ಶ್ರೀನಿವಾಸಪುರ:– ಶ್ರೀನಿವಾಸಪುರ ಪಟ್ಟಣದಲ್ಲೂ ಗುಂಜೂರು ಶ್ರೀನಿವಾಸರೆಡ್ಡಿ ಬಣದ ಕಾರ್ಯಚಟುವಟಿಕೆಗಳು ಫುಲ್ ಜೋಶ್ ಪಡೆದುಕೊಂಡಿದೆ ಪಟ್ಟಣದ ಪ್ರತಿಷ್ಠಿತ ನೆತ್ತೊಳ್ಳು ಕುಟುಂಬದ ಬಹುತೇಕ ಸದಸ್ಯರು ಗುಂಜೂರುಶ್ರೀನಿವಾಸರೆಡ್ಡಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ನೆತ್ತೊಳ್ಳು ಕುಟುಂಬದ ಹಿರಿಯ ಸದಸ್ಯ ಸಿತಾರಾಮಪ್ಪ ನೇತೃತ್ವದಲ್ಲಿ ಕೆಲ ಸದಸ್ಯರು ಬಿ.ಎಲ್.ಪ್ರಕಾಶ್ ಸಮ್ಮಖದಲ್ಲಿ ಗುಂಜೂರುಶ್ರೀನಿವಾಸರೆಡ್ಡಿ ಬಣಕ್ಕೆ ಸೇರ್ಪಡೆಯಾಗಿದ್ದು ಈ ಸಂದರ್ಭದಲ್ಲಿ ಮುಖಂಡ ಗುಂಜೂರುಶ್ರೀನಿವಾಸರೆಡ್ಡಿ ಮಾತನಾಡಿ ಬಿ.ಎಲ್. ಪ್ರಕಾಶ್ ಮಾರ್ಗದರ್ಶನದಲ್ಲಿ ನನ್ನ ಬಣಕ್ಕೆ ಬಂದಿದ್ದೀರಾ ನಿಮಗೆ ಎಲ್ಲಾ ರಿತಿಯಲ್ಲೂ ಬೆಂಬಲ ಇರುತ್ತದೆ ನನ್ನ ರಾಜಕಾರಣಕ್ಕೆ ನಿಮ್ಮ ಸಹಕಾರ ಅತ್ಯಗತ್ಯವಾಗಿ ಬೇಕು ನನ್ನ ನಾಯಕತ್ವದಲ್ಲಿ ಯುವ ನಾಯಕತ್ವಕ್ಕೆ ಹೆಚ್ಚು ಆದ್ಯತೆ ನೀಡುವುದಾಗಿ ಹೇಳಿದರು.
ಬಿ.ಎಲ್.ಪ್ರಕಾಶ್ ಮಾತನಾಡಿ ತಾಲೂಕಿನ ಸಂಪ್ರದಾಯಿಕ ರಾಜಕಾರಣಕ್ಕೆ ಬದಲಾವಣೆ ಅಗತ್ಯವಾಗಿದೆ ಇದಕ್ಕಾಗಿ ಜನರ ಹಿತ ಬಯಸಿ ಬದಾಯವಣೆಯತ್ತ ಸಾಗೋಣ ಎಂದರು. ಶ್ರೀನಾಥ್,ಕೃಷ್ಣಪ್ಪ,ರಾಮಕೃಷ್ಣ,ನರೇಶ್,ಸತ್ಯಪ್ಪ,ನಾಗೇಶ್, ಮಿಶನ್ ವೆಂಕಟ್ರಾಮಪ್ಪ ಮುಂತಾದವರು ಗುಂಜೂರು ಶ್ರೀನಿವಾಸರೆಡ್ಡಿ ಬಣಕ್ಕೆ ಸೇರ್ಪಡೆಯಾದರು.
ಕಾರ್ಯಕ್ರದಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರಾಜಶೇಖರರೆಡ್ಡಿ ಹಿಂದುಳಿದ ಯುವ ಮುಖಂಡ ಶ್ರೀರಾಮ್ ಬೈಚಪ್ಪ ಮುಂತಾದವರು ಇದ್ದರು.