ಶ್ರೀನಿವಾಸಪುರ:ಮಾಸಿಕ ಚುಚ್ಚು ಮದ್ದು ಪಡೆದಿದ್ದ ಮೂರು ತಿಂಗಳ ಹಸುಗೂಸು ಮೃತ ಪಟ್ಟ ಹಿನ್ನಲೆಯಲ್ಲಿ ಹಸುಗೂಸಿನ ಪೋಷಕರು ಹಾಗು ಗ್ರಾಮಸ್ಥರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಹಾಗು ಸಿಬ್ಬಂದಿ ವಿರುದ್ದ ಪ್ರತಿಭಟನೆ ನಡೆಸಿರುವ ಘಟನೆ ಶ್ರೀನಿವಾಸಪುರ ತಾಲ್ಲೂಕಿನ ಸೋಮಯಾಜಲಪಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ನಡೆದಿದೆ ಹಸುಗೂಸುಗಳಿಗೆ ಮಾಸಿಕ ಚುಚ್ಚುಮದ್ದು ನೀಡುವ ಸಂಬಂದ ತಾಲೂಕಿನಲ್ಲಿ ಪ್ರತಿ ಗುರುವಾರ ಪೆಂಟಾವೆಲೆಂಟ್ ಚುಚ್ಚು ಮದ್ದು ನೀಡಲಿದ್ದು ಅದರಂತೆ ಸೋಮಯಾಜಲಪಲ್ಲಿ ಗ್ರಾಮದ ಸುಬ್ರಮಣಿ ಮತ್ತು ಗಂಗರತ್ನ ದಂಪತಿಯ ಮೂರು ತಿಂಗಳ ಗಂಡು ಮಗುವಿಗೂ ವೈದ್ಯಕೀಯ ಸಿಬ್ಬಂದಿಯಿಂದ ಚುಚ್ಚು ಮದ್ದು ಕೊಡಿಸಿರುತ್ತಾರೆ ಚುಚ್ಚು ಮದ್ದು ಪಡೆದ ಮಗುವಿಗೆ ತಡರಾತ್ರಿ ಜ್ವರ ಬಂದಿದ್ದು ಮಾರನೆಯ ದಿನ ಇಂದು ಶುಕ್ರವಾರ ಮಗುವನ್ನು ಸೋಮಯಾಜಲಪಲ್ಲಿ ಆರೋಗ್ಯ ಕೇಂದ್ರಕ್ಕೆ ಕರೆತಂದ ತಾಯಿ ಗಂಗರತ್ನ ಅಲ್ಲಿನ ಡಾ.ಸೌಮ್ಯ ಬಳಿ ತಪಾಸಣೆ ಮಾಡಿಸಿರುತ್ತಾರೆ. ಈ ಸಂದರ್ಭದಲ್ಲಿ ಮಗು ತೀವ್ರ ಜ್ವರದಿಂದ ಬಳಲುತ್ತಿದ್ದು ಶ್ರೀನಿವಾಸಪುರದಲ್ಲಿ ತಙ್ಞ ವೈದ್ಯರ ಬಳಿ ತಪಾಸಣೆ ಮಾಡಿಸಿ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಸಲಹೆ ನೀಡಿರುತ್ತಾರೆ ಅದರಂತೆ ಮಗುವನ್ನು ಶ್ರೀನಿವಾಸಪುರಕ್ಕೆ ಸಾಗಿಸುವಾಗ ಹಸುಗೂಸು ಮೃತ ಪಟ್ಟಿರುವ ಹಿನ್ನಲೆಯಲ್ಲಿ ಆಕ್ರೋಶಗೊಂಡ ಮಗವಿನ ಪೋಷಕರು ಸಂಬಂದಿಕರು ಜಮಾವಣೆಗೊಂಡು ಮಗುವಿನ ಶವವನ್ನು ಆಸ್ಪತ್ರೆ ಬಳಿ ಇಟ್ಟು ವೈದ್ಯರು ಮತ್ತು ಸಿಬ್ಬಂದಿಯ ವಿರುದ್ದ ಪ್ರತಿಭಟನೆ ನಡೆಸಿದರು.
ತಾಲೂಕು ವೈದ್ಯಾಧಿಕಾರಿಯ ವಿರುದ್ದವೂ ಆಕ್ರೋಶ
ಪ್ರತಿಭಟನೆ ನಡೆಯುತ್ತಿದ್ದ ಸೋಮಯಾಜಲಪಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಾಲೂಕಿನ ವೈದ್ಯಾಧಿಕಾರಿ ಡಾ.ವಿಜಯ ಆಗಮಿಸಿದಾದರು ಪ್ರತಿಭಟಣೆಕಾರರು ಅವರನ್ನು ತೀವ್ರವಾಗಿ ತರಾಟೆಗೆ ತಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಧಾವಿಸಿದ ಕೋಲಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್ ಮತ್ತು ತಾಲೂಕು ಆರೋಗ್ಯ ಮತ್ತು ಕುಟುಂಬ ಇಲಾಖೆ ಸಂಯೋಜಕ ಡಾ.ಚಂದನ್ ಶ್ರೀನಿವಾಸಪುರ ತಾಲ್ಲೂಕು ವೈದ್ಯಾಧಿಕಾರಿ ಡಾ.ವಿಜಯ ಅವರು ಪ್ರತಿಭಟಣೆಕಾರರ ಮನವೊಲಿಸಿ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ವಾಪಸ್ ಪಡೆದರು.
