ನ್ಯೂಜ್ ಡೆಸ್ಕ್:-ಆಂಧ್ರದ ಕರಾವಳಿಯಲ್ಲಿ ಬ್ರೀಟಿಷರ ವಿರುದ್ದ ಸಮರ ಸಾರಿದ್ದ ಸ್ವಾತಂತ್ರ್ಯ ಸಮರ ಯೋಧ ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ ರಾಮಚರಣ್ ಮತ್ತು ಧ್ವನಿ ಇಲ್ಲದವರ ಧ್ವನಿಯಾದ ಕೊಮುರಂ ಭೀಮನಾಗಿ jr NTR ನಟನೇಯ RRR ಸಿನಿಮಾ ನಾಲ್ಕು ವರ್ಷಗಳ ಹಿಂದೆ ಇಬ್ಬರು ಸ್ಟಾರ್ ಕಾಸ್ಟ್ ಗಳ ಸಿನಿಮಾ ಶುರುವಾದ ದಿನದಿಂದಲೇ ಚಿತ್ರದ ಮೇಲಿನ ನಿರೀಕ್ಷೆಗಳು ಗರಿಗೆದರಿವೆ. ರಾಷ್ಟ್ರವ್ಯಾಪ್ತಿ ಪ್ರಚಾರದಲ್ಲಿದ್ದ ರಾಜಮೌಳಿ ಶೈಲಿಯ ಮೇಕಿಂಗ್ ಹಿನ್ನಲೆಯಲ್ಲಿ RRR ಚಿತ್ರಕ್ಕೆ ದುಪ್ಪಟ್ಟು ನಿರೀಕ್ಷೆಗಳನ್ನು ಹೆಚ್ಚಿಸಿತು ಕರೋನಾ ದುರಂತ, ಥಿಯೇಟರ್ಗಳು ಮತ್ತು ಆಂಧ್ರದಲ್ಲಿ ಟಿಕೆಟ್ ದರಗಳ ರಗಳೆ ಸೇರಿದಂತೆ ವಿವಿಧ ಸಮಸ್ಯೆಗಳಿಂದ ಬಿಡುಗಡೆಗೆ ವಿಳಂಬವಾಗಿದ್ದ ಚಿತ್ರ ಅಂತಿಮವಾಗಿ ಶುಕ್ರವಾರ ವಿಶ್ವದಾದ್ಯಂತ ಬಿಡುಗಡೆಯಾಗಿದೆ.
ಏತನ್ಮಧ್ಯೆ, ಬ್ರಿಟಿಷ್ ಗವರ್ನರ್ ಸ್ಕಾಟ್ ಅದಿಲಾಬಾದ್ಗೆ ಭೇಟಿ ನೀಡುತ್ತಾನೆ ಮತ್ತು ಮಲ್ಲಿ ಎಂಬ ಗೊಂಡ ಮಗುವನ್ನು ದೆಹಲಿಗೆ ಕರೆದೊಯ್ಯುತ್ತಾನೆ. ಗೊಂಡ ಬುಡಕಟ್ಟಿನ ಕಾವಲುಗಾರನಾದ ಕೊಮುರಂ ಭೀಮ್ ಮಗುವನ್ನು ತನ್ನ ತಾಯಿಯ ಬಳಿಗೆ ಕರೆದೊಯ್ಯಲು ದೆಹಲಿಗೆ ಪ್ರಯಾಣಿಸುತ್ತಾನೆ. ಮಲ್ಲಿಗೆ ಬ್ರಿಟಿಷರ ಕೋಟೆ ಆಚೆಗೆ ತರುವುದು ಕಷ್ಟ. ಆ ಕ್ಷಣದಲ್ಲಿ ಅಲ್ಲೂರಿಗೆ ಭೀಮನ ಪರಿಚಯವಾಗುತ್ತದೆ. ಇಬ್ಬರ ನಡುವೆ ಸ್ನೇಹ ಏರ್ಪಡುತ್ತದೆ.ನಂತರ ಸ್ನೇಹಿತರಾದವರ ಇಬ್ಬರ ಎರಡೂ ಗುರಿಗಳು ಸಾಧಿಸಿದರ? ಅಜಯ್ ದೇವಗನ್ ಮತ್ತು ಶ್ರಿಯಾ ಕಥೆ ತೆರೆಯ ಮೇಲೆ ನೋಡಬೇಕು.ಅಲ್ಲೂರಿ ಸೀತಾರಾಮರಾಜ್ ಮತ್ತು ಕೊಮುರಂ ಭೀಮ್ ಭೇಟಿಯಾದದ್ದು ಇತಿಹಾಸದಲ್ಲಿ ಎಲ್ಲಿಯೂ ದಾಖಲೆಗಳು ಇಲ್ಲ. ಆದರೂ ಇಬ್ಬರ ಭೇಟಿಯಾಗುತ್ತಾರೆ ಎಂಬ ಕಲ್ಪಿತ ಸಿಂಪಲ್ ಕಥೆಯನ್ನು ನಿರ್ದೇಶಕ ರಾಜಮೌಳಿ ‘ಆರ್ಆರ್ಆರ್’ (ರಣಂ.. ರೌದ್ರಂ.. ರುಧಿರಂ) ಅದ್ಭುತವಾಗಿ ಚಿತ್ರವನ್ನಾಗಿಸಿ ತೆರೆಗೆ ತಂದಿದ್ದಾರೆ.
