- ಅಧಿಕಾರದಲ್ಲಿದ್ದಾಗ ಎತ್ತಿನ ಹೊಳೆ ಪ್ರಾಜೆಕ್ಟ್ ಗೆ ಹಣ ಕೊಡದವರು
- ಕೋಲಾರಕ್ಕೆ ಬಂದು ಕೆ.ಸಿ.ವ್ಯಾಲಿ ಯೋಜನೆಯನ್ನು ಕೊಳಚೆ ನೀರು ಅಂತಾರೆ
- 11 ತಿಂಗಳ ಕಡಿಮೆ ಅವಧಿಯಲ್ಲಿ ಪೂರ್ಣವಾದ ಕೆ.ಸಿ.ವ್ಯಾಲಿ ಪ್ರಾಜೇಕ್ಟ್
- ಕೆ.ಸಿ.ವ್ಯಾಲಿ ಯೋಜನೆ ನೀರು ಗೃಹ ತ್ಯಾಜ್ಯದ್ದು
ಶ್ರೀನಿವಾಸಪುರ:-ಕೆ.ಸಿ.ವ್ಯಾಲಿ ಯೋಜನೆಯಲ್ಲಿ ಹರಿಯುತ್ತಿರುವ ನೀರಲ್ಲಿ ಯಾವುದೇ ರಾಸಾಯಿನಿಕ ತ್ಯಾಜ್ಯ ಇಲ್ಲ ಅದರಲ್ಲಿ ಮನುಷ್ಯ ಉಪಯೋಗಿಸಿದ ಗೃಹ ತ್ಯಾಜ್ಯದ ನೀರು ಮಾತ್ರ ಹರಿಯುತ್ತಿದೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟಿಕರಣ ನೀಡಿದರು.
ಅವರು ಇಂದು ಗುರುವಾರ ತಾಲೂಕಿನ ಕಸಬಾ ಹೋಬಳಿಯ ಗಾಂಡ್ಲಹಳ್ಳಿ ಗ್ರಾಮದ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದರು,ಹರಿಯುವ ನೀರು ಗಂಗಾಭವಾನಿಗೆ ಯಾವುದೇ ರಾಜಕೀಯ ಇಲ್ಲ ಯಾರು ಬೇಕಾದರೂ ಈ ನೀರನ್ನು ಉಪಯೋಗಿಸಬಹುದಾಗಿದೆ ನೀರಿಗ್ಯಾಕೆ ರಾಜಕೀಯ ಎಂದ ಅವರು, ಒಬ್ಬರೇನೊ ಕೊಚ್ಚೆ ನೀರು ಅಂತಾರೆ ಇನ್ನೋಬ್ಬ ರೈತರ ಹೆಸರಿನಲ್ಲಿ ಕೋರ್ಟಿಗೆ ಹೋಗಿ ತಡೆಯಾಙ್ಞೆ ತರ್ತಾರೆ, ಅಡ್ಡಿ ಅತಂಕಗಳು ಒಂದ ಎರಡ ಸಾಯಿಬಾಬನ ಅಶಿರ್ವಾದ ಬೇಡಿ ಆತನ ಅನುಗ್ರಹದಿಂದ ಸುಪ್ರೀಂ ಕೋರ್ಟನಲ್ಲಿ ತಡೇಯಾಙ್ಞೆ ತೆರವಾಗಿ ಇದ್ದ ಅಡ್ಡಿ ಅತಂಕಗಳು ಹೋಗಿ ಕಾಮಗಾರಿಗೆ ಮಾಡಲು ಅನಕೂಲವಾಯಿತು, ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆಗೆ ಜಗಳವಾಡಿ ಹಣ ತಂದು ಕಾಮಗಾರಿ ಮಾಡಿಸಿದೆ ಆಂಧ್ರದಲ್ಲಿ ಪ್ರತಿಷ್ಟಿತ ನೀರಿನ ಯೋಜನೆ ಪಟ್ಟಿಸೀಮ ಪ್ರಾಜೆಕ್ಟ್ ಮಾಡಿದ ಕಂಪನಿ ಮೂಲಕ ಕೆ.ಸಿ.ವ್ಯಾಲಿ ಯೋಜನೆಯನ್ನು 11 ತಿಂಗಳಲ್ಲಿ ಮಾಡಿಸಿದ್ದೀವಿ ಇದು ಬಹುಶಃ ಭಾರತದ ಇತಿಹಾಸದಲ್ಲಿ ಇಷ್ಟೊಂದು ಕಡಿಮೆ ಅವಧಿಕಯಲ್ಲಿ ಮಾಡಿದಂತ ನೀರಿನ ಯೋಜನೆ ಎಂದು ಹೇಳಿದರು.
