- ಹಸರೀಕರಣಕ್ಕೆ NTR ಮಾಡಿದ ಕಾರ್ಯಕ್ರಮ ಪ್ರೇರಣೆ
- ಶ್ವೇತವರ್ಣ ಧಿರಿಸಿನಲ್ಲಿ ಆಂಧ್ರ ದಿ.ರಾಜಶೇಖರರೆಡ್ದಿ ಶೈಲಿಯಲ್ಲಿ ರಮೇಶಕುಮಾರ್
- ಎಂಬತ್ತರ ದಶಕದಲ್ಲಿ ತಿರುಮಲ ಬೆಟ್ಟದಲ್ಲಿ NTR ಕಾರ್ಯಕ್ರಮ
- ಅಂಧ್ರದ ಗಡಿಯಂಚಿನ ಗುಡ್ಡಕಾಡು ಪ್ರದೇಶದಲ್ಲಿ ಹಸರೀಕರಣ
- ಪ್ಯಾರ ಗ್ಲೈಡರ್ ಮೂಲಕ ಬಿಜದೂಂಡೆ ಹರಡಲಾಯಿತು
- ಜನ ಸಂದಣಿ ನಡುವೆ ಅಸ್ವಸ್ಥರಾದ ರಮೇಶ್ ಕುಮಾರ್
ಶ್ರೀನಿವಾಸಪುರ:– ಇದುವರಿಗೂ ನಾವು ಪ್ರಕೃತಿಯ ಶಾಪದಲ್ಲಿ ಇದ್ದೀವಿ ಮುಂದಿನ ದಿನಗಳಲ್ಲಾದರೂ ಪ್ರಕೃತಿಯ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸೋಣ,ಅರಣ್ಯ ಇಲಾಖೆ ಹಾಗು ಜನರ ಮಧ್ಯೆ ಸೌಹರ್ದತೆ ಬೆಳೆಸಿಕೊಳ್ಳುವ ಮೂಲಕ ಪ್ರಕೃತಿಯ ರಕ್ಷಣೆ ಮಾಡೋಣ ಎಂದು ಶಾಸಕ ರಮೇಶ್ ಕುಮಾರ್ ಹೇಳಿದರು.
ಶ್ರೀನಿವಾಸಪುರ ತಾಲ್ಲೂಕಿನ ಸುಣಕಲ್ಲು ಅರಣ್ಯ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ಬೀಜದುಂಡೆ ಬಿತ್ತನೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.ತಾಲೂಕಿನ 9000 ಎಕರೆ ಪ್ರದೇಶದಲ್ಲಿ 1500 ಕೆಜಿ ಬೀಜದುಂಡೆಗಳನ್ನು ಹರಡುವ ಗುರಿ ಹೊಂದಿದ್ದು.
ಎನ್.ಟಿ.ರಾಮರಾವ್ 1985 ರಲ್ಲಿ ಆಂಧ್ರ ಮುಖ್ಯಮಂತ್ರಿಯಾಗಿದ್ದಾಗ ತಿರುಮಲ ಬೆಟ್ಟದ ಮೇಲೆ ಬೀಜದ ಹುಂಡೆಗಳನ್ನು ಹರಡುವುದರ ಮೂಲಕ ಅರಣ್ಯೀಕರಣಕ್ಕೆ ಚಾಲನೆ ನೀಡಿ ಸಪ್ತಬೆಟ್ಟಗಳನ್ನು ಸಸ್ಯಶ್ಯಾಮಲ ಮಾಡಿದರು ಆ ಕಾರ್ಯಕ್ರಮವೇ ನನಗೆ ಪ್ರೇರಣೆಯಾಗಿದೆ ಇದರ ಪರಿಣಾಮ ರಾಯಲ್ಪಾಡು-ನೆಲವಂಕಿ ಹೋಬಳಿಗಳಲ್ಲಿ ಇರುವಂತ ದಟ್ಟವಾದ ಅರಣ್ಯ ಪ್ರದೇಶದಲ್ಲಿ ಬಿಜದೂಂಡೆಗಳನ್ನು ಹರಡಿಸಿ ಈ ಭಾಗದ ಅರಣ್ಯ ಹಾಗು ಗುಟ್ಟಬೆಟ್ಟಗಳನ್ನು ಸಸ್ಯಶ್ಯಾಮಲ ಮಾಡಲು ಪ್ಯಾರಾ ಗ್ಲೈಡರ್ ಮೂಲಕ ಕಾರ್ಯ ಆರಂಭಿಸಿದ್ದು ಮುಂದಿನ ದಿನಗಳಲ್ಲಿ ಈ ಭಾಗ ಹಸರೀಕರಣವಾದರೆ ಅರಣ್ಯ ಪ್ರದೇಶದ ವಿಸ್ತೀರ್ಣ ಹೆಚ್ಚಾಗುತ್ತದೆ,ಪ್ರಕೃತಿ ಮಾತೆ ಉತ್ತಮ ಮಳೆಯಾಗಲು ಸಹಕಾರ ನೀಡುತ್ತಾಳೆ ಇದರಿಂದ ಇಲ್ಲಿ ಅಂತರ್ಜಲ ಹೆಚ್ಚಲು ಸಹಕಾರಿಯಾಗುತ್ತದೆ ಎಂದರು.
