- ಆರು ವಿಧಾನ ಸಭಾ ಕ್ಷೇತ್ರಗಳು
- ಮೂರು ಕಂದಾಯ ವೃತ್ತಗಳು
- ಮೂವತ್ತು ಮಂಡಲ ಕೇಂದ್ರಗಳು
ಬಹುದಿನಗಳ ಬೇಡಿಕೆಯಾಗಿದ್ದ ಮದನಪಲ್ಲಿ ಜಿಲ್ಲಾ ಕೇಂದ್ರಕ್ಕೆ ಪುರಸ್ಕಾರ ನೀಡದ ಆಂಧ್ರದ ಜಗನ ಸರ್ಕಾರ
ನ್ಯೂಜ್ ಡೆಸ್ಕ್: ಕರ್ನಾಟಕದ ಶ್ರೀನಿವಾಸಪುರ ತಾಲೂಕಿನ ಉತ್ತರ ಭಾಗಕ್ಕೆ ಇರುವ ರಾಯಲ್ಪಾಡು ಹೋಬಳಿಯ ರಾಯಲ್ಪಾಡು, ಗೌವನಿಪಲ್ಲಿ ಇತ್ತ ನೆಲವಂಕಿ ಹೋಬಳಿಯ ಪುಗೂರಕೋಟೆ ಹಾಗೇ ರೋಣೂರು ಹೋಬಳಿಯ ಸೋಮಯಾಜಲಹಳ್ಳಿ ಗಡಿಯಾಚೆ ಈ ಹಿಂದೆ ಆಂಧ್ರದ ಚಿತ್ತೂರು ಜಿಲ್ಲೆ ಗಡಿಪ್ರದೇಶವಾಗಿತ್ತು ಈಗ ಅಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ “ಅನ್ನಮಯ್ಯ ಜಿಲ್ಲೆ” ಗಡಿಭಾಗವಾಗಿದೆ. ಆಂಧ್ರಪ್ರದೇಶದಲ್ಲಿದ್ದ 13 ಜಿಲ್ಲೆಗಳನ್ನು ಪುನರ್ ವಿಂಗಡನೆ ಮಾಡಿರುವ ಆಂಧ್ರದ ಜಗನ್ ಸರ್ಕಾರ ದೊಡ್ಡ ಜಿಲ್ಲೆಗಳನ್ನು ವಿಂಗಡಿಸಿ ಒಟ್ಟು 26 ಜಿಲ್ಲೆಗಳನ್ನಾಗಿ ಮಾಡಿದೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಉತ್ತರ ಭಾಗದಲ್ಲಿದ್ದ ಚಿತ್ತೂರು ಜಿಲ್ಲೆಯ ಮದನಪಲ್ಲಿಯನ್ನು ಚಿತ್ತೂರು ಜಿಲ್ಲೆಯಿಂದ ಬಿಡುಗಡೆ ಮಾಡಿ ಕಡಪ ಜಿಲ್ಲೆಯಲ್ಲಿದ್ದ ರಾಜಂಪೇಟ, ಮತ್ತು ರಾಯಚೋಟಿ ಮೂರು ಕಂದಾಯ ವಿಭಾಗಗಳನ್ನೂ ಸೇರಿಸಿ ನೂತನವಾಗಿ “ಅನ್ನಮಯ್ಯ ಜಿಲ್ಲೆ” ರಚನೆಮಾಡಲಾಗಿದೆ. ಆರು ವಿಧಾನಸಭಾ ಕ್ಷೇತ್ರಗಳಾದ ರಾಯಚೂಟಿ, ರಾಂಜಪೇಟ, ರೈಲ್ವೆಕೋಡೂರು, ತಂಬಾಳಪಲ್ಲಿ, ಮದನಪಲ್ಲಿ, ಪೀಲೇರ್ ಒಳಕೊಂಡಂತೆ 30 ಮಂಡಲಗಳನ್ನು ಹೊಂದಿರುವ ಅನ್ನಮಯ್ಯ ಜಿಲ್ಲೆಯಲ್ಲಿ ರಾಜಂಪೇಟ ಕಂದಾಯ ವಿಭಾಗದಲ್ಲಿ ರೈಲ್ವೆ ಕೋಡೂರು,ಪೆನಗಲೂರು,ಚಿತ್ವೇಲ್,ಪುಲ್ಲಂಪೇಟ, ಓಬುಳವಾರಿಪಲ್ಲಿ, ರಾಜಂಪೇಟ, ನಂದಲೂರು, ವೀರಬಲ್ಲಿ,ಟಿ.ಸುಂಡುಪಲ್ಲಿ ಮಂಡಲಗಳು ಒಳಪಡುತ್ತದೆ.
