ಕೋವಿಡ್-19 ಲಾಕ್ಡೌನ್ ನಂತರ ಪುನರಾರಂಭವಾಗುತ್ತಿರುವ ರೈಲುಗಳು
18 ತಿಂಗಳ ಕಾಲ ಸ್ಥಗಿತ ಗೊಂಡಿದ್ದ ಡೆಮೊ ರೈಲುಗಳು
ಬೆಳಿಗ್ಗೆ ಹೋರಡುವ ರೈಲು ಮೆಜೆಸ್ಟಿಕ್ ಗೆ ಹೋಗಲಿದೆ
ರಾಮನಗರ ಚನ್ನಪಟ್ಟಣಕ್ಕೆ ತೆರಳಲಿರುವ ರೈಲು
ಬೆಂಗಳೂರು-ಚಿಕ್ಕಬಳ್ಳಾಪುರ ನಡುವೆ ಪ್ರತಿ ಗಂಟೆಗೊಮ್ಮೆ ಮೆಮೊ ರೈಲುಗಳು!
ಎಲ್ಲಾ ರೈಲುಗಳು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಹೋಗಲಿದೆ
ನ್ಯೂಜ್ ಡೆಸ್ಕ್ :-ಬೆಂಗಳೂರು, ಕೋಲಾರ,ಶ್ರೀನಿವಾಸಪುರ ಚಿಂತಾಮಣಿ,ಚಿಕ್ಕಬಳ್ಳಾಪುರ, ಮಾರ್ಗದಲ್ಲಿ ರೈಲುಗಳ ಓಡಾಟ ಮತ್ತೇ ಪ್ರಾರಂಭವಾಗಲಿದೆ ಎಂಬ ಮಾಹಿತಿ ಹೋರಬಂದಿದೆ.
ನವೆಂಬರ್ 8 ಅಥಾವ 9 ರಿಂದ ಈ ಮಾರ್ಗಗಳಲ್ಲಿ ರೈಲುಗಳ ಸಂಚಾರ ಪುನಾರಂಭಗೊಳ್ಳಲಿದೆ.
ರೈಲ್ವೆ ಮಂಡಳಿ 8 ಡೇಮು (ಡಿಸೆಲ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್) ರೈಲುಗಳನ್ನು ಈ ಮಾರ್ಗಗಳಲ್ಲಿ ಪುನಾರಂಭ ಮಾಡಲು ನಿರ್ಧರಿಸಿದೆ. ಈ ಪೈಕಿ ಕೆಐಎ ಹಾಲ್ಟ್ ನಿಲ್ದಾಣಕ್ಕೂ 4 ರೈಲುಗಳ ಮೂಲಕ ಸಂಪರ್ಕ ಕಲ್ಪಿಸಲಾಗಿದೆ.
ರೈಲ್ವೆ ಅಧಿಕಾರಗಳು ನೀಡಿರುವ ಮಾಹಿತಿಯಂತೆ ಕೋವಿಡ್-19 ಲಾಕ್ ಡೌನ್ ನಂತರ 18 ತಿಂಗಳ ಕಾಲ ಈ ಮಾರ್ಗದಲ್ಲಿ ರೈಲುಗಳನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಮತ್ತೇ ರೈಲುಗಳು ಪುನಾರಂಭಗೊಳ್ಳುತ್ತಿವೆ.
ವಾರದಲ್ಲಿ 6 ದಿನಗಳ ಕಾಲ ಭಾನುವಾರ ಹೊರತುಪಡಿಸಿ ರೈಲುಗಳು ಸಂಚರಿಸಲಿದ್ದು ಬೆಂಗಳೂರು ಕ್ರಾಂತಿವೀರ ಸಂಗೋಳ್ಳಿರಾಯಣ್ಣ@ ಮೆಜೆಸ್ಟಿಕ್ ನಿಂದ ಬೆಳೆಗ್ಗೆ 8.35 ಹೊರಡುವ ರೈಲು ಕಂಟೋನ್ಮೆಂಟ್ ಮಾರ್ಗವಾಗಿ ಬೈಪನಹಳ್ಳಿ,ಯಲಹಂಕ,ದೇವನಹಳ್ಳಿ,ಚಿಕ್ಕಬಳ್ಳಾಪುರ,ಶಿಡ್ಲಘಟ್ಟ, ಚಿಂತಾಮಣಿ,ಶ್ರೀನಿವಾಸಪುರಕ್ಕೆ 11.30ಆಗಮಿಸಿ ಕೋಲಾರಕ್ಕೆ 11.45 ತಲುಪಲಿದೆ ನಂತರ ಮದ್ಯಾನಃ 2 ಗಂಟೆಗೆ ಕೋಲಾರದಿಂದ ಹೋರಡುವ ರೈಲು ಶ್ರೀನಿವಾಸಪುರಕ್ಕೆ 2.32 ಅಗಮಿಸಿ ಚಿಂತಾಮಣಿ,ಶಿಡ್ಲಘಟ್ಟ,ಚಿಕ್ಕಬಳ್ಳಾಪುರ,ದೇವನಹಳ್ಳಿ,ಯಲಹಂಕ,ಬೈಪನಹಳ್ಳಿ ಮಾರ್ಗವಾಗಿ ಕಂಟೋನ್ಮೇಂಟ್ 6.10 ಕ್ಕೆ ತಲುಪಿ ಅಲ್ಲಿಂದ ಧರ್ಮಪುರಿಗೆ ಹೋಗಲಿದೆ ಎಂದು ರೈಲ್ವೇ ಇಲಾಖೆ ಮೂಲಗಳಿಂದ ತಿಳಿದುಬಂದಿದೆ.
