ಕೋಲಾರ: ಸಿಬಿಐ ಅಧಿಕಾರಿಗಳೆಂದು ಮನೆಗೆ ನುಗ್ಗಿದ ಐವರು ಅಪರಿಚಿತರ ಗ್ಯಾಂಗ್ ಮನೆಯಲ್ಲಿದ್ದವರಿಗೆ ಬಂದೂಕ ತೋರಿಸಿ 20 ಲಕ್ಷ ನಗದು ಮತ್ತು 1 ಕೆಜಿ ಚಿನ್ನ ದರೋಡೆ ಮಾಡಿರುವ ಘಟನೆ ಇಲ್ಲಿನ ಕೋಲಾರ ನಗರದ ಸಿ.ಬೈರೇಗೌಡ ನಗರದಲ್ಲಿ ಸೋಮವಾರ ರಾತ್ರಿ ನಡದಿದೆ.
ಡಕಾಯಿತರಿಂದ ಹಣ ಬಂಗಾರ ಕಳೆದುಕೊಂಡವರನ್ನು ಕೋಲಾರ ಎಪಿಎಂಸಿ ಮಾಜಿ ಅಧ್ಯಕ್ಷ ರಮೇಶ್ ಕುಟುಂಬ ಸೋಮವಾರ ರಾತ್ರಿ ಎಂಟು ಗಂಟೆ ಸಮಯದಲ್ಲಿ ಸಿಬಿಐ ಅಧಿಕಾರಿಗಳೆಂದು ಹೇಳಿ ಮನೆಗೆ ನುಗ್ಗಿದ ಐದು ಮಂದಿ ದರೋಡೆಕೋರರು ಮನೆಯ ಯಜಮಾನ ರಮೇಶ್ ಮತ್ತು ಅವರ ಪತ್ನಿ ಪತ್ರನನ್ನು ಹಗ್ಗದಿಂದ ಕಟ್ಟಿ ದೇವರ ಕೋಣೆಯಲ್ಲಿ ಕೂಡಿ ಹಾಕಿ ಸುಮಾರು ಒಂದೂವರೆ ಗಂಟೆಯ ಕಾಲ ಸಂಪೂರ್ಣವಾಗಿ ಮನೆಯನ್ನು ಜಾಲಾಡಿ ದರೋಡೆ ಮಾಡಿದ್ದಾರೆ.
ಸೂರ್ಯ ನಟನೆಯ ತೆಲಗು ಸಿನಿಮಾ “ಗ್ಯಾಂಗ್ಯ್” ಶೈಲಿಯಲ್ಲಿ ದರೋಡೆ
ತೆಲಗಿನಲ್ಲಿ “ಗ್ಯಾಂಗ್ಯ್” ಹಾಗು ತಮಿಳುನಲ್ಲಿ “ತಾನಾ ಸೇಂದ್ರ ಕೂಟ” ಎಂದು 2018 ರಲ್ಲಿ ತಮಿಳು ನಟ ಸೂರ್ಯ ಹಾಗು ರಮ್ಯಕೃಷ್ಣ ಮತ್ತು ಕೀರ್ತಿ ಸುರೇಶ್ ನಟಿಸಿದ್ದ ಸಿನಿಮಾ ಶೈಲಿಯಲ್ಲಿ ಸಿಬಿಐ ಅಧಿಕಾರಿಗಳು ಮತ್ತು ಇನ್ಕಮ್ ಟ್ಯಾಕ್ಸ್ ಅಧಿಕಾರಿಗಳು ಎಂದು ಹೇಳಿಕೊಂಡು ಪುಸ್ತಕ ಹಾಗು ಪೈಲ್ ಗಳನ್ನು ಹಿಡಿದುಕೊಂಡು ಬಂದು ಮನೆಗೆ ಎಂಟ್ರಿ ಕೊಟ್ಟಿದ್ದಾರೆ ಅಪರಿಚಿತರು, ಅವರ ಮಾತಿನ ಶೈಲಿ ನಡವಳಿಕೆ ಮನೆಯರಿಗೆ ಅನುಮಾನ ಬಂದಿದೆ ಈ ಬಗ್ಗೆ ಮನೆಯವರು