- ಕೋವಿಡ್ ನಿಭಂದನೆಗಳನ್ನು ಮೀರಿ ಹಗಲು ರಾತ್ರಿ ವ್ಯಾಪಾರ
- ಅಕ್ರಮ ಅವರೆಮಂಡಿಗಳಲ್ಲಿ ಮಾಸ್ಕ್ ಅಂತರ ಎರಡೂ ಇಲ್ಲ.
- ಕಾಟಾಚಾರಕ್ಕೆ ಬಂದು ಹೋಗುವ ಪೋಲಿಸರು
ಶ್ರೀನಿವಾಸಪುರ:- ಕೋವಿಡ್ ನಿಯಂತ್ರಿಸಲು ಸರ್ಕಾರ ಜಾರಿಗೆ ತಂದಿರುವ ವಿಕೇಂಡ್ ಕರ್ಫ್ಯೂ ಶ್ರೀನಿವಾಸಪುರ ಪಟ್ಟಣದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಕರ್ಫ್ಯೂ ಜಾರಿಗೆ ತರಬೇಕಿದ್ದ ಸ್ಥಳೀಯ ಆಡಳಿತ ಜಾಣಕುರಡು ಪ್ರದರ್ಶನ ಮಾಡುತ್ತಿದೆ.
ಶುಕ್ರವಾರ ರಾತ್ರಿಯಿಂದಲೇ ಕರ್ಫ್ಯೂ ಇದೆ ಎಂದು ತಡರಾತ್ರಿ ಪೋಲಿಸರು ತಮ್ಮ ವಾಹನಗಳಲ್ಲಿ ಮೈಕ್ ಮೂಲಕ ಪ್ರಚಾರ ಮಾಡಿದರಾದರೂ ಜಾರಿಗೊಳಿಸಲು ಯಾವ ಇಲಾಖೆಯೂ ಆಸಕ್ತಿ ತೊರಲಿಲ್ಲ
ಬೆಳಿಗ್ಗೆ 10 ಗಂಟೆಯ ತನಕ ಬೆರಳಣಿಕೆಯಷ್ಟು ಮಾರ್ಗಗಳಲ್ಲಿ ಕೆ.ಎಸ್.ಅರ್.ಟಿ.ಸಿ ಬಸ್ಸುಗಳು ಸಂಚರಿಸಿತಾದರೂ ಜನ ಸಂಚಾರ ಇಲ್ಲದೇ ಕಾಲಿ ವಾಹನಗಳು ಸಂಚರಿಸಿ 10 ಗಂಟೆಯ ನಂತರ ಡಿಪೋ ಸೇರಿಕೊಂಡವು. ಬಟ್ಟೆ,ಬಂಗಾರ ಚಪ್ಪಲಿ ಫ್ಯಾನ್ಸಿ.ಸ್ಠಷನರಿ ಜೆರಾಕ್ಸ್ ಅಂಗಡಿಗಳು ಬಾಗಿಲು ತೆರೆಯಲಿಲ್ಲ ಹೋಟೆಲ್,ದಿನಸಿ ಅಂಗಡಿಗಳು ತೆರೆದು ಕರ್ಫ್ಯೂ ನಡುವೇಯೂ ವ್ಯಾಪಾರ ಮಾಡಿದರು.
ಅಕ್ರಮ ಅವರೆಮಂಡಿ ವ್ಯಾಪಾರಸ್ಥರ ದೌಲು
ಎಂ.ಜಿ.ರಸ್ತೆಯಲ್ಲಿ ಅಕ್ರಮವಾಗಿ ನಡೆಸುತ್ತಿರುವ ಅವರೆಕಾಯಿ ಮಂಡಿ ವ್ಯಾಪಾರಸ್ಥರು ಅಂತರ ಕಾಪಾಡದೆ,ಮಾಸ್ಕ್ ಧರಿಸದೆ ಕೋವಿಡ್ ನಿಯಮ ಉಲ್ಲಂಘಿಸಿ ಪೋಲಿಸರ ಓಡಾಟದ ನಡುವೆಯೂ ರಾಜಾರೋಷವಾಗಿ ವಹಿವಾಟು ನಡೆಸುತ್ತ ದೌಲು ಪ್ರದರ್ಶಿಸಿದರು.