ಏತನ್ಮಧ್ಯೆ, ಬ್ರಿಟಿಷ್ ಗವರ್ನರ್ ಸ್ಕಾಟ್ ಅದಿಲಾಬಾದ್ಗೆ ಭೇಟಿ ನೀಡುತ್ತಾನೆ ಮತ್ತು ಮಲ್ಲಿ ಎಂಬ ಗೊಂಡ ಮಗುವನ್ನು ದೆಹಲಿಗೆ ಕರೆದೊಯ್ಯುತ್ತಾನೆ. ಗೊಂಡ ಬುಡಕಟ್ಟಿನ ಕಾವಲುಗಾರನಾದ ಕೊಮುರಂ ಭೀಮ್ ಮಗುವನ್ನು ತನ್ನ ತಾಯಿಯ ಬಳಿಗೆ ಕರೆದೊಯ್ಯಲು ದೆಹಲಿಗೆ ಪ್ರಯಾಣಿಸುತ್ತಾನೆ. ಮಲ್ಲಿಗೆ ಬ್ರಿಟಿಷರ ಕೋಟೆ ಆಚೆಗೆ ತರುವುದು ಕಷ್ಟ. ಆ ಕ್ಷಣದಲ್ಲಿ ಅಲ್ಲೂರಿಗೆ ಭೀಮನ ಪರಿಚಯವಾಗುತ್ತದೆ. ಇಬ್ಬರ ನಡುವೆ ಸ್ನೇಹ ಏರ್ಪಡುತ್ತದೆ. ಅದರ ನಂತರ ಏನಾಯಿತು. ಎರಡೂ ಗುರಿಗಳನ್ನು ಸಾಧಿಸಲಾಗಿದೆಯೇ? ಅಜಯ್ ದೇವಗನ್ ಮತ್ತು ಶ್ರಿಯಾ ಕಥೆ ತೆರೆಯ ಮೇಲೆ ನೋಡಬೇಕು. ಅಲ್ಲೂರಿ ಸೀತಾರಾಮರಾಜ್ ಮತ್ತು ಕೊಮುರಂ ಭೀಮ್ ಭೇಟಿಯಾದದ್ದು ಇತಿಹಾಸದಲ್ಲಿ ಎಲ್ಲಿಯೂ ದಾಖಲೆಗಳು ಇಲ್ಲ. ಆದರೂ ಇಬ್ಬರ ಭೇಟಿಯಾಗುತ್ತಾರೆ ಎಂಬ ಕಲ್ಪಿತ ಸಿಂಪಲ್ ಕಥೆಯನ್ನು ನಿರ್ದೇಶಕ ರಾಜಮೌಳಿ ‘ಆರ್ಆರ್ಆರ್’ (ರಣಂ.. ರೌದ್ರಂ.. ರುಧಿರಂ) ಅದ್ಭುತವಾಗಿ ಚಿತ್ರವನ್ನು ತೆರೆಗೆ ತಂದಿದ್ದಾರೆ.
