ಶ್ರೀನಿವಾಸಪುರ: ತಾಲೂಕಿನಲ್ಲಿ ಐತಿಹಾಸಿಕ ವೈಷ್ಣವ ಪುಣ್ಯಕ್ಷೇತ್ರ ಶ್ರೀ ಕೋದಂಡರಾಮ ದೇವರು ನೆಲೆನಿಂತಿರುವ ಯಲ್ದೂರಿನಲ್ಲಿ ಗ್ರಾಮದ ಜನತೆ ಅದ್ದೂರಿಯಾಗಿ ರಾಮನವಮಿ ಆಚರಿಸಿರುತ್ತಾರೆ. ಸಾರ್ವಜನಿಕವಾಗಿ ಹಂಚಲು ಗ್ರಾಮದಾದ್ಯಂತ ಹಮ್ಮಿಕೊಂಡಿದ್ದ ಪಾನಕ ಹೆಸರಬೆಳೆ ಸೇವೆ ಕಾಣಸಿಗುತಿತ್ತು.
ಸಂಜೆ ವೆಳೆಗೆ ಇದೆ ಪ್ರಥಮಬಾರಿಗೆ ಯುವಕರ ದಂಡು ರಾಮೋತ್ಸವ ಆಚರಿಸಲು ಮುಂದಾಗಿ ಇಡಿ ಗ್ರಾಮದಲ್ಲಿ ಕೆಸರಿ ಧ್ವಜಗಳಿಂದ ಕಟ್ಟಲಾಗಿತ್ತು, ದೇವಾಲಯಕ್ಕೂ ಕೆಸರಿ ಬಣ್ಣದ ಬಾವುಟಗಳಿಂದ ಅಲಂಕರಿಸಿ,ಕೆಸರಿ ಶಾಲುಗಳನ್ನು ಧರಿಸಿದ್ದ ಯುವಕರು ವಿಶೇಷವಾಗಿ ಅಲಂಕರಿಸಿದ ಪಲ್ಲಕ್ಕಿಯಲ್ಲಿ ಶ್ರೀ ರಾಮನ ಪಠ ಸ್ಥಾಪಿಸಿ ಗ್ರಾಮದಲ್ಲಿ ಡಿಜೆ ಹಾಡುಗಳೊಂದಿಗೆ ಶೋಭಾ ಯಾತ್ರೆ ಮಾಡಿರುತ್ತಾರೆ.