿವಾಸಪುರ ರಾಜಕಾರಣಕ್ಕೆ ಹೊಸ ಮುಖ ಶ್ರೀನಿವಾಸರೆಡ್ಡಿ
- ರೆಡ್ಡಿ-ಸ್ವಾಮಿ ವ್ಯಕ್ತಿ ರಾಜಕಾರಣದ ನಡುವೆ ಗುದ್ದಾಡಲು ಮತ್ತೊಬ್ಬ ರೆಡ್ಡಿ
- ಅತ್ತಿಕುಂಟೆ ರಾಜಶೇಖರೆಡ್ಡಿ ಕಾಲೇಜು ಸ್ನೇಹಿತ ಗುಂಜೂರುಶ್ರೀನಿವಾಸರೆಡ್ಡಿ
ಶ್ರೀನಿವಾಸಪುರ: ಶ್ರೀನಿವಾಸಪುರ ತಾಲೂಕನ್ನು ಹೊಸ ಅಲೆಯು ರಾಜಕೀಯದೊಂದಿಗೆ ಅಭಿವೃದ್ದಿ ಪಡಿಸಲು ಇಲ್ಲಿಗೆ ಬಂದಿರುವುದಾಗಿ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ರಾಜಕಾರಣಕ್ಕೆ ನೂತನವಾಗಿ ಆಗಮಿಸಿರುವ ಸಮಾಜಸೇವಕ ಗುಂಜೂರು ಶ್ರೀನಿವಾಸರೆಡ್ಡಿ ಹೇಳಿದರು ಅವರು ತಾಲೂಕಿನ ರಾಯಲ್ಪಾಡು ಹೋಬಳಿಯಲ್ಲಿ ಪ್ರವಾಸಮಾಡಿ ವಿವಿಧ ಹಂತಗಳಲ್ಲಿ ತೊಂದರೆಗೊಳಗಾದ ಸಂತ್ರಸ್ತರು/ಬಾದಿತರಿಗೆ ಹಣಕಾಸು ನೆರವು ನೀಡಿ ಮಾತನಾಡಿದ ಅವರು ತಾಲೂಕಿನಲ್ಲಿ ಜನತೆ ಬದಲಾವಣೆ ಬಯಸುತ್ತಿದ್ದಾರೆ ಇದಕ್ಕಾಗಿ ಸ್ನೇಹಿತರ ಸಲಹೆಯಂತೆ ಇಲ್ಲಿಗೆ ಬಂದಿರುವುದಾಗಿ ಹೇಳಿದರು. ಇಲ್ಲಿ ನಡೆಯುತ್ತಿರುವ ವ್ಯಕ್ತಿ ರಾಜಕಾರಣದ ಅರಿವು ಇದೆ ಇಲ್ಲಿನ ರಾಜಕೀಯ ಸ್ಥಿತಿ ಗತಿಗಳು ಜನತೆ ನಾಡಿ ಮಿಡಿತದ ಮಾಹಿತಿ ಇದೆ ಜನತೆ ಆಶಯಗಳಂತೆ ರಾಜಕಾರಣ ಮಾಡುವ ಉದ್ದೇಶದಿಂದ ತಾಲೂಕಿಗೆ ಬಂದಿರುವುದಾಗಿ ಹೇಳಿದರು.
