ಇಬ್ಬರು ಘಟಾನು ಘಟಿ ಶಾಸಕ ಹಾಗು ಸಚಿವರ ನಡುವಿನ ಗುದ್ದಾಟ ಜಿಲ್ಲಾ ಹಾಗು ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸರ್ಕಾರಿ ಸೇವೆ ಸಾಕಪ್ಪ ಅನಿಸಿದಿಯಂತೆ, ಅತ್ತ ದರಿ ಇತ್ತ ಪುಲಿಯಂತಾಗಿದೆ ಎನ್ನುತ್ತಾರೆ.
ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಬುಧವಾರ ಉದ್ಘಾಟನೆಯಾಗುತ್ತಿರುವ ಮೂರು ಪ್ರಾಥಮಿಕ ಆರೋಗ್ಯಗಳ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಶ್ರೀನಿವಾಸಪುರದ ಸ್ವಾಮಿ-ರೆಡ್ಡಿಯ ನಡುವಿನ ವ್ಯಕ್ತಿಗತ ರಾಜಕೀಯದ ಕಪ್ಪು ಛಾಯೆ ಬಿಳುವಂತಿದೆ.
ಕಳೆದವಾರವಷ್ಟೆ ಸ್ಥಳಿಯ ಶಾಸಕ ರಮೇಶಕುಮಾರ್ ನೇತೃತ್ವದಲ್ಲಿ ಮೂರು ಆಸ್ಪತ್ರೆಗಳನ್ನು ಉದ್ಘಾಟೆನೆ ಆಗಿದೆ. ಅಂದು ನಡೆದ ಕಾರ್ಯಕ್ರಮಕ್ಕೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಬರಬೇಕಾಗಿತ್ತು, ಅಂದು ಅವರು ಮುಖ್ಯಮಂತ್ರಿಗಳೊಂದಿಗೆ ದೆಹಲಿಗೆ ತೆರಳಿದ್ದ ಕಾರಣ ಆರೋಗ್ಯ ಸಚಿವರ ಸೂಚನೆಯಂತೆ ಕಾರ್ಯಕ್ರಮವನ್ನು ರದ್ದುಪಡಿಸಲಾಗಿತ್ತು, ಅದರೂ ಶಾಸಕ ರಮೇಶ್ಕುಮಾರ್ ನಿಗದಿತ ದಿನಾಂಕದಂದು ತಾಲೂಕಿನ ಲಕ್ಷ್ಮಿಸಾಗರ,ಬೈರಗಾನಪಲ್ಲಿ ಹಾಗು ಮುದುವಾಡಿ ಮೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಟೇಪು ಕತ್ತರಿಸಿ ಪೂಜೆ ಸಲ್ಲಿಸಿ ಸರಳವಾಗಿ ಉದ್ಘಾಟಿಸಿದರು.ಅಂದು ಶಾಸಕರು ನಡೆಸಿದ ಕಾರ್ಯಕ್ರಮದಲ್ಲಿ ಇರಬೇಕಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಮತ್ತು ಸಂಸದ ಎಸ್.ಮುನಿಸ್ವಾಮಿ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿನ ರಾಜಕೀಯ ಸೂಕ್ಷ್ಮತೆಯ ಅರಿವು ಇದ್ದ ಅವರಿಬ್ಬರು ಪ್ರಾಥಮಿಕ ಆರೋಗ್ಯಗಳ ಲೋಕಾರ್ಪಣೆ ಕಾರ್ಯಕ್ರಮದಿಂದ ದೂರ ಉಳಿಯುವ ಮೂಲಕ ರಾಜಕೀಯ ಜಾಣ್ಮೆಯ ನಿಲವು ತಳೆದು ಬುದ್ದಿವಂತಿಗೆ ಮೆರೆದರು..
ಈಗ ಮತ್ತೆ ಆದೇ ಮೂರು ಆಸ್ಪತ್ರೆಗಳ ಉದ್ಘಾಟನೆಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸೂಚನೆಯಂತೆ ಸೆ.1 ರಂದು ಬುಧವಾರ ಕಾರ್ಯಕ್ರಮವನ್ನು ಕೋಲಾರ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಸಮಯ ನಿಗಧಿಪಡಿಸಿದ್ದಾರೆ ಹಾಲಿ ಶಾಸಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವುದು ಸಂಪ್ರದಾಯವಾಗಿದೆ.ಅದರಂತೆ ಹಾಲಿ ಶಾಸಕ ರಮೇಶಕುಮಾರ್ ಮೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉದ್ಘಾಟೆನೆಯ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರಾಗಿ ಅಧ್ಯಕ್ಷತೆ ವಹಿಸುವುದು ಶಿಷ್ಠಾಚಾರ ಇವರೊಟ್ಟಿಗೆ ಸಂಸದ, ಜಿಲ್ಲಾಉಸ್ತುವಾರಿ ಸಚಿವ, ವಿಧಾನಪರಿಷತ್ ಸದಸ್ಯರು ಇತರೆ ಅಧಿಕಾರ ರೂಡ ಸ್ಥಳಿಯ ಸಂಸ್ಥೆ ಮುಖ್ಯಸ್ಥರು ಸಂಬಂದಿಸಿದ ಇಲಾಖೆ ಮುಖ್ಯ ಅಧಿಕಾರಿಗಳು ಇರುವುದು ಸರ್ಕಾರದ ಕಾರ್ಯಕ್ರಮದ ಶಿಶ್ಟಾಚಾರದ,
ಆದರೆ ಶ್ರೀನಿವಾಸಪುರ ಕ್ಷೇತ್ರದ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿಯವರನ್ನು ಕಾರ್ಯಕ್ರಮಕ್ಕೆ ಖುದ್ದು ಆರೋಗ್ಯ ಸಚಿವರು ವೈಯುಕ್ತಿಕವಾಗಿ ಆಹ್ವಾನ ಮಾಡಿರುವುದಾಗಿ ಹೇಳಲಾಗುತ್ತಿದೆ.
