ಶ್ರೀನಿವಾಸಪುರ:-ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗುವಂತೆ ಪ್ರೇರಣೆ ನೀಡುತ್ತ ಪ್ರಚಾರ ಮಾಡುತ್ತಿದ್ದ ಪ್ರಚಾರಕರಿಗೆ ಸ್ಥಳಿಯ ಯುವಕರು ಪ್ರತಿರೋಧ ವ್ಯಕ್ತಪಡಿಸಿ ಅವರನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ಪಟ್ಟಣದ ಹಳೇಪೇಟೆ ಹನುಮನಪಾಳ್ಯದಲ್ಲಿ ಇಂದು ನಡೆದಿದೆ.
ಬಹುತೇಕ ಹಿಂದು ಧರ್ಮದ ಕುಟುಂಬಗಳೇ ವಾಸಿಸುವಂತ ಹನುಮನಪಾಳ್ಯ,ಹಳೇಪೇಟೆ ನರಸಿಂಹಪಾಳ್ಯದಲ್ಲಿ ಆಂಧ್ರ ನೊಂದಣಿಯ ವಾಹನದಲ್ಲಿ ಬಂದಂತ ನಾಲ್ವರು ಕ್ರಿಶ್ಚಿಯನ್ ಧರ್ಮ ಪ್ರಚಾರಕರು ಮೈಕ್ ಮೂಲಕ ಕ್ರಶ್ಚಿಯನ್ ಧರ್ಮಕ್ಕೆ ಮತಾಂತರವಾಗುವಂತೆ ತೆಲಗು ಭಾಷೆಯಲ್ಲಿ ಪ್ರಚೋದನೆ ನೀಡುತ್ತ ಮತಾಂತರವಾದರೆ ಸಿಗುವಂತ ಅನಕೂಲಗಳ ಕುರಿತಾಗಿ ಸಾರ್ವಜನಿಕವಾಗಿ ಪ್ರಚಾರ ಮಾಡುತ್ತ ಮನೆ ಮನೆಗೆ ತೆರಳಿ ಕ್ರಿಶ್ಚಿಯನ್ ಧರ್ಮದ ಸಾಹಿತ್ತಯದ ಪುಸ್ತಕಗಳನ್ನು ಹಂಚುತ್ತಿದ್ದರು ಇದನ್ನು ಕಂಡ ಸ್ಥಳೀಯ ಯುವಕರಾದ ಹರಿಶ್ ಯಾದವ್,ಮಂಜುನಾಥರೆಡ್ಡಿ, ಶಿವರಾಜ್ ಗೌಡ, ನಂದೀಶ್ ತಂಡದವರು ಪ್ರತ್ರಿಭಟಿಸಿದ್ದಾರೆ ಈ ಸಂದರ್ಭದಲ್ಲಿ, ಯುವ ಮುಖಂಡನೊಬ್ಬ ಫೋನ್ ಮೂಲಕ ಯುವಕರ ವಿರುದ್ದ ಹರಿಹಾಯ್ದಿದ್ದು ಈ ಸಂದರ್ಭದಲ್ಲಿ ಮಾತಿನ ಚಕಮುಖಿ ನಡೆದು ಮುಖಂಡ ಘಟನಾ ಸ್ಥಳಿಕ್ಕೆ ಆಗಮಿಸಿ ಧರ್ಮಪ್ರಚಾಕರ ಪರವಾಗಿ ವಾದಿಸಿದ್ದಾನೆ ಇದಕ್ಕೆ ಸ್ಥಳೀಯ ಜನತೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದಾಗ ಯುವಮುಖಂಡ ಜಾಗಕಾಲಿಮಾಡಿದ್ದಾನೆ.
ಯುವಕರೆ ನೇರವಾಗಿ ಪೋಲಿಸರಿಗೆ ಫೋನ್ ಮಾಡಿ ಘಟನೆ ವಿವರಿಸಿ ಕ್ರಿಶ್ಚಿಯನ್ ಧರ್ಮ ಪ್ರಚಾರಕರನ್ನು ಮತ್ತು ವಾಹನವನ್ನು ಪೋಲಿಸರಿಗೆ ಒಪ್ಪಿಸಿದ್ದಾರೆ.
ಕ್ರಿಶ್ಚಿಯನ್ ಧರ್ಮ ಮತಾಂತರದ ಸಾಹಿತ್ಯದ ಪುಸ್ತಕ ಹಾಗು ಬಿತ್ತಿ ಪತ್ರಗಳನ್ನ ರಸ್ತೆಯಲ್ಲಿ ಹಾಕಿದ ಸಾರ್ವಜನಿಕರು ಬೆಂಕಿ ಹಚ್ಚಿ ಸುಟ್ಟುಹಾಕಿರುತ್ತಾರೆ.
ಪಟ್ಟಣದ ಮೋತಿಲಾಲ್ ರಸ್ತೆಯಲ್ಲಿನ ಬೇಬಮ್ಮ ಎನ್ನುವರ ಮನೆಯಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಕಾರ್ಯಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದೆ ಆಂಧ್ರಪ್ರದೇಶದಿಂದ ಹಲವಾರು ಜನ ಇಲ್ಲಿಗೆ ಬಂದು ಹೋಗುತ್ತಿರುತ್ತಾರೆ ಎಂದು ಸಾರ್ವಜನಿಕರು ಆರೋಪಿಸಿರುತ್ತಾರೆ.
ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ:ಹರ್ಷವರ್ಧನ್