ಬೆಳಿಗ್ಗೆ ಕೋಲಾರದಿಂದ ಮುಂಜಾನೆ 6.15,ಕ್ಕೆ ಹೋರಡುವ ರೈಲು ಶ್ರೀನಿವಾಸಪುರ ಕ್ಕೆ 6.47 ,ಚಿಂತಾಮಣಿ7.04, ಶೀಡ್ಲಘಟ್ಟ7.24, ಚಿಕ್ಕಬಳ್ಳಾಪುರ 7.43, ದೇವಹನಹಳ್ಳಿ8.12, ಯಲಹಂಕ8.48, ಯಶ್ವಂತಪುರ9.15, ಮಲ್ಲೇಶ್ವರಂ, ಮೆಜೆಸ್ಟಿಕ್9.35 ರಾಮನಗರ10.ಚನ್ನಪಟ್ಟಣವನ್ನು 11.00 ಗಂಟೆಗೆ ತಲುಪಲಿದೆ.
ಮತ್ತೇ ಸಂಜೆ 4.50 ಕ್ಕೆ ಚನ್ನಪಟ್ಟಣದಿಂದ ಹೋರಡುವ ರೈಲು ರಾಮನಗರ,ಮೆಜೆಸ್ಟಿಕ್ 6.10 ಕ್ಕೆ ಆಗಮಿಸಲಿದೆ,ಯಶ್ವಂತಪುರ,ಯಲಹಂಕ,ದೇವನಹಳ್ಳಿ,ಚಿಕ್ಕಬಳ್ಳಾಪುರ,ಶಿಡ್ಲಘಟ್ಟ,ಚಿಂತಾಮಣಿಗೆ ರಾತ್ರಿ 8.32 ಕ್ಕೆ ಶ್ರೀನಿವಾಸಪುರಕ್ಕೆ 8.54 ಕೋಲಾರ 9.30 ತಲುಪಲಿದೆ.
ಈ ಎಲ್ಲಾ ರೈಲುಗಳು ಕೆಐಎ ಹಾಲ್ಟ್ ಸ್ಟೇಷನ್ ನ ಮೂಲಕ ಹಾದು ಹೋಗಲಿದೆ ಎನ್ನಲಾಗಿದೆ.
ಮುಂದಿನ ದಿನಗಳಲ್ಲಿ ಬೆಂಗಳೂರು-ಚಿಕ್ಕಬಳ್ಳಾಪುರ ನಡುವೆ ಪ್ರತಿ ಗಂಟೆಗೊಮ್ಮೆ ಮೆಮೊ ರೈಲುಗಳ ಸಂಚಾರ ಆರಂಬವಾಗುವ ಬಗ್ಗೆ ಮಾಹಿತಿ ಇದೆಯಾದರು ಇದುವರಿಗೂ ಅಧಿಕೃತ ಪ್ರಕಟಣೆ ಹೊರಬಂದಿಲ್ಲ.
ಕೋವಿಡ್ ಲಾಕ್ಡೌನ್ ನಂತರ ಪುನರಾಂಭವಾಗುತ್ತಿರುವ ರೈಲು ಮಾರ್ಗದಲ್ಲಿ ಇನ್ನೂ ಹೆಚ್ಚಿನ ರೈಲುಗಳನ್ನು ಒಡಿಸಲು ಕೇಂದ್ರ ರೈಲ್ವೆ ಇಲಾಖೆ ಯೋಜನೆ ರೂಪಿಸುವಂತೆ ರೈತ ಮುಖಂಡ ಪಿ.ಆರ್.ಸೂರಿ ಜನಪ್ರತಿನಿಧಿಗಳನ್ನು ಒತ್ತಾಯಿಸಿರುತ್ತಾರೆ.
ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ಪ್ರತಿನಿಧಿಸುತ್ತಿರುವ ಸಂಸದರು ಹಾಗು ಶಾಸಕರು ವಿಧಾನಪರಿಷತ್ ಸದಸ್ಯರು ಈ ಬಗ್ಗೆ ರೈಲ್ವೇ ಇಲಾಖೆ ಮೇಲೆ ಒತ್ತಡ ಹೇರಿ ಹೆಚ್ಚಿನ ರೈಲುಗಳು ಒಡಿಸಲು ಶ್ರಮಿಸುವಂತೆ ಹೇಳಿರುತ್ತಾರೆ.