- ಶ್ರೀನಿವಾಸಪುರ-ಚಿಂತಾಮಣಿ ತಾಲೂಕುಗಳ ಮೂಲಕ ಯೋಜನೆ ರೂಪಿಸಿತ್ತು
- ಬದಲಾದ ಕಾಘಟ್ಟದಲ್ಲಿ ಈಗಿನ ಆಂಧ್ರ ಸರ್ಕಾರ ಕಡಪಾ-ಅನಂತಪುರ ಮಾರ್ಗವಾಗಿ ರೂಪಿಸಲಾಗಿದೆ
- ಸ್ಥಳಿಯ ಸರ್ಕಾರಗಳು ಒಪ್ಪಿದರೆ ಮಾತ್ರ ಸಾಧ್ಯ ಕೇಂದ್ರ ಸಚಿವ
- ಹಿಂದಿನ ಸರ್ಕಾರ ರೂಪಿಸಿದ ಮಾರ್ಗದಂತೆ ಎಕ್ಸ್ ಪ್ರೆಸ್ ವೇ ನಿರ್ಮಾಣಕ್ಕೆ ಒತ್ತಾಯ
- ಸಾರ್ವಜನಿಕ ಗಮನ ಸೇಳೆದ ಯುವಶಕ್ತಿ ಯುವಕರು
- ಹಳೇ ಮಾರ್ಗದಲ್ಲಿ ಎಕ್ಸ್ ಪ್ರೆಸ್ ವೇ ನಿರ್ಮಾಣಕ್ಕೆ ವಕೀಲ ಶರ್ಮ ಕೃಷಿ
ಶ್ರೀನಿವಾಸಪುರ:-ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಮೂಲಕ ಹಾದು ಹೋಗಲಿದ್ದ ವಿಜಯವಾಡ-ಬೆಂಗಳೂರು ನಾಲ್ಕುಪಥ ಎಕ್ಸ್ ಪ್ರೆಸ್ ವೇ ರಸ್ತೆ ಮಾರ್ಗಕ್ಕೆ ಆಂಧ್ರದ ಈಗಿನ ಸರ್ಕಾರ ಅಡ್ಡಗಾಲು ಹಾಕಿ ಮಾರ್ಗ ಬದಲಾವಣೆ ಮಾಡಿಸಿಕೊಂಡಿದೆ ಈಗ ನೂತನ ಮಾರ್ಗದಂತೆ ಆಂಧ್ರದ ಕಡಪಾ ಅನಂತಪುರ ಮೂಲಕ ಸಾಗಲು ಕೈಗೊಂಡಿರುವಂತ ನಿರ್ಧಾರವನ್ನು ಕೇಂದ್ರ ಭೂ ಸಾರಿಗೆ ಸಚಿವಾಲಯ ಕೈ ಬಿಟ್ಟು ಹಿಂದೇ ಆಂಧ್ರ ಸರ್ಕಾರ ರೂಪಿಸಿರುವಂತ ಮಾರ್ಗಸೂಚಿಯಂತೆ ಮುಂದುವರಿಸಬೇಕು ಎಂದು ಇತ್ತಿಚಿಗೆ ದೆಹಲಿಯಲ್ಲಿ ನಡೆದಂತ ರಾಷ್ಟ್ರೀಯ ರಸ್ತೆ ಸುರಕ್ಷತಾ ಪರಿಷತ್ ಸಭೆಯಲ್ಲಿ ಪ್ರಸ್ತಾಪವಾಗಿ ಚರ್ಚೆ ನಡೆದಿರುತ್ತದೆ.
ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ನಡೆದಂತ ರಾಷ್ಟೀಯ ರಸ್ತೆ ಸುರಕ್ಷತಾ ಪರಿಷತ್ ಸಭೆಯಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಪರಿಷತ್ ಗೆ ಕರ್ನಾನಾಟಕದಿಂದ ನಾಮ ನಿರ್ದೇಶಕ ಸದಸ್ಯರಾಗಿರುವ ಶ್ರೀನಿವಾಸಪುರ ಮೂಲದ ವಕೀಲ ನಟರಾಜಶರ್ಮ ಇತ್ತಿಚಿನ ದಿನಗಳಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವಂತ ರಸ್ತೆ ಅಪಘಾತಗಳ ಕುರಿತಾಗಿ ವಿಷಯ ಪ್ರಸ್ತಾಪಿಸಿದ್ದಾರೆ. ಈ ಭಾಗದ ಜಿಲ್ಲೆಗಳಲ್ಲಿ ಸಾರ್ವಜನಿಕರು ಸಂಚರಿಸಲು ಉತ್ತಮ ರಸ್ತೆ ಅಗತ್ಯ ಇದೆ ಇದಕ್ಕಾಗಿ ರಸ್ತೆ ಸುರಕ್ಷ ನಿಯಮಾವಳಿಗಳಂತೆ ಅಂತರಾಜ್ಯ ರಸ್ತೆಗಳ ನಿರ್ಮಾಣ ಅಗ್ಯತ್ಯವಾಗಿ ಆಗಬೇಕಿದೆ ಎಂದು ಒತ್ತಾಯಿಸಿದ್ದಾರೆ.
