ತಿರುಪತಿ:ತಾಯಿ ಸತ್ತಿರುವ ವಿಷಯ ತಿಳಿಯದೆ ಮಲಗಿರಬಹುದು ಎಂದು ಹತ್ತು ವರ್ಷದ ಬಾಲಕನೊರ್ವ ಮೂರು ದಿನಗಳ ಕಾಲ ತನ್ನ ತಾಯಿಯ ಮೃತ ದೇಹದೊಂದಿಗೆ ಮನೆಯಲ್ಲೇ ಉಳಿದು ಕೊಂಡ ದಾರುಣ ಘಟನೆ ಆಂಧ್ರದ ತಿರುಪತಿ ನಗರದಲ್ಲಿ ನಡೆದಿರುತ್ತದೆ.
ಬೊರಲು ಮಲಗಿದ್ದ ತಾಯಿಯನ್ನು ಎಬ್ಬಿಸದೆ ಮನೆಯಲ್ಲಿ ಫ್ರೀಡ್ಜ್ ನಲ್ಲಿದ್ದ ತಿಂಡಿ ತಿಂದುಕೊಂಡು ಸ್ಕೂಲಿಗೂ ಹೋಗಿ ಬಂದ ಮುಗ್ದ ಬಾಲಕನ ಕಥೆಯಿದು.
ತನ್ನ ತಾಯಿ ಹುಷಾರಿಲ್ಲದೆ ಮಲಗಿದ್ದಾಳೆ ಅವಳಿಗ್ಯಾಕೆ ತೊಂದರೆ ಕೊಟ್ಟು ಎಬ್ಬಿಸಬೇಕು ಎಂದು ತಾನೆ ಸಾಹಸ ಪಟ್ಟು ಸ್ಕೂಲಿಗೆ ಹೋಗಿಬರುತ್ತಿದ್ದ ಹಾಗೆ ಮೂರು ದಿನಗಳು ಕಳೆದು ಹೋಗಿದೆ ನಾಲ್ಕನೇ ದಿನ ಬಾಲಕನ ಸೋದರ ಮಾವ ಫೋನ್ ಮಾಡಿರುತ್ತಾನೆ ಅದಕ್ಕೆ ಉತ್ತರಿಸಿದ ಬಾಲಕ ಅಮ್ಮ ನಾಲ್ಕು ದಿನದಿಂದ ನಿದ್ದೆ ಮಾಡುತ್ತಿದ್ದಾರೆ ನಾನು ಎಬ್ಬಿಸಿಲ್ಲ ಎಂದಾಗ ಫೋನ್ ಮಾಡಿದ ವ್ಯಕ್ತಿ ಗಾಭರಿಯಿಂದ ಮನೆಗೆ ಬಂದು ನೋಡಿದಾಗ ಬಾಲಕನ ತಾಯಿ ಮೃತಪಟ್ಟಿರುವುದು ಕಂಡುಬಂದಿದೆ,ಮೃತಳನ್ನು ತಿರುಪತಿಯ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುವ ಟಿ.ರಾಜ್ಯಲಕ್ಷ್ಮಿ (41) ಎಂದು ಗುರುತಿಸಲಾಗಿದ್ದು ಕೌಟುಂಬಿಕ ಸಮಸ್ಯೆಯಿಂದ ನಾಲ್ಕು ವರ್ಷಗಳಿಂದ ಪತಿಯಿಂದ ದೂರವಾಗಿದ್ದ ಆಕೆ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿ ಮಾಡುತ್ತಿದ್ದು,ಒಂದು ವರ್ಷದ ಹಿಂದೆ ತಿರುಪತಿಗೆ ವಾಪಸ್ಸಾಗಿ ಸ್ಥಳೀಯ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತ ತನ್ನ 10 ವರ್ಷದ ಮಗ ಶ್ಯಾಮಕಿಶೋರ್ ಜೊತೆ ವಾಸಿಸುತ್ತಿದ್ದಾರೆ. ಮಾರ್ಚ್ 8 ರಂದು ರಾತ್ರಿ ರಾಜ್ಯಲಕ್ಷ್ಮಿ ವಾಂತಿ ಮಾಡಿಕೊಂಡು ಮಂಚದಿಂದ ಕೆಳಗೆ ನೆಲದ ಮೆಲೆ ಬೋರ್ಲಾ ಬಿದ್ದಿದ್ದಾರೆ. ಮಗ ಶ್ಯಾಮಕಿಶೋರ್ ಗೆ ಏನು ಯಾಕೆ ಎಂದು ಗ್ರಹಿಸಲು ಸಾದ್ಯವಾಗಿಲ್ಲ. ಅಮ್ಮ ನಿದ್ದೆ ಮಾಡುತ್ತಿದ್ದಾರೆ ಎಂದುಕೊಂಡು ಮೂರು ದಿನ ಇದ್ದದ್ದನ್ನು ತಿಂದುಕೊಂಡು ಶಾಲೆಗೆ ಹೋಗುತ್ತಿದ್ದ ನಾಲ್ಕನೇ ದಿನ ಮೃತ ದೇಹದಿಂದ ದುರ್ವಾಸನೆ ಬಂದಿರುತ್ತದೆ ಆದರೂ ಅವನು ಏನು ತಿಳಿಯದೆ ಏನನ್ನು ಹೇಳದೆ ಶಾಲೆಗೆ ಹೋಗಿದ್ದಾನೆ ಮನೆಯ ವಿಷಯಗಳನ್ನು ಹೊರಗೆ ಯಾರ ಬಳಿ ಏನನ್ನು ಮಾತನಾಡ ಬೇಡ ಎಂಬ ಅಮ್ಮನ ಮಾತುಗಳೇ ಇದಕ್ಕೆ ಕಾರಣ ಎನ್ನಲಾಗಿದ್ದು, ಈ ಬಗ್ಗೆ ಸ್ಥಳೀಯ ಪೋಲಿಸ್ ಎಸ್ಐ ವಿನೋದಕುಮಾರ್ಗೆ ಬಾಲಕನೊಂದಿಗೆ ಮಾತನಾಡಿದಾಗ ಬಾಲಕ ಮುಗ್ದವಾಗಿ ಹೀಗೆ ಉತ್ತರಿಸಿರುತ್ತಾನೆ
.ಬಾಲಕನ ಮಾತುಗಳನ್ನು ಕೇಳುತ್ತಿದ್ದ ಮನೆಯ ನೆರೆ ಹೊರೆಯವರು,ಪೋಲಿಸರು ಸುತ್ತಮುತ್ತಲಿನವರು ಅಲ್ಲಿದ್ದವರು ಕಣ್ಣೀರಿಟ್ಟಿದ್ದಾರೆ.