ಶ್ರೀನಿವಾಸಪುರ:– ಅತಿಯಾದ ಮಳೆಯಿಂದ ಬರದ ಬೀಡು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳು ಮಲೆನಾಡಂತಾಗಿದೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜನತೆ ತತ್ತರಿಸಿದ್ದಾರೆ,ವರುಣನ ಆರ್ಭಟಕ್ಕೆ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಕೈಗೆ ಬಂದ ಬೆಳೆ ನೆಲಕಚ್ಚಿ ಭೂಮಿ ಪಾಲಾಗಿದ್ದು ಕೃಷಿಕನ ಬದಕು ಮೂರಾಬಟ್ಟೆಯಂತಾಗಿದೆ.
ಈ ವರ್ಷ ಮುಂಗಾರು ಬೇಗ ಆರಂಭ ಆಗಿದಲ್ಲದೆ ಕೆರೆ ಕುಂಟೆಗಳಿಗೆ ನೀರುಬಂದಿದ್ದು ಕಂಡು ಆರಂಭದಲ್ಲಿ ರೈತರು ಖುಷಿ ಪಟ್ಟರಾದರೂ ಖುಷಿ ಹೆಚ್ಚು ಉಳಿಯಲಿಲ್ಲ ಮಳೆ ಬಿಟ್ಟುಬಿಡದೆ ನಿರಂತರವಾಗಿ ಸುರಿಯುತ್ತ ಕೆರೆಗಳು ಕೊಡಿ ಬಿತ್ತಲ್ಲದೆ ಬಿಡುವಿಲ್ಲದೆ ಮಳೆ ಸುರಿದ ಪರಿಣಾಮ ರೈತನ ಸಹನೆ ಸತ್ತು ಹೋಗಿ ಗೋಳಾಡುವ ಪರಿಸ್ಥಿತಿ ತಲುಪಿದ್ದಾನೆ.
ಇಲ್ಲಿನ ಬಹುತೇಕ ಕೆರೆಗಳು ಈ ವರ್ಷದಲ್ಲಿ ಎರಡೇರಡು ಬಾರಿ ಕೊಡಿ ಬಿದ್ದಿವೆ ಕುಂಟೆ,ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ ನೀರು ಮರಿಚಿಕೆಯಾಗಿದ್ದ ಇಲ್ಲಿ ಎಲ್ಲೆಲ್ಲೂ ನೀರು ಕಾಣು ಸಿಗುತ್ತಿದೆ.
ಫಸಲು ಕೊಯ್ಯುವ ವೇಳೆಯಲ್ಲಿ ಮಳೆ ಸುರಿಯುತ್ತಿದೆ
ನಿತ್ಯವೂ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕಟಾವು ಮಾಡಬೇಕಾಗಿದ್ದ ರಾಗಿಫಸಲು ಅರ್ದಬಂದ ಕಟಾವಾಗಿದ್ದು ಹೊಲದಲ್ಲೇ ಉಳಿದ ರಾಗಿ ಬೆಳೆ ನೆಲಕಚ್ಚಿದೆ.ತೆನೆಯು ನೀರು ತುಂಬಿ ರಾಗಿ ಕಾಳು ನೆಲಕ್ಕೆ ಉದರಿ ಮೊಳಕೆ ಒಡೆಯುತ್ತಿವೆ.ರಾಗಿಬೆಳೆ ಕೈಗೆ ಬಾರದೆ ಹೋದರು ಹುಲ್ಲಾದರೂ ಸಿಗಬಹುದಾ ಎಂಬ ರೈತರ ಆಸೆಗೆ ರಾಗಿಯ ತೆನೆ ನೆಲಕ್ಕೆ ಮಲಗಿ ಮಳೆಯಿಂದ ನೆನದು ಅಲ್ಲಿಯೇ ಕರಗುವ ಪರಿಸ್ಥಿತಿ ಉಂಟಾಗಿದೆ.
ಮಾವಿಗೂ ಕಂಟಕ ವಾಗುತ್ತ ಅತಿಯಾದ ಮಳೆ?
ಅತಿಯಾದ ಮಳೆ ಈ ಭಾಗದ ಬಹುತೇಕ ತೋಟಗಾರಿಕೆ ಬೆಳೆಗಳಿಗೆ ಕುತ್ತು ತಂದಿದೆ.ವಿಶೇಷವಾಗಿ ಶ್ರೀನಿವಾಸಪುರ ಕೇಂದ್ರವಾಗಿ 3-4 ತಾಲೂಕುಗಳಲ್ಲಿ ಜೀವನಾಡಿ ಬೆಳೆಯಾಗಿರುವ ಮಾವು ಈ ಬಾರಿ ಬೆಳೆಗಾರನ ಕೈ ಹಿಡಿಯದು ಎನ್ನುವ ಮಾತಿದೆ.ಭೂಮಿಯಲ್ಲಿ ಅತಿಯಾದ ತೆವಾಂಶದಿಂದ ಮಾವಿನ ಹೂ ಕಡಿಮೆಯಾಗಿ,ಚಿಗರು ಬರುತ್ತದೆ ಎನ್ನುತ್ತಾರೆ ಮಾವು ತಙ್ಞರು. ಕೆಲವೊಂದು ಮಾವಿನ ತೋಟಗಳಲ್ಲಿ ನೀರು ತುಂಬಿ ಕೆರೆಗಳಂತಾಗಿದೆ ಇದರಿಂದ ಮಾವಿನ ಮರ ರೋಗಕ್ಕೂ ತುತ್ತಾಗುತ್ತದೆ ಎನ್ನುತ್ತಾರೆ.
ಇನ್ನೂ ಮೂರು ದಿನ ಮಳೆ ಹೈ ಅಲರ್ಟ್ ಘೋಷಣೆ
ಹವಾಮಾನ ತಙ್ಞರು ಅಂದಾಜಿಸಿರುವಂತೆ ಕೋಲಾರ ಜಿಲ್ಲೆಯಾದ್ಯಂತ ಇಂದಿನಿಂದ ಇನ್ನೂ ಮೂರು ದಿನಗಳ ಕಾಲ ಮಳೆಯಿದ್ದು ಈ ಕುರಿತಾಗಿ ಜಿಲ್ಲಾಧಿಕಾರಿ ವಿಶೇಷ ಆಸಕ್ತಿ ವಹಿಸಿ ಹೈ ಅಲರ್ಟ್ ಘೋಷಿಸಿದ್ದಾರೆ ತಾಲೂಕು ಮಟ್ಟದಲ್ಲಿ ಅಧಿಕಾರಿಗಳು ಅಳೆ ಅನಾಹುತಗಳಿಗೆ ಸ್ಪಂದಿಸುವಂತೆ ಕಟ್ಟು ನಿಟ್ಟಾಗಿ ಸೂಚಿಸಿದ್ದಾರೆ.ಸಾರ್ವಜನಿಕರ ಅನಕೂಲಕ್ಕಾಗಿ ವಿಪತ್ತು ನಿಯಂತ್ರಣ ಕೊಠಡಿ ತೆರದಿದ್ದು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಹೆಚ್ಚಿನ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ೧೯ ಶುಕ್ರವಾರ ಮತ್ತು ೨೦ ಶನಿವಾರ ಶಾಲೆಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಯರಾಮರೆಡ್ಡಿ ಆದೇಶಿಸಿದ್ದಾರೆ.