ವಿಜಯವಾಡ-ಬೆಂಗಳೂರು ನಾಲ್ಕುಪಥ ಎಕ್ಸ್ ಪ್ರೆಸ್ ವೇ ರಸ್ತೆಯನ್ನು ಆಂಧ್ರದ ಹಿಂದಿನ ಸರ್ಕಾರ ಆಂಧ್ರದ ಮದನಪಲ್ಲಿ, ಕೋಲಾರ ಜಿಲ್ಲೆಯ ತಾಡಿಗೊಳ್ ಕ್ರಾಸ್,ಚಿಕ್ಕಬಳ್ಳಾಪುರ ಜಿಲ್ಲೆಯ ಮಾಡಿಕೆರಿ ಕ್ರಾಸ್, ಹೆಚ್ ಕ್ರಾಸ್ ಮಾರ್ಗವಾಗಿ ದೆವನಹಳ್ಳಿ ಹಾಗು ಹೋಸಕೋಟೆ ಮೂಲಕ ಬೆಂಗಳೂರು ತಲುಪುವ ಕುರಿತಾಗಿ ರೂಪುರೇಷೆ ತಯಾರಾಗಿತ್ತು ಆದರೆ ಈಗ ರಸ್ತೆ ಮಾರ್ಗ ಬದಲಾವಣೆ ಆಗುತ್ತಿದೆ ಇದು ಈ ಭಾಗದಲ್ಲಿ ತೀರಾ ಅಗತ್ಯವಾಗಿ ಆಗಬೇಕಾದ ರಸ್ತೆ ಎಂದು ಸಚಿವರ ಬಳಿ ಪ್ರಸ್ತಾಪಿಸಿದ್ದು ಇದಕ್ಕೆ ಸಚಿವರು ಪ್ರತಿಕ್ರಿಯಿಸಿ ನಾಲ್ಕುಪಥ ರಸ್ತೆ ಎಕ್ಸ್ ಪ್ರೆಸ್ ವೇ ವಿಜಯವಾಡ ದಿಂದ ಬೆಂಗಳೂರು ರಸ್ತೆ ಈಗಿನ ಆಂಧ್ರದ ಸರ್ಕಾರ ವಿಜಯವಾಡ ಕಡಪಾ ಮಾರ್ಗವಾಗಿ ಅನಂತಪುರ ಮೂಲಕ ಬೆಂಗಳೂರಿಗೆ ಮಾರ್ಗ ಬದಲಾಯಿಸಿದೆ, ಹಿಂದೆ ವಿಜಯವಾಡ ಕಡಪ ಮದನಪಲ್ಲಿ ಮಾರ್ಗವಾಗಿ ಕೋಲಾರ ಜಿಲ್ಲೆಯ ತಾಡಿಗೊಳ್ ಕ್ರಾಸ್,ಚಿಕ್ಕಬಳ್ಳಾಪುರ ಜಿಲ್ಲೆಯ ಮಾಡಿಕೆರಿ ಕ್ರಾಸ್, ಹೆಚ್ ಕ್ರಾಸ್ ಮಾರ್ಗವಾಗಿ ದೆವನಹಳ್ಳಿ ಹಾಗು ಹೋಸಕೋಟೆ ಮೂಲಕ ಬೆಂಗಳೂರು ತಲುಪುವ ಬಗ್ಗೆ ಯೋಜನೆ ರೂಪಿಸಿ ಅದಕ್ಕೆ ಡಿ.ಪಿ.ಆರ್ ಸಹ ತಯಾರಾಗಿತ್ತು, ಈಗಿನ ಆಂಧ್ರ ಸರ್ಕಾರ ಮಾರ್ಗ ಬದಲಾವಣೆ ನಿರ್ಧಾರದಿಂದ ನಾವೇನು ಮಾಡಲು ಸಾದ್ಯವಾಗದು ಸ್ಥಳೀಯ ಸರ್ಕಾರಗಳು ಒಪ್ಪಿಗೆ ಸೂಚಿಸಿದರಷ್ಟೆ ರಸ್ತೆ ಯೊಜನೆ ಸಾದ್ಯ ಎಂದಿದ್ದು ಇದಕ್ಕೆ ವಕೀಲ ಶರ್ಮಾ ತಕ್ಷಣ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಅವರನ್ನು ಭೇಟಿ ಮಾಡಿ ವಿಜಯವಾಡ -ಬೆಂಗಳೂರು ಎಕ್ಸ್ ಪ್ರೆಸ್ ವೇ ಕುರಿತಾಗಿ ಪ್ರಸ್ತಾಪಿಸಿ ಸಾದ್ಯಸಾದ್ಯತೆಗಳು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಅರ್ಥಿಕ ಸಾಮಾಜಿಕ ಅಭಿವೃದ್ದಿಗಳ ಕುರಿತಾಗಿ ಮನವರಿಕೆ ಮಾಡಕೊಟ್ಟ ಹಿನ್ನಲೆಯಲ್ಲಿ ಸ್ಪಂದಿಸಿದ ಕೇಂದ್ರ ಸಚಿವ ಜೋಷಿಯವರು ಈ ವಿಚಾರವನ್ನು ಆಂಧ್ರದ ರಾಜಂಪೇಟ ಸಂಸದ ಹಾಗು ಲೋಕಸಭೆಯಲ್ಲಿ ಯೈ.