- ಪ್ರಭಾಸ್-ಪೂಜಾ ಹೆಗ್ಡೆ ನಟನೆಯ ಸಿನಿಮಾ
“ರಾಧೆ ಶ್ಯಾಮ್: ಸಿನಿಮಾ ಕುರಿತು ಮಿಶ್ರ ಪ್ರತಿಕ್ರಿಯೆ - ಪ್ರಭಾಸ್ ವೀರಾಭಿಮಾನಿಯ ಆತ್ಮಹತ್ಯೆ
ಆಂಧ್ರದ ಕರ್ನೂಲ್ ನಗರದಲ್ಲಿ ಘಟನೆ
ನ್ಯೂಜ್ ಡೆಸ್ಕ್: ಬಾಹುಬಲಿ ಪ್ರಭಾಸ್ ನಟನೆಯ ಬಹುನೀರಿಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ರಾಧೆ ಶ್ಯಾಮ್’ ಎರಡು ದಿನಗಳ ಹಿಂದೆಯಷ್ಟೆ ಬಿಡುಗಡೆಯಾಗಿದೆ ಈ ಸಿನಿಮಾ ಕುರಿತಾಗಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನಲೆಯಲ್ಲಿ ಪ್ರಭಾಸ್ ವೀರಾಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿರುತ್ತದೆ.
ಮೃತ ಪ್ರಭಾಸ್ ಅಭಿಮಾನಿಯನ್ನು ಕರ್ನೂಲ್ ನಗರದ ತಿಲಕ್ ನಗರ ಪ್ರದೇಶದ ವೆಲ್ಡಿಂಗ್ ಕೆಲಸಗಾರ ರವಿತೇಜ (24) ಎಂದು ಗುರುತಿಸಲಾಗಿದೆ.
ಸಿನಿಮಾ ನಟನ ಮೇಲಿನ ಅಭಿಮಾನದಿಂದ ಅವಿವೇಕದ ಆತುರದ ನಿರ್ಧಾರ ತೆಗೆದುಕೊಳ್ಳುವಮೂಲಕ ತನ್ನ ಕುಟುಂಬವನ್ನು ದುಖಃದ ಮಡುವಿಗೆ ನೂಕಿದ್ದಾನೆ.
ಪ್ರಭಾಸ್ ನಾಯಕನಾಗಿ ನಟಿಸಿರುವ ಪ್ಯಾನ್ ಇಂಡಿಯಾ ಸಿನಿಮಾ ‘ರಾಧೆ ಶ್ಯಾಮ್’ ಮಾರ್ಚ್ 11 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿತ್ತು. ಚಿತ್ರವು ಸಿನಿಮಾ ಪ್ರೇಕ್ಷಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆದಿತ್ತು ವಿಮರ್ಶೆಗಳನ್ನು ಸಹಿಸದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಬ್ಲಾಕ್ ನಲ್ಲಿ ಟಿಕೆಟ್ ಖರಿದಿಸಿ ಸಿನಿಮಾ ನೋಡಿಬಂದವನೆ ಹಳ್ಳಿಯಲ್ಲಿರುವ ತಾಯಿಗೆ ಫೋನ್ ಮಾಡಿ ಸಿನಿಮಾ ನೋಡಿದೆ ಸಿನಿಮಾ ಕುರಿತಾಗಿ ಸ್ನೇಹಿತರು ಉತ್ತಮ ಅಭಿಪ್ರಾಯ ವ್ಯಕ್ತಪಡಿಸುತ್ತಿಲ್ಲ ಎಂದು ತಾಯಿ ಮೇರಿಗೆ ಹೇಳಿದ್ದಾನೆ ಅವರು ಸಮಾಧಾನ ಪಡಿಸಿದ್ದಾರೆ ಆದರೂ ತಾನು ವಾಸವಿದ್ದ ತನ್ನ ದೊಡ್ಡಮ್ಮನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾರನೆ ದಿನ ಬೆಳಿಗ್ಗೆ ಬೆಳಕಿಗೆ ಬಂದಿದೆ. ಘಟನೆಯ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಇಂದಿನ ಪೀಳಿಗೆಯ ಸಿನಿಕತನ ಅವಿವೇಕದ ನಿರ್ಧರಗಳು!
ಇಂದಿನ ಯುವ ಪೀಳಿಗೆ ಸಣ್ಣ ಪುಟ್ಟ ವಿಷಯಗಳಿಗೂ ಭಾವನಾತ್ಮಕವಾಗಿ ಉದ್ವೇಗಕ್ಕೆ ಒಳಗಾಗಿ ಯಾರೂ ನಿರೀಕ್ಷಿಸದಂತಹ ಹುಚ್ಚು ಕೃತ್ಯಗಳಿಂದ ಕುಟುಂಬಸ್ಥರು ಹಾಗೂ ಸ್ನೇಹಿತರನ್ನು ಕಷ್ಟಕ್ಕೆ ದೂಡುವುದು ಸಂಕಷ್ಟಕ್ಕೆ ಸಿಲಿಕಿಸುವುದು ಸಾಮಾನ್ಯವಾಗಿದೆ.
ಮೂನ್ನೂರು ಕೋಟಿ ವೆಚ್ಚದ “ರಾಧೆ ಶ್ಯಾಮ್” ಸಿನಿಮಾ. ರಾಧೆ ಶ್ಯಾಮ್ ಸಿನಿಮಾ 1976 ರಲ್ಲಿ ನಡೆದಂತ ನೈಜ ಘಟನೆ ಆಧಾರಿತವಾಗಿ ಪಿರಿಯಾಡಿಕ್ ಲವ್ ಸ್ಟೋರಿಯನ್ನು ಸುಮಾರು 300 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಬೃಹತ್ ಬಜೆಟ್ನೊಂದಿಗೆ ಹೊಂದಿಕೊಳ್ಳುವ ತೆರೆಗೆ ತಂದಿರುತ್ತಾರೆ. ಭಾರೀ ನಿರೀಕ್ಷೆಗಳ ನಡುವೆ ತೆರೆಕಂಡ ರಾಧೆ ಶ್ಯಾಮ್ ಸಿನಿಮಾ ಪ್ರೇಕ್ಷಕರಿಂದ ಮಿಶ್ರ ಟಾಕ್ ಪಡೆದುಕೊಂಡಿದೆ.ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ.