ಶ್ರೀನಿವಾಸಪುರ: ಬಲಿಜ ಸಮುದಾಯಕ್ಕೆ ಹಿಂದುಳಿದ 2ಎ ವರ್ಗಕ್ಕೆ ಸೇರಿಸಲು ಸರ್ಕಾರದ ಮಟ್ಟದಲ್ಲಿ ಒತ್ತಡ ಹೇರಿ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಶಾಸಕ ರಮೇಶ್ ಕುಮಾರ್ ಅಶ್ವಾಸನೆ ನೀಡಿದರು. ಅವರು ಇಂದು ತಾಲೂಕು ಬಲಿಜ ಸಂಘ ಹಾಗು ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಕೈವಾರ ಶ್ರೀ ಯೋಗಿ ನಾರಯಣ ಯತಿಂದ್ರರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ತಾತಯ್ಯನವರು ತತ್ವಜ್ಙಾನಿಗಳಾಗಿ ಸಮಾಜದ ಹಿತಕ್ಕಾಗಿ ಕಾಲಜ್ಙಾನ ರಚಿಸಿದ ಯೋಗಿಗಳು ಎಂದು ಹೇಳಿದರು. ಪಾಲ್ಗುಣ ಮಾಸದ ಹುಣ್ಣಿಮೆಯಂದು ಯೋಗಿ ನಾರಯಣ ಯತಿಂದ್ರರ ಜಯಂತಿ ಆಚರಿಸಿದರೆ ಅರ್ಥ ಪೂರ್ಣವಾಗಿರುತ್ತದೆ. ಇದನ್ನು ಮುಂದುವರೆಸಿ ಈ ಬಗ್ಗೆ ಸರ್ಕಾರಕ್ಕೂ ಸಹ ಮನವಿ ಮಾಡುತ್ತೇನೆ, ಬಲಿಜ ಸಮುದಾಯದ ನೀವು ಒಗ್ಗಾಟ್ಟಾಗಿ ಸರ್ಕಾರದಿಂದ ಸಿಗುವ ಸೌಲಭ್ಯಗಳು ಪಡೆಯಲು ಮುಂದಾಗುವಂತೆ ಹೇಳಿದರು.
ಶ್ರೀ ಯೋಗಿ ನಾರಯಣ ಯತಿಂದ್ರರ ಜಯಂತಿ ಶೋಭಾ ಯಾತ್ರೆಯಲ್ಲಿ ಭಾಗವಹಿಸಿದ್ದ ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಸಮಾಜದ ಸುಧಾರಣೆಗೆ ಶ್ರೀ ಯೋಗಿ ನಾರಯಣ ಯತಿಂದ್ರರು ಸಮಾಜದ ಒಳಿತು ಬಯಸಿ ಕಾಲಜ್ಙಾನ ರಚಿಸಿ ತತ್ವಪದಗಳನ್ನು ಹಾಡುವ ಮೂಲಕ ಜನತೆಯನ್ನು ಭಕ್ತಿಮಾರ್ಗದತ್ತ ಕರೆದುಕೊಂಡು ಸಾಗಿದ್ದರು ಅವರ ಜಯಂತಿ ಕಾರ್ಯಕ್ರಮವನ್ನು ಸರ್ಕಾರ ಮಾಡಲು ಮುಂದಾಗಿರುವುದು ಒಳ್ಳೆಯ ಪ್ರಯತ್ನ ಎಂದರು.
ತಾಲ್ಲೂಕಿನಾದ್ಯಂತ ಇರುವಂತ ಬಲಿಜ ಸಮುದಾಯದ ಮುಖಂಡರು ಹೋಬಳಿವಾರು ಶ್ರೀ ಯೋಗಿ ನಾರಯಣ ಯತಿಂದ್ರರ ಭಾವ ಚಿತ್ರ ಇಟ್ಟು ತಂದಿದ್ದ ಬೆಳ್ಳಿ ರಥ ಹಾಗು ಪುಷ್ಪ ಪಲ್ಲಕ್ಕಿಗಳು ಶೋಭಾ ಯಾತ್ರೆಯಲ್ಲಿ ಭಾಗವಹಿಸಿದ್ದವು.
ಕಾರ್ಯಕ್ರಮವನ್ನು ತಾಲೂಕು ಬಲಿಜ ಸಂಘದ ಅಧ್ಯಕ್ಷ ಬಿ.ಎಲ್. ರಾಮಣ್ಣ, ಉದ್ಘಾಟಿಸಿದರು ಉಪ ತಹಸೀಲ್ದಾರ್ ಮನೋಹರ್ ಮಾನೆ, ಪುರಸಭಾ ಮುಖ್ಯಾಧಿಕಾರಿ ಸತ್ಯನಾರಾಯಣ ತಾಲ್ಲೂಕು ಬಲಿಜ ಸಂಘದ ಹಿರಿಯ ಮುಖಂಡ ಪುರಸಭೆ ಮಾಜಿ ಅಧ್ಯಕ್ಷರುಗಳಾದ ಸೂರ್ಯನಾರಾಯಣ, ಮತ್ತು ಬಿ.ಎಂ. ಪ್ರಕಾಶ್, ಸದಸ್ಯ ಬಾಸ್ಕರ್, ಯಲ್ದೂರು ದಿನೇಶ್, ಎಲ್.ವಿ.ಗೋವಿಂದಪ್ಪ,ಡಾ.ಗೋವಿಂದಪ್ಪ,ವಿಜಯಭಾಸ್ಕರ್,ಶಾಗತ್ತೂರು ನಾರಾಯಣಸ್ವಾಮಿ, ಪಚಾರಮಾಕಲಹಳ್ಳಿ ಕೃಷ್ಣಮೂರ್ತಿ, ಹೊದಲಿ ಶ್ರೀನಿವಾಸಯ್ಯ, ಜೆ.ಸಿ.ಬಿ. ಮಂಜು ಮುಂತಾದವರು ಇದ್ದರು.
ಶ್ರೀ ಯೋಗಿ ನಾರಯಣ ಯತಿಂದ್ರರ ಜಯಂತಿ ಅಂಗವಾಗಿ ಪಟ್ಟಣದ ಸರ್ಕಾರಿ ಕಚೇರಿಗಳಿಗೆ ಯೋಗಿ ನಾರಯಣ ಯತಿಂದ್ರರ ಫೋಟೋಗಳನ್ನು ಯುವ ಮುಖಂಡರಾದ ಕೆ.ಇ.ಬಿ ಸುರೇಂದ್ರ ಮತ್ತು ದುರ್ಗಾಪ್ರಸಾದ್ ವಿತರಿಸಿದರು.