- ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಾರೆಡ್ಡಿ
- ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಪ್ರಭಾವಿ ಮುಖಂಡ
- ಮುಖ್ಯಮಂತ್ರಿ ಸಮ್ಮುಖದಲ್ಲಿ BJP ಸೇರ್ಪಡೆ
- ಬಂಗಾರಪೇಟೆ MLA ನಾರಯಣಸ್ವಾಮಿ ಪರಮಾಪ್ತ
- ಇತ್ತಿಚಿಗೆ ಇಬ್ಬರ ನಡುವೆ ಹಳಸಿರುವ ಸ್ನೇಹ!
- ಬಿಜೆಪಿ ಗೆ ವರ್ತೂರು ಪ್ರಕಾಶ್ ಜೈ
ಕೋಲಾರ:ಕೈ ಪಕ್ಷದಲ್ಲಿ ವಿಧಾನಪರಿಷತ್ ಟಿಕೆಟ್ ಆಕಾಂಕ್ಷಿಯಾಗಿದ್ದ ಕೋಲಾರ ಜಿಲ್ಲಾ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಕೆ.ಚಂದ್ರಾರೆಡ್ಡಿ ಇಂದು ಬಿಜೆಪಿ ಸೇರುವ ಮೂಲಕ ಕೋಲಾರ ಜಿಲ್ಲಾ ಕಾಂಗ್ರೆಸ್ ಪಕ್ಷದಲ್ಲಿನ ಭಿನ್ನಮತ ಬುಗಿಲೆದ್ದಿದೆ ಇಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಸಾಭಿತಾಗಿದೆ!
ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಪ್ರಭಾವಿ ಮುಖಂಡರಾಗಿದ್ದ ಚಂದ್ರಾರೆಡ್ಡಿ ಶಾಸಕ ಎಸ್.ಎನ್.ನಾರಯಣಸ್ವಾಮಿ ಪರಮಾಪ್ತರಾಗಿದ್ದರು ಒಂದೇ ಜೀವ ಎರಡು ದೇಹ ಎಂಬಂತೆ ಇದ್ದರು ಬದಲಾದ ರಾಜಕೀಯದಲ್ಲಿ ಶಾಸಕ ನಾರಯಣಸ್ವಾಮಿ ಅವರನ್ನು ಬಿಟ್ಟು ಹೊರಬಂದಿರುವುದು ಕೋಲಾರ ಜಿಲ್ಲೆಯ ರಾಜಕೀಯ ಪಡಸಾಲೆಯಲ್ಲಿ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ.
ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಕುಮಾರ್ ನಾಮಪತ್ರ ಸಲ್ಲಿಸಿದ ನಂತರ ಬೆಂಬಲ ಕೊರಲು ಚಂದ್ರಾರೆಡ್ಡಿ ಬಳಿ ಹೋದಾಗ ನಿನಗೆ ಬೆಂಬಲ ಕೊಡುವುದಿಲ್ಲ ನಾನು ಬಿಜೆಪಿ ಸೇರುವುದಾಗಿ ಚಂದ್ರಾರೆಡ್ಡಿ ನೇರವಾಗಿ ಹೇಳಿದ್ದರಂತೆ!
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಚಂದ್ರಾರೆಡ್ಡಿ,ಕೆ.ಜಿ.ಎಫ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಭಾವಿ ಮುಖಂಡ ಶ್ರೀನಿವಾಸ್, ಕಪಾಲಿ ಶಂಕರ್ ಸೇರಿದಂತೆ ಹಲವು ಮುಖಂಡರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಡಾ॥ಕೆ.ಸುಧಾಕರ್, ಮುನಿರತ್ನ,ಸಂಸದ ಮುನಿಸ್ವಾಮಿ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾದರು.
ಬಿಜೆಪಿ ಗೆ ವರ್ತೂರು ಪ್ರಕಾಶ್ ಜೈ!
ಬಿಜೆಪಿಗೆ ಚಂದ್ರಾರೆಡ್ಡಿ ಸೇರ್ಪಡೆಯಾಗುತ್ತಿದ್ದಂತೆ ಕೋಲಾರದ ಮಾಜಿ ಶಾಸಕ ವರ್ತೂರು ಪ್ರಕಾಶ್ ಬಿಜೆಪಿ ಅಭ್ಯರ್ಥಿ ಪರ ಜೈ ಅಂದಿರುತ್ತಾರೆ ಅವರು ಇಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ,ಆರೋಗ್ಯ ಸಚಿವ ಡಾ॥ಕೆ.ಸುಧಾಕರ್, ಸಂಸದ ಮುನಿಸ್ವಾಮಿ ಸಮ್ಮುಖದಲ್ಲಿ ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಮಂಜುನಾಥ್ ಗೌಡ,ವೆಂಕಟಮುನಿಯಪ್ಪ,ಕೋಲಾರ ಬಿಜೆಪಿ ಜಿಲ್ಲಾಧ್ಯಕ್ಷ ಹಾಗು ವಿಧಾನ ಪರಿಷತ್ ಅಭ್ಯರ್ಥಿ ಡಾ॥ ಕೆ ವೇಣುಗೋಪಾಲ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಹೇಶ್,ಶ್ರೀನಿವಾಸ ಸೇರಿದಂತೆ,ಬಿಜೆಪಿ ತಾಲ್ಲೂಕು ಅಧ್ಯಕ್ಷ ನಾಗೇಶ್,ಹನುಮಂತಪ್ಪ ಮುಂತಾದವರು ಇದ್ದರು.