ವಾಪಸ್ಸು ಹೋಗುವನಲ್ಲ ಶ್ರೀನಿವಾಸರೆಡ್ಡಿ
ಇದುವರಿಗೂ ಕ್ಷೇತ್ರಕ್ಕೆ ಯಾರು ಬಂದಿದ್ದರೊ ಯಾರು ಹೋಗಿದ್ದಾರೋ ನಾನು ಈ ಬಗ್ಗೆ ಚರ್ಚೆ ಮಾಡಲ್ಲ ಅದರ ಅವಶ್ಯಕತೆ ನನಗೆ ಬೇಡ ನಾನು ಈ ಕ್ಷೇತ್ರದಲ್ಲಿ ರಾಜಕೀಯ ಮಾಡಲು ಬಂದಿರುವೆ ಇಲ್ಲೇ ಇರುವೆ ಇಲ್ಲೆ ಮನೆ ಮಾಡುತ್ತೇನೆ ಇಲ್ಲಿಯೇ ಇರುತ್ತೇನೆ ಎಂದ ಅವರು ನಾನು ಯಾವುದೆ ರಾಜಕೀಯ ಪಕ್ಷ ನಂಬಿ ಬಂದವನಲ್ಲ ನಾನು ಬಂದಿರುವುದು ಇಲ್ಲಿನ ಜನರನ್ನು ನಂಬಿ ಬಂದಿರುತ್ತೇನೆ ಅವರ ಅಶಿರ್ವಾದ ಪಡೆದು ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುತ್ತೇನೆ ಎಂದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಪತಿ ಯಲ್ದೂರು ಹೋಬಳಿ ಪ್ರಭಾವಿ ರಾಜಕಾರಣಿ ಅತ್ತಿಕುಂಟೆರಾಜಶೇಖರೆಡ್ಡಿ ಮಾತನಾಡಿ ಶ್ರೀನಿವಾಸಪುರ ಕ್ಷೇತ್ರದಲ್ಲಿ ಜನತೆ ಬದಲಾವಣೆಯ ನೀರಿಕ್ಷೇಯಲ್ಲಿದ್ದು ಈ ಹಿನ್ನಲೆಯಲ್ಲಿ ಗುಂಜೂರುಶ್ರೀನಿವಾಸರೆಡ್ಡಿ ಅವರನ್ನು ಕ್ಷೇತ್ರಕ್ಕೆ ನಾವೇ ಕರೆ ತಂದಿರುವುದಾಗಿ ತಿಳಿಸಿದರು. ಸಂಬಾವಿತ ವ್ಯಕ್ತಿ ವಿದ್ಯಾವಂತರೂ ಆಗಿರುವ ಶ್ರೀನಿವಾಸರೆಡ್ಡಿ ಕಾಲೇಜು ದಿನಗಳಲ್ಲಿ ಗ್ರಾಮಪಂಚಾಯಿತಿ ಸದಸ್ಯರಾಗಿ ಅಧ್ಯಕ್ಷರಾಗಿ ನಂತರ ಕಾನೂನು ಪದವಿ ಓದುವಾಗ ತಾಲೂಕು ಪಂಚಾಯಿತಿ ಅಧ್ಯಕ್ಷನಾಗಿ ರಾಜಕೀಯ ಅನುಭವ ಇದ್ದು ನಂತರದಲ್ಲಿ ಬಾಗೇಪಲ್ಲಿ ಕ್ಷೇತ್ರದಲ್ಲಿ ರಾಜಕಾರಣ ಮಾಡುತ್ತಿದ್ದು ಇಲ್ಲಿನ ಜನರ ಅಶೆಯದಂತೆ ಇಲ್ಲಿಗೆ ಕರೆ ತಂದಿರುವುದಾಗಿ ತಿಳಿಸಿದರು.
ಇದಕ್ಕೂ ಮುಂಚೆ ಅವರು ತಾಲೂಕಿನ ಖ್ಯಾತ ದೇವಸ್ಥಾನ ಗನಿಬಂಡೆ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರವಾಸ ಪ್ರಾರಂಭಿಸಿದರು.
ಯಲ್ದೂರು ಹೋಬಳಿ ಯಮ್ಮನೂರು ಗ್ರಾಮದಲ್ಲಿ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿದರು. ಇತ್ತಿಚಿಗಷ್ಟೆ ಮೃತಪಟ್ಟ ಡ್ಯಾನ್ಸ್ ಮಾಸ್ಟರ್ ಸಂತೋಷ್ ಕುಟುಂಬಕ್ಕೆ ಹಣಕಾಸು ನೇರವು ನೀಡಿದರು.
ಈ ಸಂದರ್ಭದಲ್ಲಿ ವಕೀಲ ನರಸಿಂಹ,ಲಕ್ಷ್ಮಣ್,ಮಣಿ ಸುನಿಲ್ ಮುಂತಾದವರು ಇದ್ದರು.