ರಾಯಚೋಟಿ ಕಂದಾಯ ವಿಭಾಗದಲ್ಲಿ ರಾಯಚೋಟಿ,ಸಂಬೇಪಲ್ಲಿ, ಚಿನ್ನಮಾಂಡ್ಯಂ,ಗವಿವೀಡು,ಲಕ್ಕಿರೆಡ್ಡಿಪಲ್ಲಿ,ಪಿಲೇರ್, ರಾಮಾಪುರಂ,ಗುರ್ರಂಕೊಂಡ,ಕಲಕಡ,ಕಬಂವಾರಿಪಲ್ಲಿ ಒಳಗೊಂಡಿದ್ದರೆ, ಮದನಪಲ್ಲಿ ಕಂದಾಯ ವಿಭಾಗದಲ್ಲಿ ಮದನಪಲ್ಲಿ, ನಿಮ್ಮನಪಲ್ಲಿ, ರಾಮಸಮುದ್ರಂ, ತಂಬಳ್ಳಪಲ್ಲಿ, ಮುಲಕಲಚೆರುವು, ಪೆದ್ದಮಾಂಡ್ಯಂ, ಕುರಬಲಕೋಟ,ಪೆದ್ದತಿಪ್ಪಸಮುದ್ರಮ್, ಪೆದ್ದಕುರಬಲಕೋಟ,ಬಿರಂಗಿಕೊತ್ತಕೋಟೆ,ಕಲಿಕಿರಿ ಮತ್ತು ವಾಲ್ಮೀಕಿಪುರಂ ಮಂಡಲಗಳು ಒಳಗೊಂಡಿವೆ. ನೂತನ ಅನ್ನಮಯ್ಯ ಜಿಲ್ಲೆಗೆ ಜಿಲ್ಲಾ ಮುಖ್ಯಕೇಂದ್ರವಾಗಿ ರಾಯಚೂಟಿಯನ್ನು ಆಯ್ಕೆಮಾಡಲಾಗಿದೆ.
ಇವುಗಳಲ್ಲಿ ಶ್ರೀನಿವಾಸಪುರ ತಾಲೂಕಿಗೆ ಮದನಪಲ್ಲಿ ಬಿರಂಗಿಕೊತ್ತಕೋಟೆ, ರಾಮಸಮುದ್ರಂ ಗಡಿಯಾಚಗಿನ ಗುರುತಿಸಬಹುದಾಗಿದೆ.
ಗೌವನಿಪಲ್ಲಿ ಮಾರ್ಗದಲ್ಲಿ ಬಿ.ಕೊತ್ತಕೋಟೆ ಹಾಗು ರಾಯಲ್ಪಾಡು ಮಾರ್ಗದಲ್ಲಿ ಮದನಪಲ್ಲಿ ಸೋಮಯಾಜಲಹಳ್ಳಿ ಮಾರ್ಗದಲ್ಲಿ ರಾಮಸಮುದ್ರಂ. ಶ್ರೀನಿವಾಸಪುರ ತಾಲೂಕು ಗಡಿದಾಟಿದರೆ ಸಿಗುವುದೇ ಅನ್ನಮಯ್ಯ ಜಿಲ್ಲೆ.
ಮುಳಬಾಗಿಲು ಮೂಲಕ ಆಂಧ್ರಕ್ಕೆ ಹೋದರೆ ಸಿಗುವ ಪುಂಗನೂರು,ಪಲಮನೇರು,ವಿ.ಕೋಟ ಇವು ಹಳೇಯ ಚಿತ್ತೂರು ಜಿಲ್ಲೆಯಲ್ಲೇ ಉಳಿದಿರುತ್ತದೆ.
ಯಾರು ಯಾಕೆ ಅನ್ನಮಯ್ಯ ಹೆಸರು.
ತಾಳ್ಲಾಪಾಕ ಅನ್ನಮಾಚಾರ್ಯ (1408 – 1503) ಅನ್ನಮಯ್ಯ ಎಂಬ ಹೆಸರಿನಿಂದ ಜನಪ್ರಿಯ ವಾಗ್ಗೇಯಕಾರನಾಗಿ ಗೀತರಚನೆಕಾರರಾಗಿ, 15 ನೇ ಶತಮಾನದಲ್ಲಿ ಖ್ಯಾತರಾಗಿದ್ದವರು ತಮ್ಮ ಕೀರ್ತನೆಗಳಲ್ಲಿ ತಿರುಮಲ ಶ್ರೀ ವೆಂಕಟೇಶ್ವರನ ಅನಗ್ರಹ ಪಡೆದಂತ ಪರಮ ಭಕ್ತ, ಶ್ರೀ ವೆಂಕಟೇಶ್ವರನ ಮೇಲೆ ಸಂಕೀರ್ತನೆಗಳನ್ನು ರಚಿಸಿ ಹಾಡಿದ ಮೊದಲ ಭಾರತೀಯ ವಾಗ್ಗೇಯಕಾರ. ಶ್ರೀ ವಿಷ್ಣುವಿನ ಪರಮ ಭಕ್ತನಾಗಿದ್ದ ಅನ್ನಮಯ್ಯ ರಚಿಸಿದ ಕೀರ್ತನೆಗಳು ಕರ್ನಾಟಕದಲ್ಲೂ ಜನಪ್ರಿಯವಾಗಿದೆ,ಅನ್ನಮಯ್ಯ ಜನಿಸಿದ್ದು ಇದೀಗ ಜನ್ಮ ತಾಳಿರುವ ಅನ್ನಮಯ್ಯ ಜಿಲ್ಲೆಯ ರಾಜಂಪೇಟೆ ತಾಲೂಕಿನ ತಾಳ್ಲಪಾಕ ಗ್ರಾಮದಲ್ಲಿ ಈಗಲೂ ಅನಮಯ್ಯ ವಂಶಿಕರು ಅಲ್ಲಿ ವಾಸಿಸುತ್ತಿದ್ದಾರೆ, ಈ ಹಿನ್ನಲೆಗಳಲ್ಲಿ ತಾಳ್ಲಾಪಾಕ ಅನ್ನಮಾಚಾರ್ಯರಿಗೆ ಗೌರವ ಸೂಚಿಸುವ ಸಲುವಾಗಿ ಅನ್ನಮಯ್ಯ ಜಿಲ್ಲೆ ಎಂದು ಆಂಧ್ರ ಸರ್ಕಾರ ಘೋಷಿಸಿಸಿದೆ ಎನ್ನುತ್ತಾರೆ.
ವಿಶೇಷ ಬರಹ: ಚ.ಶ್ರೀನಿವಾಸಮೂರ್ತಿ