ಪ್ರಶ್ನೆಗಳನ್ನು ಕೇಳುತ್ತಿದ್ದಂತೆ ಕೈಯಲ್ಲಿದ್ದ ಪುಸ್ತಕ ಬಿಸಾಕಿ ಗನ್ ಹೊರತೆಗೆದು ಮನೆಯವರನ್ನು ಬೆದರಿಸಿದ ಅಪರಿಚಿತ ಗ್ಯಾಂಗ್ ಮನೆಯವರ ಕೈಕಾಲು ಕಟ್ಟಿ, ಕುತ್ತಿಗೆ ಬಳಿ ಚಾಕು ಇಟ್ಟು ಹೆದರಿಸಿದ್ದಾರೆ ನಂತರ ಮನೆಯಲ್ಲಿದ್ದ ನಗ ನಾಣ್ಯ ಅಭರಣಗಳನ್ನು ದೋಚಿಕೊಂಡು ದರೋಡೆಕೋರರು ತಾವು ಬಂದಿದ್ದ ವಾಹನದಲ್ಲೇ ಪರಾರಿಯಾಗಿದ್ದು ಅವರು ಹೋದ ಬಗ್ಗೆ ಖಾತ್ರಿ ಪಡಿಸಿಕೊಂಡ ಮನೆಯವರು ಕಿರುಚಾಡಿದ್ದಾರೆ ಇವರ ಕಿರುಚಾಟ ಕೇಳಿಸಿಕೊಂದ ನೆರೆಹೊರೆಯವರು ಆಗಮಿಸಿದಾಗ ದರೋಡೆ ಕೃತ್ಯ ಬೆಳಕಿಗೆ ಬಂದಿದೆ.ಸಿ.ಭೈರೇಗೌಡ ಬಡಾವಣೆಯ ನಿವಾಸಿ ರಮೇಶ್ ವ್ಯಾಪಾರಿ ಹಾಗೂ ಪೈನಾನ್ಸ್ ವ್ಯವಹಾರ ಮಾಡುತ್ತಿದ್ದರು ಎನ್ನಲಾಗಿದೆ
ನಗರ ಠಾಣಾ ಪೊಲೀಸರಿಗಿಂತ ಮೊದಲೇ ಸ್ಥಳಕ್ಕೆ ಆಗಮಿಸಿದ ಎಸ್ಪಿ ದೇವರಾಜು, ಮನೆಯವರಿಂದ ಮಾಹಿತಿ ಕಲೆ ಹಾಕಿದ್ದರು, ಅಲ್ಲದೆ ಇಡೀ ಬಡಾವಣೆಯನ್ನೆಲ್ಲಾ ಸುತ್ತಾಡಿ ಆರೋಪಿಗಳ ಸುಳಿವಿಗಾಗಿ ಹಡುಕಾಡಿದ್ದಾರೆ. ಆರೋಪಿಗಳು ಕೃತ್ಯ ಎಸಗುವ ಮುನ್ನ ಬಡಾವಣೆಯಲ್ಲಿ ಫೈಲ್ ಹಿಡಿದುಕೊಂಡು ಓಡಾಡಿರುವ ದೃಶ್ಯಗಳು ಬಡಾವಣೆಯ ವಿವಿಧ ಮನೆಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ.
ಬೆಚ್ಚಿ ಬಿದ್ದಿರುವ ಕೋಲಾರ ನಗರ
ಸೋಮವಾರ ರಾತ್ರಿ ನಡೆದ ದರೋದೆ ಘಟನೆಯಿಂದ ಸಿ.ಬೈರೇಗೌಡ ಬಡಾವಣೆಯ ನಿವಾಸಿಗರೇ ಅಲ್ಲ ಇಡಿ ಕೋಲಾರ ನಗರದ ಜನತೆ ಭಯಬೀತರಾಗಿ ಆತಂಕಗೊಂಡಿದ್ದಾರೆ.
ವರದಿ:ಸುದರ್ಶನ್