RRR ಸಿನಿಮಾ ವಿಮರ್ಶೆ
ನೀರು ಮತ್ತು ಬೆಂಕಿ ಎಂದು ನಾಯಕರ ಪಾತ್ರಗಳನ್ನು ತೆರೆಗೆ ಪರಿಚಯದೊಂದಿಗೆ ಮಾತು ಆರಂಬಿಸಿ ಲಾಠಿಚಾರ್ಜ್ ದೃಶ್ಯದೊಂದಿಗೆ ರಾಮರಾಜು ಪಾತ್ರವನ್ನು ಮತ್ತು ಕಾಡಿನಲ್ಲಿ ಹುಲಿಯೊಂದಿಗೆ ಹೊಡೆದಾಟದ ದೃಶ್ಯಗಳೊಂದಿಗೆ ಭೀಮನ ಪಾತ್ರವನ್ನು ಪರಿಚಯಿಸಿದ್ದಾರೆ ರಾಜಮೌಳಿ ಎರಡು ಪಾತ್ರಗಳಿಗೆ ಎಲ್ಲಿಯೂ ಚ್ಯುತಿ ಬಾರದಂತೆ ಆದರದೆ ಆದಂತ ಮಹತ್ವ ನೀಡಿ ಪಾತ್ರಗಳನ್ನು ಬ್ಯಾಲೆನ್ಸ್ ಮಾಡಿದ್ದಾರೆ. ಸಂಕಷ್ಟದಲ್ಲಿರುವ ಹುಡುಗನನ್ನು ರಕ್ಷಿಸುವ ಮೂಲಕ jr NTR ಮತ್ತು ರಾಮಚರಣ್ ಇಬ್ಬರು ಸ್ನೇಹಿತಾರುಗುವ ಮೂಲಕ ಕಥಾ ಹಂದರವನ್ನು ಎಳೆ ಎಳೆಯಾಗಿ ಪಿಕ್ಚರೈಸೇಶನ್ ಮಾಡಿದಾರೆ ಸ್ನೇಹದ ಮೀಲನವನ್ನು ‘ನಾಟು ನಾಟು’ ಹಾಡಿನಲ್ಲಿ ಸ್ನೇಹದ ಸಂದೇಶ ಮೂಡಿಸಿದ್ದರೆ, ರಾಮರಾಜು ಪಾತ್ರವೇನು? ಬ್ರಿಟಿಷ್ ಸರ್ಕಾರದಲ್ಲಿ ಪೋಲೀಸ್ ಆಗಿ ಸೇರಲು ಕಾರಣವೇನು ಎಂಬುದು ವಿವರಿಸಲಾಗಿದೆ,ಭೀಮ್ ಪಾತ್ರ ಕುರಿತಾಗಿ ಹೆಚ್ಚಿನ ವಿವರಣೆಯನ್ನು ನೀಡದೇ ಭಿಮ್ ಪಾತ್ರಧಾರಿ ಜೀವನ ಶೈಲಿ,ಶೈರ್ಯ ಪ್ರತಾಪದ ಬಗ್ಗೆ ರಾಜೀವ್ ಕನಕಾಲ ಮಾತಿನಲ್ಲಿ ಹೇಳಿಸಲಾಗಿದೆ.
ಸೀತಾರಾಮರಾಜನಿಗೆ ಹಾವು ಕಚ್ಚುವುದು ಭೀಮನ ಬಂಧನದಿಂದ ಕಥೆ ಮತ್ತೊಂದು ಹಾದಿಯಲ್ಲಿ ಸಾಗುತ್ತದೆ ಇಬ್ಬರೂ ಹೀರೋಗಳು ನಡುವೆ ನಟನೆಯ ಪೈಪೋಟಿ ನಡೆಯುತ್ತದೆ ದ್ವಿತೀಯಾರ್ಧದಲ್ಲಿ ಅಜಯ್ ದೇವಗನ್, ಶ್ರಿಯಾ ಮತ್ತು ಇತರರ ಪಾತ್ರಗಳು ಸ್ಕ್ರೀನ್ ಮೇಲೆ ಬರುತ್ತವೆ ಭೀಮ್ ಮರಣದಂಡನೆ ಸಮಯದಲ್ಲಿ, ‘ಕೊಮರಂ ಭೀಮುಡಾ’ ಹಾಡು ಮೂಲಕ ಪ್ರೇಕ್ಷಕರನ್ನು ಭಾವುಕರನ್ನಾಗಿಸುತ್ತದೆ.ಭೀಮ್ ಮರಣದಂಡನೆ ತಪ್ಪಿಸಲು ಸೀತಾರಾಮರಾಜು ಮಾಡುವ ಪ್ರಯತ್ನ ಸನ್ನಿವೇಶಗಳ ಚಿತ್ರಿಕರಿಸಿರುವ ದೃಶ್ಯಗಳು ವರ್ಣಾತೀತ.
