- ಕನ್ನಡ-ತೆಲಗು ಭಾಷೆಯಲ್ಲಿ ಸಿನಿಮಾ ನಿರ್ಮಾಣ
- ರಾಯಲಸಿಮೆ ಭಾಗದಲ್ಲಿ ನಡೆದಂತ ನೈಜ ಘಟನೆ ಆದಾರಿತ
- ಶ್ರೀನಿವಾಸಪುರದ ರಾಜಿವ್ ಕೃಷ್ಣ॒॒ @ಆರ್.ಕೆ. ಗಾಂಧಿ ನಿರ್ದೇಶನ
- ಬಹುಭಾಷೆ ನಟ ಪ್ರಕಾಶ್ ರಾಜ್ ಶೀರ್ಷಿಕೆ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ
ಹೈದರಾಬಾದ್: ಶ್ರೀನಿವಾಸಪುರದ ರಾಜಿವ್ ಕೃಷ್ಣ॒॒ @ಆರ್.ಕೆ. ಗಾಂಧಿ ನಿರ್ದೇಶನದ ತೆಲಗು ಚಿತ್ರ ರುದ್ರಾಕ್ಷಪುರಂ ಚಿತ್ರದ ಶೀರ್ಷಿಕೆ ಮತ್ತು ಪೋಸ್ಟರ್ ಅನ್ನು ದಕ್ಷಿಣ ಬಾರತದ ಖ್ಯಾತ ನಟ ಪ್ರಕಾಶ್ ರಾಜ್ ಅನಾವರಣ ಮಾಡಿದರು.
ಕನ್ನಡ ಮತ್ತು ತೆಲಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಮಲ್ಟಿ ಸ್ಟಾರರ್ ಸಿನಿಮಾದಲ್ಲಿ ಬ್ಯಾಟ್ ಲವರ್ ತೆಲಗು ಸಿನಿಮಾದಲ್ಲಿ ಹಿರೊ ಆಗಿ ಮಿಂಚಿದ್ದ, ಮಣಿಸಾಯಿತೆಜ್, ಪವನ್ ವರ್ಮ ಇವರೊಂದಿಗೆ ಬಾಗೇಪಲ್ಲಿಯ ಹುಲಿಬೇಲೆ ರಾಜೇಶ್ ಮತ್ತು ನಾಯಕಿಯರಾಗಿ ಮೈಸೂರಿನ ವೈಡೂರ್ಯ,ಬಾಗೇಪಲ್ಲಿಯ ವರ್ಷಿತ ಹಾಗು ಕನ್ನಡದ ಉಗ್ರಾವತಾರ ಚಿತ್ರದಲ್ಲಿ ನಟಿಸಿದ್ದ ಪೂಜಾ ನಟಿಸುತ್ತಿದ್ದಾರೆ.
ಜೂನಿಯರ್ ಎನ್.ಟಿ.ಅರ್. ಹಾಗು ರಾಜಮೌಳಿ ಕಾಂಬಿನೇಷನ್ ಸಿನಿಮಾಗಳಿಗೆ ಪಿ.ಆರ್.ಒ PRO ಆಗಿ ಕಾರ್ಯನಿರ್ವಿಸಿದ್ದ ವೀರಬಾಬು ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಸಿನಿಮಾವನ್ನು ,ಟೆನ್ ಟ್ರೀಸ್ ಫಿಲ್ಮ್ ಪ್ರೊಡಕ್ಷನ್ ಹೌಸ್ ಬ್ಯಾನರ್ ನಲ್ಲಿ ಕನಕದುರ್ಗರಾಜು ನಿರ್ಮಿಸುತ್ತಿದ್ದಾರೆ.
ವಿಶಿಷ್ಟ ನಟ ಪ್ರಕಾಶ್ ರಾಜ್ ತಮ್ಮ ಹೈದರಾಬಾದ್ ಮನೆಯಲ್ಲಿ ಚಿತ್ರದ ಶೀರ್ಷಿಕೆ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿ,ನವೀನ ಶೀರ್ಷಿಕೆಯೊಂದಿಗೆ ಚಲನಚಿತ್ರವನ್ನು ನಿರ್ಮಾಣಮಾಡುತ್ತಿರುವ ನಿಮ್ಮ ಚಿತ್ರ ತಂಡಕ್ಕೆ ಶುಭಹಾರೈಕೆ ಇರಲಿ ಎಂದು ಅಭಿನಂದಿಸಿದ್ದಾರೆ.
ಟೈಟಲ್ ಲುಕ್ ಬಿಡುಗಡೆ ಸಮಾರಂಭದಲ್ಲಿ ನಿರ್ಮಾಪಕ ಸುರೇಶ್ ಕೊಂಡೆಟ್ಟಿ,ತೆಲಗು ಸಿನಿಮಾ ರಂಗದ ಖ್ಯಾತ ಕ್ಯಾರೆಕ್ಟರ್ ಆರ್ಟಿಸ್ಟ್ ಹೇಮಾ,ರಮಣ ರೆಡ್ಡಿ,ನಟ ಮತ್ತು ವಿತರಕ ರಾಘವೇಂದ್ರ,ಅಶೋಕ್ ಮುನ್ನೂರ್ ಮತ್ತು ಆನಂದ್ ಹಾಜರಿದ್ದರು.
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರುದ್ರಾಕ್ಷಪುರದ ಅರಣ್ಯದಲ್ಲಿ 2018 ರಲ್ಲಿ ನಡೆದ ನೈಜ ಘಟನೆಯ ಆಧಾರದಲ್ಲಿ ಆರ್.ಕೆ. ಗಾಂಧಿ ಸಿನಿಮಾ ನಿರ್ದೇಶನದ ಮಾಡುತ್ತಿದ್ದು ಈ ಚಿತ್ರವು ಎಲ್ಲಾ ವರ್ಗದ ಪ್ರೇಕ್ಷಕರನ್ನು ಆಕರ್ಷಿಸುತ್ತದೆ ಎನ್ನಲಾಗಿದೆ. ಉತ್ತಮ ತಾಂತ್ರಿಕ ವರ್ಗವನ್ನು ಜೋಡಿಸಿದ್ದು, ನಿರ್ಮಾಪಕ ಕನಕದುರ್ಗರಾಜು ಹೇಳುವಂತೆ ಹಾರರ್ ಥ್ರಿಲ್ಲರ್ ಕಥಾ ಹಂದರದಲ್ಲಿ ನಿರ್ಮಾಣವಾಗಲಿರುವ ಸಿನಿಮಾ ಈಗ ಹೈದರಾಬಾದ್ ನಗರದ ಮಿಯಾಪುರ್ ಪ್ರದೇಶದಲ್ಲಿ ಮೊದಲ ಹಂತದ ಚಿತ್ರಿಕರಣ ನಡೆಯುತ್ತಿದ್ದು ಅಕ್ಟೋಬರ್ 12 ರಿಂದ ಎರಡನೆ ಹಂತದ ಚಿತ್ರಕರಣವನ್ನು ಅನಂತಪುರ ಮತ್ತು ಕರ್ನೂಲ್ ನಲ್ಲಿ ಆರಂಭಿಸುತ್ತೇವೆ,ಎಂದು ನಿರ್ದೇಶಕ ಆರ್ ಕೆ ಗಾಂಧಿ vcsnewz.com ಗೆ ತಿಳಿಸಿರುತ್ತಾರೆ.
ವಿಶೇಷ ಸಿನಿಮಾ ವರದಿ.ಚ.ಶ್ರೀನಿವಾಸಮೂರ್ತಿ