ತಿರುಮಲ:-ಭಾನುವಾರ ಸುರಿದ ಭಾರೀ ಮಳೆಯಿಂದಾಗಿ ತಿರುಮಲ ಬೆಟ್ಟದಲ್ಲಿ ಶ್ರಾವಣ ಹುಣ್ಣಿಮೆ ಭಾನುವಾರದಂದು ನಡೆಯಬೇಕಿದ್ದ ಗರುಡ ವಾಹನ ಸೇವೆಯನ್ನು ಪೊರೈಸಲಾಗಲಿಲ್ಲ.
ಪ್ರತಿ ಹುಣ್ಣಿಮೆಯಂದು ನಡೆಸುತ್ತಿದ್ದ ಗರುಡ ವಾಹನ ಸೇವೆ ಶ್ರಾವಣ ಮಾಸದ ಹುಣ್ಣಿಮೆಯಂದು
ಶ್ರೀವಾರಿ ಉತ್ಸವ ಮೂರ್ತಿಯನ್ನು ಗರುಡನ ಮೇಲೆ ಕುರಿಸಿ ವಿಶೇಷ ಆಭರಣಗಳಿಂದ ಮಲಯಪ್ಪಸ್ವಾಮಿ ಅವತಾರದಲ್ಲಿ ಅಲಂಕರಿಸಿ ಭಕ್ತರಿಗೆ ದರುಶನಕ್ಕೆ ಏರ್ಪಾಟು ಮಾಡಲಾಗುತ್ತಿತ್ತು.ಆದರೇ ಸುರಿದ ಕುಂಭದ್ರೋಣ ಮಳೆಯಿಂದಾಗಿ ಶ್ರೀ ವೆಂಕಟೇಶ್ವರನನ್ನು ಹೊತ್ತ ವಾಹನವು ಮುಂದೆ ಸಾಗಲು ಸಾಧ್ಯವಾಗದ ಕಾರಣ ರಾತ್ರಿ ಏಳು ರಿಂದ ಎಂಟು ಗಂಟೆಯವರೆಗೆ ವಾಹನ ಮಂಟಪದಲ್ಲಿಯೇ ಇರಿಸಲಾಗಿ ಅರ್ಚಕರು ಅಲ್ಲಿಯೇ ಪೂಜಾಕೈಂಕರ್ಯಗಳನ್ನು ನೇರವೇರಿಸಿ ಶ್ರೀವಾರಿ ಉತ್ಸವ ಮೂರ್ತಿಯನ್ನು ದೇವಾಲಯಕ್ಕೆ ಕರೆದೊಯ್ದರು.ಸುರಿಯುತ್ತಿರುವ ಮಳೆಯಲ್ಲಿಯೇ ನೆನೆದುಕೊಂಡು ಕೆಲ ಭಕ್ತರು ದೇವರ ದರುಶನ ಪಡೆದರು.
ತಿರುಮಲದಲ್ಲಿ ಭಾನುವಾರ 22,832 ಭಕ್ತರು ಶ್ರೀನಿವಾಸನ ದರ್ಶನ ಪಡೆದಿದ್ದು 10,889 ಭಕ್ತರು ಮುಡಿ ಅರ್ಪಿಸಿರುತ್ತಾರೆ. ಶ್ರೀವಾರಿ ಹುಂಡಿಗೆ ಅಂದಾಜು 2.33 ಕೋಟಿ ರೂ ಸಂಗ್ರಹವಾಗಿರುತ್ತದೆ.