ರಾಜಮೌಳಿ ನಿರ್ದೇಶನದ ಬಗ್ಗೆ ಪ್ರೇಕ್ಷಕರು ಊಹಿಸಲು ಸಾಧ್ಯವಿಲ್ಲದ ತಿರುವುಗಳು ಸಿನಿಮಾದಲ್ಲಿದೆ ಸಿನಿಮಾ ತಂತ್ರಙ್ಞಾನದ ಕುರಿತಾಗಿ ಹೇಳಲು ಸಾಧ್ಯವಿಲ್ಲ ದೊಡ್ಡ ಪರದೆಯ ಮೇಲೆ ನೋಡಿದರಷ್ಟೆ ಅನುಭವ ಆಗುತ್ತದೆ!
ನಾಯಕ ನಟಿ ಆಲಿಯಾ ಭಟ್ ಪಾತ್ರ ಚಿಕ್ಕದಾದರೂ ಚಿತ್ರದಲ್ಲಿ ಟರ್ನಿಂಗ್ ಪಾಯಿಂಟ್ ನೀಡುತ್ತದೆ ಅಜಯ್ ದೇವಗನ್ ಪಾತ್ರವೂ ಸಹ ಅಂತಹದೆ! ರಾಮ್ ಬಗ್ಗೆ ಆಲಿಯಾ ಮಾತನಾಡುವ ದೃಶ್ಯ ಭಾವನಾತ್ಮಕವಾಗಿದೆ. ಕೀರವಾಣಿ ಹಾಡುಗಳು, ಹಿನ್ನೆಲೆ ಸಂಗೀತ ಸಿನಿಮಾಗೆ ದೊಡ್ದ ಆಸ್ತಿ. ವಿಜಯೇಂದ್ರ ಪ್ರಸಾದ್ ಹೆಣೆದಿರುವ ಕಥೆ ಸಂಭಾಷಣೆಗಳು ಆಕರ್ಷಕವಾಗಿವೆ. ಸೆಂಥಿಲ್ ಛಾಯಾಗ್ರಹಣದ ದೃಶ್ಯಗಳು ದೊಡ್ದ ತೆರೆಯ ಮೆಲೆ ಅದ್ಭತವಾಗಿ ಕಾಣಸಿಗುತ್ತದೆ. ಸಾಬುಸಿರಿಲ್ ಕಲಾಕೃತಿ ಚೆನ್ನಾಗಿದೆ ಅನ್ನುವುದಕ್ಕಿಂತ ಅದ್ಭುತವಾಗಿದೆ ನಿರ್ಮಾಪಕರು ಖರ್ಚು ಮಾಡಿದ ಪ್ರತಿ ಪೈಸೆಯೂ ದೃಶ್ಯಗಳ ರೂಪದಲ್ಲಿ ಪ್ರೇಕ್ಷಕರಿಗೆ ಮೋಸ ಮಾಡುವುದಿಲ್ಲ.
ಸಾಹಿತ್ಯ ಮತ್ತು ಸಂಭಾಷಣೆಯನ್ನು ಕನ್ನಡಿಕರಿಸಿರುವರು(ಕನ್ನಡಕ್ಕೆ ಭಾಷಾಂತರಿಸಿರುವರು) ಚಿಕ್ಕಬಳ್ಳಾಪುರದ ವರದರಾಜು ಅವರು
ಚ.ಶ್ರೀನಿವಾಸಮೂರ್ತಿ