ನಿಲಗಿರಿ ಬೇಡ
ನೀಲಗಿರಿ ತೆಗೆಯಲು ಕಾನೂನು ರೂಪಿಸಿ ಜಾರಿಯಾಗಿದೆ ದೊಡ್ಡ ಮಟ್ಟದಲ್ಲಿ ನೀಲಗಿರಿ ತೆಗೆಯಲು ಜನ ಮುಂದಾಗಿದ್ದಾರೆ ಇದು ಅಂದೋಲನ ಎನ್ನುವಂತೆ ತೆರವು ಕಾರ್ಯನಡೆಯುತ್ತಿದೆ.
ಕೆಸಿ ವ್ಯಾಲಿ ಯೋಜನೆಯಿಂದ ಜಿಲ್ಲೆಯ 124 ಕೆರೆ ಪೈಕಿ 104 ಕೆರೆ ತುಂಬಿದೆ.ಕೆರೆ ಒತ್ತುವರಿಯಂತ ಸಣ್ಣಪುಟ್ಟ ತೊಂದರೆಗಳು ಎದುರಾದರು ಬಗೆಹರಿಸಲು ಸಿದ್ದರಿದ್ದೇವೆ.ಅಂತರ್ಜಲ ವೃದ್ಧಿಯಾಗುತ್ತಿದೆ.ಕೆರೆಯಲ್ಲಿ ನೀರು ತುಂಬಿಕೊಂಡರೆ ಒತ್ತುವರಿದಾರರು ತಾನಾಗಿಯೇ ಸ್ಥಳಬಿಟ್ಟು ಹೋಗುತ್ತಾರೆ ಎಂದರು,ಮುಂದಿನ ಐದು ವರ್ಷಗಳಲ್ಲಿ ಕೋಲಾರ ಜಿಲ್ಲೆ ಮಲೆನಾಡು ಪ್ರದೇಶ ಆಗುವ ವಿಶ್ವಾಸ ವ್ಯಕ್ತಪಡಿಸಿದರು.
ಕೋಲಾರ ತಾಲೂಕು ಸುಗಟೂರಿನ ಎಸ್.ಅಗ್ರಹಾರ ಕೆರೆ ಸಮೀಪ ಬಿದಿರು ಸೇರಿದಂತೆ ವಿವಿಧ ತಳಿಯ ಕಾಡುಮರಗಳು ಬೆಳೆಯಲು ಪ್ರಾರಂಭವಾಗಿವೆ. ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದರು.
ಅರಣ್ಯ ಅಭಿವೃದ್ದಿಗೆ ಸಾಕಷ್ಟು ಯೋಜನೆಗಳು ಆಸೆಗಳು ಇವೆ,ಅವಕಾಶ ಸಿಕ್ಕಾಗ ಹಂತಹಂತವಾಗಿ ಕಾರ್ಯಗತಗೊಳಿಸಲಾಗುತ್ತದೆ ಜನ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಮಧ್ಯೆ ಸೌಹರ್ಧ ಸಂಬಧ ಇರಬೇಕು ಅರಣ್ಯ ಉಳಿಸಲು ಜನತೆ ಸಹ ಜಾಗೃತರಾಗಬೇಕು ಎಂದು ಮಾರ್ಮಿಕವಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ನಿರ್ದೇಶಕ ಅನಿಲ್ ಕುಮಾರ್, ಜಿಪಂ ಸದಸ್ಯರಾದ ಮ್ಯಾಕಲ ನಾರಾಯಣಸ್ವಾಮಿ, ಗೋವಿಂದಸ್ವಾಮಿ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್ ಅರಣ್ಯ ಇಲಾಖೆಯ ಸುರೇಶ್ ಬಾಬು ಸೇರಿದಂತೆ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಇದ್ದರು.
ಕಾರ್ಯಕ್ರಮಕ್ಕೆ ಜಾನಪದ ಸೊಗಡು,ಶ್ವೇತ ವರ್ಣದ ಧಿರಿಸು.
ಅರಣ್ಯೀಕರಣದ ಕಾರ್ಯಕ್ರಮದಲ್ಲಿ ಡೊಳ್ಳು ಕುಣಿತ, ಗ್ರಾಮೀಣ ನೃತ್ಯದೊಂದಿಗೆ ಜಾನಪದ ಸೊಗಡು ಬೆಸೆಯಲಾಗಿತ್ತು ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನತೆ ಪಂಚೆ,ಶರ್ಟ್ ಧರಿಸಿದ್ದರು ವಿಶೇಷವಾಗಿ ಸ್ವತಹಃ ರಮೇಶಕುಮಾರ್ ಶ್ವೇತವರ್ಣಧಾರಿಯಾಗಿ ಬಿಳಿ ಬಣ್ಣದ ಶರ್ಟ್ ಪಂಚೆ ಧರಸಿ ತಲೆಗೆ ಬಿಳಿ ರುಮಾಲು ಸುತ್ತಿಕೊಂಡು ಆಂಧ್ರದ ಮುಖ್ಯಮಂತ್ರಿಯಾಗಿದ್ದ ದಿ.ರಾಜಶೇಖರರೆಡ್ದಿ ಶೈಲಿಯಲ್ಲಿ ಭಾಗವಹಿಸಿ ಜನರೊಂದಿಗೆ ಅರಣ್ಯದಲ್ಲಿ ಸಂಭ್ರಮದಿಂದ ಒಡಾತ್ತಿದ್ದರು.ಕಾರ್ಯಕ್ರಮದಲ್ಲಿ ಮಾಂಸೂದಟ ಸಹ ಏರ್ಪಡಿಸಿದ್ದರು.