ವೈದ್ಯಕೀಯ ಸಚಿವ ಡಾ.ಸುಧಾಕರ್ ಮತ್ತು ಶಾಸಕ ರಮೇಶ್ ಕುಮಾರ್ ನಡುವಿನ ರಾಜಕೀಯ ಭಿನ್ನಾಭಿಪ್ರಾಯಗಳು ಸರ್ಕಾರಿ ಕಾರ್ಯಕ್ರಮದ ಮದ್ಯ ಅನಾವರಣ ವಾಗುತ್ತದ!
ರಮೇಶಕುಮಾರ್ ಮತ್ತು ವೆಂಕಟಶಿವಾರೆಡ್ಡಿ ಕಳೆದ ನಾಲ್ಕು ದಶಕಗಳಿಂದ ಸ್ಥಳೀಯ ರಾಜಕೀಯ ಎದುರಾಳಿಗಳಾಗಿದ್ದಾರೆ. ಶತೃವಿನ ಶತೃ ಮಿತ್ರ ಎಂಬುವಂತೆ ಸಚಿವ ಸುಧಾಕರ್, ವೆಂಕಟಶಿವಾರೆಡ್ಡಿಯವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದು ಸಾರ್ವಜಕವಾಗಿ ಸಾಕಷ್ಟು ಚರ್ಚೆಗೆ ದಾರಿಯಾಗಿದೆ.
ಜೆಡಿಎಸ್ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿಯವರಿಗೆ ಆಹ್ವಾನ ನೀಡಿ ಪಟ್ಟಣ ಸೇರಿದಂತೆ ಕಾರ್ಯಕ್ರಮ ನಡೆಯುವ ಊರುಗಳಲ್ಲಿ ವೆಂಕಟಶಿವಾರೆಡ್ಡಿಯೊಂದಿಗೆ ಸಚಿವ ಸುಧಾಕರ್ ಪೋಟೋಗಳು ಇರುವ ಪ್ಲೇಕ್ಸುಗಳ ಆರ್ಭಟ ಜೋರಾಗಿದೆ ಇದು ಶಾಸಕ ರಮೇಶ್ಕುಮಾರ್ ರವರ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ. ಯಾವ ಮಟ್ಟದಲ್ಲಿ ಆಕ್ರೋಶ ಜ್ವಾಲೆಯಾಗಿ ಹೊರಹೊಮ್ಮುತ್ತಿದೆ ಅಂದರೆ ಫೇಸ್ ಬುಕ್.ವ್ಯಾಟ್ಸಾಪ್ ಗ್ರೂಪುಗಳಲ್ಲಿ ಎಲ್ಲೆ ಮೀರಿದ ಭಾಷೆ ಬಳಕೆಯಾಗುತ್ತಿದೆ ಇದರ ತಾರ್ಕಿಕ ಯಾವಾಗ ಕಾಣುತ್ತದೋ ಎನ್ನಲಾಗಿದೆ
ಮೂರು ಆರೋಗ್ಯ ಕೇಂದ್ರಗಳ ಉದ್ಘಾಟನೆಯೊಂದಿಗೆ ಪಟ್ತಣದ ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಜನರೇಷನ್ ಪ್ಲಾಂಟ್ ಉದ್ಘಾಟನೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಶಾಸಕ ಕೆ.ಆರ್.ರಮೇಶ್ಕುಮಾರ್ ಅಧ್ಯಕ್ಷತೆವಹಿಸಲಿದ್ದಾರೆ. ಶಿಷ್ಠಾಚಾರದಂತೆ ಆರೋಗ್ಯ ಇಲಾಖೆಯಿಂದ ಆಹ್ವಾನ ಪತ್ರಿಕೆ ಮುದ್ರಿಸಲಾಗಿದೆ.
ಕೋಲಾರ ತಾಲ್ಲೂಕಿನ ಮುದುವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಲೋಕಾರ್ಪಣೆ ಕಾರ್ಯಕ್ರಮದ ಸ್ಥಳಕ್ಕೆ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಂಗಳವಾರ ಭೇಟಿ ಮಾಡಿ ಕಾರ್ಯಕ್ರಮದ ರೂಪರೇಷಗಳ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದಿರುವ ಫೋಟೊಗಳು ವ್ಯಾಟ್ಸಪ್, ಫೇಸ್ಬುಕ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಲಕ್ಷ್ಮೀಸಾಗರ ಆರೋಗ್ಯ ಕೇಂದ್ರದ ಬಳಿ ವೆಂಕಟಶಿವಾರೆಡ್ದಿಯವರೊಂದಿಗೆ ಹಿರಿಯ ಕಾಂಗ್ರೆಸ್ ಮುಖಂಡ ಶೇಷಾಪುರಗೋಪಾಲ್ ಖುದ್ದು ಹಾಜರಾಗಿದ್ದು ಮತ್ತೊಂದು ವಿಶೇಷ ಆದರೆ ಇವೆಲ್ಲವೂ ರಮೇಶ್ಕುಮಾರ್ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಂದ ಕೆಂಗಣ್ಣಿಗೆ ಗುರಿಯಾಗಿದೆ ಉದ್ಘಾಟನೆಯಾಗಿರುವ ಕಾರ್ಯಕ್ರಮಕ್ಕೆ ಪರ್ಯಾಯ ಕಾರ್ಯಕ್ರಮ ಆಯೋಜನೆ ಮಾಡುವ ಅವಶ್ಯಕತೆ ಬೇಕ ಎಂದು ಜಾಲತಾಣಗಳಲ್ಲಿ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.