ವಿಕೇಂಡ್ ಕರ್ಪ್ಯೂ ವಿಫಲವಾಗಲು ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ನಡುವೆ ಸಮನ್ವಯತೆ ಇಲ್ಲದಿರುವುದೇ ಕಾರಣ ಎನ್ನುವ ಮಾತು ಕೇಳು ಬರುತ್ತಿದ್ದು ಕೆಲ ಅಧಿಕಾರಿಗಳು ವರ್ಗಾವಣೆ ಬಿಝಿಯಲ್ಲಿದ್ದರೆ ಇನ್ನೂ ಕೆಲವರು ಮುಂಬಡ್ತಿ ಪಡೆಯಲು ಬಿಝಿಯಾಗಿದ್ದಾರೆ ಹೀಗಾಗಿ ಬಹುತೇಕ ಅಧಿಕಾರಿಗಳು ತಾಲೂಕು ಕೇಂದ್ರದಲ್ಲಿ ಸಿಗುತ್ತಿಲ್ಲ.
ಸಬ್ ಇನ್ಸಪೇಕ್ಟರ್ ಗಳೇ ಇಲ್ಲದ ಸ್ಟೇ಼ನಗಳು
ತಾಲೂಕಿನ ಮೂರು ಪೋಲಿಸ್ ಠಾಣೆಗಳಲ್ಲಿ ಇರುವ ನಾಲ್ಕು ಸಬ್ ಇನ್ಸಪೇಕ್ಟರ್ ಹುದ್ದೆಗಳು ಹಾಗು ಒಂದು ಗ್ರಾಮಾಂತರ ವೃತ್ತ ನೀರಿಕ್ಷಕ ಹುದ್ದೆ ಖಾಲಿಯಾಗಿ ತಿಂಗಳುಗಳೆ ಆಗಿದೆ ಇಲ್ಲಿಗೆ ಯಾರು ಬರುತ್ತಿಲ್ಲ ಈ ಸ್ಥಾನಗಳಲ್ಲಿ ಎ.ಎಸ್.ಐ ಗಳದೇ ಕಾರುಬಾರು
ಕಾಟಾಚಾರಕ್ಕೆ ಬಂದು ಹೋಗುವ ಫೋಲಿಸರು.
ಬೆಳಿಗ್ಗೆ 10 ಗಂಟೆಗೆ ಕರ್ಫ್ಯೂ ನಿಭಂದನೆಗಳಂತೆ ಅತ್ಯವಶ್ಯ ಸಾಮಾನು ಸರಂಜಾಮು ಅಂಗಡಿಗಳ ಮುಂಗಟ್ಟು ಮುಚ್ಚಬೇಕು ನಿಗದಿತ 10 ಗಂಟೆ ಸಮಯಕ್ಕೆ ಕಾಟಾಚಾರಕ್ಕೆ ಪೋಲಿಸರು ವಾಹನಗಳಿಗೆ ಸೈರನ್ ಹಾಕಿಕೊಂಡು ಬಂದು ಹೊಗುತ್ತಾರೆ ಹೊರತು ಅಂಗಡಿ ತಗದಿದಿಯಾ ಮುಚ್ಚಿದಿಯಾ ಎಂಬುದನ್ನು ಸಹ ನೋಡುವುದಿಲ್ಲ ಇದು ಇಲ್ಲಿನ ಪೋಲಿಸ್ ವ್ಯವಸ್ಥೆ
ನಡೆಯದ ವಾರದ ಸಂತೆ.
ಶ್ರೀನಿವಾಸಪುರ ಪಟ್ಟಣದಲ್ಲಿ ಪ್ರತಿ ಶನಿವಾರ ನಡೆಯುತ್ತಿದ್ದ ವಾರದ ಸಂತೆ ಇಂದು ಕರ್ಪ್ಯೂ ಇದ್ದ ಹಿನ್ನಲೆಯಲ್ಲಿ ಸಂತೆ ಅನುಮತಿ ಇಲ್ಲದೆ ನಡೆಯಲಿಲ್ಲ
ಶಾಪ ಹಾಕಿದ ಸಂತೆ ವ್ಯಾಪರಸ್ಥರು
ನಾವು ಸಾಧಾರಣ ವ್ಯಾಪರಸ್ಥರು ವಾರಕ್ಕೊಮ್ಮೆ ಬಯಲಲ್ಲಿ ಅಂಗಡಿ ಇಟ್ಟು ವಹಿವಾಟು ನಡೆಸುವಂತ ನಮ್ಮ ವಹಿವಾಟು ಬೇಡ ಎನ್ನುವ ಅಧಿಕಾರಿಗಳು ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳು ಕಾಫಿ ಹೋಟೆಲ್ ನಡೆಸುತ್ತಿದ್ದರು ಜಾಣ ಕುರಡರಂತೆ ವರ್ತಿಸುತ್ತಾರೆ ಎಂದು ಆಕ್ರೋಶ ಹೋರಹಾಕಿದರು.