ಕಾರ್ಯನಿರ್ವಹಿಸುವ ವೈದ್ಯರಿಗೆ ರಕ್ಷಣೆ ಇಲ್ಲ ವೈದ್ಯರ ಅಳಲು!
ಸಾರ್ವಜನಿಕ ಜೀವನದಲ್ಲಿ ಕಾರ್ಯನಿರ್ವಹಿಸುವ ನಮಗೆ ರಕ್ಷಣೆ ಇಲ್ಲದೆ ನಾವು ಅತಂತ್ರ ಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ತಾಲೂಕಿನ ವೈದ್ಯರು ಪೋಲಿಸರ ಮುಂದೆ ಅಳಲು ತೊಡಿಕೊಂಡರು ಗುರುವಾರ ಮಾಸಿಕ ಚುಚ್ಚು ಮದ್ದು ಪಡೆದಿದ್ದ 3 ತಿಂಗಳ ಹಸುಗೂಸು ಮೃತಪಟ್ಟ ಹಿನ್ನಲೆಯಲ್ಲಿ ತಾಲೂಕಿನ ಸೋಮಯಾಜಲಹಳ್ಳಿ ಆರೋಗ್ಯ ಕೇಂದ್ರದ ವೈದ್ಯೆ ಡಾ.ಸೌಮ್ಯ ಹಾಗು ಸಿಬ್ಬಂದಿ ವಿರುದ್ದ ಮೃತ ಹಸುಗೂಸಿನ ಪೋಷಕರ ಸಂಬಧಿಕರು ಹಾಗು ಗ್ರಾಮಸ್ಥರು ಇದು ವೈದ್ಯರ ನಿರ್ಲಕ್ಷ್ಯದಿಂದ ಆಗಿರುವುದು ಎಂದು ಆಕ್ರೋಶ ಬರಿತರಾಗಿ ದಾಳಿ ನಡೆಸಿದ ಹಿನ್ನಲೆಯಲ್ಲಿ ಬದ್ರತಾ ದೃಷ್ಥಿಯಿಂದ ಪೋಲಿಸರು ವೈದ್ಯೆ ಡಾ.ಸೌಮ್ಯ ಅವರನ್ನು ರಕ್ಷಣೆ ನೀಡುವ ಸಲುವಾಗಿ ಶ್ರೀನಿವಾಸಪುರ ಠಾಣೆಗೆ ಕರೆತರಲಾಗಿದ್ದು ಈ ಹಿನ್ನಲೆಯಲ್ಲಿ ತಾಲೂಕಿನ ವೈದೈಕೀಯ ಇಲಾಖೆ ಸಂಯೋಜಕ ಡಾ.ಚಂದನ್ ತಾಲೂಕು ವೈದ್ಯಧಿಕಾರಿ ಡಾ.ವಿಜಯ ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಶ್ರೀನಿವಾಸ್ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಂಗವಾದಿನಾಗರಾಜು ಪೋಲಿಸ್ ಠಾಣೆಗೆ ಬೇಟಿ ನೀಡಿದ ಸಂದರ್ಭದಲ್ಲಿ ವೈದ್ಯರು ಮಾತನಾಡಿ ಹಸುಗೂಸು ನಿಧನಕ್ಕೂ ವೈದ್ಯೆಗೂ ಯಾವುದೇ ರಿತಿಯ ಸಂಭಂದ ಇಲ್ಲ ಅದರೂ ಅಲ್ಲಿನ ಜನ ನೆಪ ಮಾಡಿಕೊಂಡು ಡಾ.ಸೌಮ್ಯ ಹಾಗು ಸಿಬ್ಬಂದಿ ಮೇಲೆ ದಾಳಿ ಮಾಡಿದಲ್ಲದೆ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ಅಲವತ್ತುಕೊಂಡರು.
ವೈದ್ಯರ ಮೇಲೆ ದಾಳಿ ಸರಿಯಲ್ಲ ಬಂಗವಾದಿನಾಗರಾಜ್
ಸಾರ್ವಜನಿಕವಾಗಿ ಕಾರ್ಯನಿರ್ವಹಿಸುವಂತ ಸರ್ಕಾರಿ ನೌಕರರ ಮೇಲೆ ದಾಳಿ ಮಾಡುವುದು ಸರಿಯಲ್ಲ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಂಗವಾದಿನಾಗರಾಜ್ ಹೇಳಿದರು, ಹಸುಗೂಸಿನ ವಿಚಾರದಲ್ಲಿ ಡಾ.ಸೌಮ್ಯ ಅವರು ಚಿಕಿತ್ಸೆ ಸಂಬಂದ ಸಹಕಾರ ನೀಡಿರುತ್ತಾರೆ ಅದು ಫಲಕಾರಿಯಾಗದ ಹಿನ್ನಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ತಜ್ಞ ವೈದ್ಯರಲ್ಲಿಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ ಆದರೂ ಕೆಲವರು ಅವರ ಮೇಲೆ ದಾಳಿ ಮಾಡಿರುವುದು ಖಂಡನೀಯ ಎಂದರು ದಾಳಿ ಮಾಡಿರುವಂತವರ ವಿರುದ್ದ ಅಗತ್ಯ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿರುತ್ತಾರೆ.