ಕುಮಾರಸ್ವಾಮಿ ವಿರುದ್ದ ಹರಿಹಾಯ್ದ ರಮೇಶ್ ಕುಮಾರ್!
ಅಷ್ಟ ಕಷ್ಟಗಳನ್ನು ಪಟ್ಟು ಕೆ.ಸಿ.ವ್ಯಾಲಿ ಯೋಜನೆ ನೀರು ತಂದಿದ್ದಿವಿ ಇದನ್ನು ಕೊಳಚೆ ನೀರು ಅಂತಾರೆ ಮಹಾನ್ ಭಾವರರೊಬ್ಬರು ಅವರು ಅಧಿಕಾರದಲ್ಲಿ ಇದ್ದಾಗ ಎತ್ತಿನ ಹೊಳೆ ಯೋಜನೆಗೆ ಹಣ ಕೇಳಿದರೆ ಕೊಡಲಿಲ್ಲ,ಈಗ ಇಲ್ಲಿಗೆ ಬಂದು ಕೊಳಚೆ ನೀರು ಅಂತಾರೆ ಎಂದು ನೇರವಾಗಿ ಕುಮಾರಸ್ವಾಮಿ ವಿರುದ್ದ ಹರಿಹಾಯ್ದರು, ಕುಮಾರಸ್ವಾಮಿ ದೊಡ್ಡವರು ಅಧಿಕಾರದಲ್ಲಿ 14 ತಿಂಗಳು ಮುಖ್ಯಮಂತ್ರಿಯಾಗಿರುವುದನ್ನೆ ಮರೆತಂತವರು,ಕೋಲಾರಕ್ಕೆ ಬರ್ತಾರೆ ನನ್ನನ್ನು ಮಾಹಾನ್ ನಾಯಕ ಅಂತಾರೆ ಅವರ ಕುಟುಂಬವೇ ಮಹಾನ್ ನಾಯಕರ ಕುಟುಂಬ ಅವರು ಅವರ ಸಹೋದರರು,ಅವರ ತಂದೆಯವರು ಮಹಾನ್ ನಾಯಕರು ಅವರ ಎದುರು ನಾನು ಸಾಮಾನ್ಯ,ನಿಮ್ಮದು ರೈತರ ಕುಟುಂಬ ರೈತರ ಪಕ್ಷ ಅಂತಿರಾ ನೀವು ದೊಡ್ಡವರು ಸ್ವಾಮಿ ಎಂದು ತಮ್ಮದೇ ಶೈಲಿಯಲ್ಲಿ ವ್ಯಂಗ್ಯಭರಿತವಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲಆಶೋಕ್,ಲಕ್ಷ್ಮೀಪುರ ಸೊಸೈಟಿ ಅಧ್ಯಕ್ಷ ಬೊರವೆಲ್ ಕೃಷ್ಣಾರೆಡ್ಡಿ, ಹಾಲು ಒಕ್ಕೊಟದ ನಿರ್ದೇಶಕ ಹನುಮೇಶ್ ಗೌಡ,ಯುವ ಕಾಂಗ್ರೆಸ್ ಮುಖಂಡ ಗಾಂಡ್ಲಹಳ್ಳಿ ದರ್ಶನ್ ಮುಂತಾದವರು ಇದ್ದರು.