ಎಸ್.ಆರ್.ಸಿ.ಪಿ ಪಕ್ಷದ ಸಭಾ ನಾಯಕ ಆಗಿರುವ ಮಿಥನ್ ರೆಡ್ಡಿ ಅವರೊಂದಿಗೆ ಮಾತನಾಡಿ ನಿರ್ಧಾರ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಶರ್ಮಾ ವಿವರಿಸಿದ್ದಾರೆ. ಅದರಂತೆ ಮುಂದಿನ ದಿನಗಳಲ್ಲಿ ಕೋಲಾರದ ಸಂಸದ ಮುನಿಸ್ವಾಮಿ,ಚಿಕ್ಕಬಳ್ಳಾಪುರ ಸಂಸದ ಬಚ್ಚೇಗೌಡ,ರಾಜಂಪೇಟ ಸಂಸದ ಮಿಥುನ್ ರೆಡ್ಡಿ, ಮದನಪಲ್ಲಿ ಶಾಸಕ ನವಾಜ್ ಪಾಷ ಅವರುಗಳನ್ನು ಸಹ ಖುದ್ದಾಗಿ ಭೇಟಿ ಮಾಡಿ ಸಹಕಾರ ಕೋರುವುದಾಗಿ ತಿಳಿಸಿದರು.
ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ಬಿಟ್ಟು ಹೋಗುತ್ತಿರುವ ವಿಜಯವಾಡ-ಬೆಂಗಳೂರು ನಾಲ್ಕುಪಥ ಎಕ್ಸ್ ಪ್ರೆಸ್ ವೇ ರಸ್ತೆಯನ್ನು ಮತ್ತೆ ಹಳೇಯ ಮಾರ್ಗದಲ್ಲಿಯೇ ಸಾಗುವಂತೆ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಯುವಶಕ್ತಿ ಪದಾಧಿಕಾರಿಗಳಾದ ಶಿವಪ್ರಕಾಶ್ ರೆಡ್ಡಿ ರಮೇಶಬಾಬು ಮುಂತಾದವರು ರಾಷ್ಟ್ರೀಯ ರಸ್ತೆ ಸುರಕ್ಷತಾ ಪರಿಷತ್ ನಾಮ ನಿರ್ದೇಶಕ ಸದಸ್ಯ ನಟರಾಜಶರ್ಮ ಅವರಿಗೆ ಮನವಿ ಪತ್ರ ಸಲ್ಲಿದ್ದರು.
ಈಗಿನ ಆಂಧ್ರದ ಜಗನ್ ಮೊಹನ್ ರೆಡ್ಡಿ ಸರ್ಕಾರ ಕರ್ನಾಟಕದ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಮೂಲಕ ಹಾದು ಹೋಗಲಿದ್ದ ವಿಜಯವಾಡ-ಬೆಂಗಳೂರು ನಾಲ್ಕುಪಥ ಎಕ್ಸ್ ಪ್ರೆಸ್ ವೇ ರಸ್ತೆಯ ಮಾರ್ಗ ಬದಲಾವಣೆ ಕುರಿತಾಗಿ ಸಾರ್ವಜನಿಕರ ಗಮನ ಸೆಳೆದುದ್ದು ಯುವಶಕ್ತಿ ಪಧಾದಿಕಾರಿಗಳು ಸಾಮಾಜಿಕ ಜಾಲತಾಣಗಳ ಮೂಲಕ ವಿಚಾರ ತಿಳಿಸಿ, ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಅನ್ಯಾಯವಾಗುತ್ತಿದೆ ಈ ರಸ್ತೆ ಯೋಜನೆ ಕೀಬಿಟ್ಟು ಹೋದರೆ ಅಭಿವೃದ್ದಿಗೆ ತೊಂದರೆಯಾಗುತ್ತಿದೆ ಎಂದು ಪ್ರಚಾರ ಮಾಡಿದ್ದೆ ಯುವಶಕ್ತಿ.