ಶ್ರೀನಿವಾಸಪುರ:– ಬೆಸ್ಕಾಂ ಬಾಕಿ ಹಣ ಕೇಳಿದ್ದಿಕ್ಕೆ ಬೆಸ್ಕಾಂ ಮೀಟರ್ ರೀಡರ್ ನನ್ನು ಮನಸೋ ಇಚ್ಚೆ ಥಳಿಸಿರುವ ಘಟನೆ ಶ್ರೀನಿವಾಸಪುರ ತಾಲೂಕಿನ ಗೌವನಿಪಲ್ಲಿ ಬೆಸ್ಕಾಂ ವ್ಯಾಪ್ತಿಯ ಕೊತ್ತೂರು ಗ್ರಾಮದಲ್ಲಿ ನಡೆದಿದೆ ಗಾಯಗೊಂಡ ಮೀಟರ್ ರೀಡರ್ ನನ್ನು ನಾಗೇಶ್ ಎಂದು ಗುರುತಿಸಲಾಗಿದೆ.
ಹಲ್ಲೆ ಮಾಡಿದವರನ್ನು ಕೊತ್ತೂರು ಗ್ರಾಮದ ಉತ್ತಣ್ಣ ಹಾಗು ಅವರ ಮಗ ಶ್ರೀನಾಥ್ ಎನ್ನಲಾಗಿದ್ದು ಉತ್ತಣ್ಣ 13 ಸಾವಿರ ಕರೆಂಟ್ ಬಿಲ್ ಬಾಕಿ ಉಳಿಸಿಕೊಂಡಿದ್ದ ಸಂಬಂದ ವಿದ್ಯುತ್ ಪೂರೈಕೆ ನಿಲ್ಲಿಸಲಾಗಿತ್ತು ಇದರಿಂದ ಕುಪಿತರಾದ ಉತ್ತಣ್ಣ ಮತ್ತು ಮಗ ಶ್ರೀನಾಥ್ ಸೋಮವಾರ ಗ್ರಾಮಕ್ಕೆ ಮೀಟರ್ ರಿಡಿಂಗ್ ಪಡೆದು ಮಾಡಿ ಬಿಲ್ ನೀಡುವ ಕಾರ್ಯಯಕ್ಕೆ ಬಂದಿದ್ದ ಬಂದ ಮೀಟರ್ ರಿಡರ್ ನಾಗೇಶ್ ಜೊತೆ ತಂದೆ ಮಗ ವ್ಯಾಜ್ಯ ತಗೆದು ಮಾತಿನ ಚಕಮಕಿ ನಡೆಸಿ ತಳ್ಳಾಡಿಕೊಂಡಿದ್ದಾರೆ ಒಬ್ಬಂಟಿಯಾಗಿದ್ದ ನಾಗೇಶ್ ಗಾಯಗೊಂಡಿದ್ದು, ಹೊಡೆದಾಟದ ವಿಡಿಯೊ ಮೊಬೈಲ್ ನಲ್ಲಿ ಸೆರೆಯಾಗಿದೆ ಎಲ್ಲೆಡೇ ವೈರಲ್ ಆಗಿದೆ ಗಾಯಗೊಂಡಿರುವ ನಾಗೇಶ್ ಗೌನಿಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಈ ಸಂಬಂದ ಗೌನಿಪಲ್ಲಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಸ್ಕಾಂ ಎ.ಇ.ಇ ರಾಮತೀರ್ಥಂ ಹಾಗು ಬೆಸ್ಕಾಂ ನೌಕರರ ಸಂಘದ ತಾಲೂಕು ಅಧ್ಯಕ್ಷ ಆರ್.ಚಂದ್ರು ,ಕಾರ್ಯದರ್ಶಿ ಆರ್.ಕೆ.ಬಾಬು,ಸೆಕ್ಷನ್ ಅಧಿಕಾರಿ ಆನಂದ್ ಗೌವನಿಪಲ್ಲಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಳು ನಾಗೇಶ್ ಅವರಿಗೆ ಸ್ವಾಂತನ ಹೇಳಿ ಘಟನೆಯನ್ನು ಖಂಡಿಸಿದ್ದಾರೆ ಇಂತಹ ಘಟನೆಗಳು ಮುಂದೆ ನಡೆಯದಂತೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಕೋರಿದ್ದಾರೆ.
ವರದಿ:-ಹರ್ಷವರ್ಧನ್,ಶ್ರೀನಿವಾಸಪುರ