ಶ್ರೀನಿವಾಸಪುರ:- ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಶಾಶ್ವತ ನೀರಾವರಿ ಯೋಜನೆಗಳನ್ನು ಅದ್ಯತೆ ಮೇರೆಗೆ ಜಾರಿಗೆ ತರಲಾಗುವುದು ಎಂದು ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು.
ತಾಲೂಕಿಗೆ ಆಗಮಿಸುವ ಜನತಾಜಲಧಾರೆ ರಥ ಕಾರ್ಯಕ್ರಮದ ಜೆಡಿಎಸ್ ಪಕ್ಷದ ಕಾರ್ಯಕರ್ತರ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು ಪಟ್ಟಣದಲ್ಲಿ ಬೃಹತ್ ಬಹಿರಂಗ ಸಭೆ ನಡೆಯಲಿದ್ದು ನೀರಾವರಿ ವಿಚಾರದಲ್ಲಿ ರಾಜ್ಯಕ್ಕೆ ಆದಂತ ಅನ್ಯಾಯದ ಕುರಿತಾಗಿ ಮತ್ತು ಜೆಡಿಎಸ್ ಅಧಿಕಾರದಲ್ಲಿದ್ದಾಗ ಜಾರಿಯಾದಂತ ನೀರಾವರಿ ಯೋಜನೆಗಳಿಂದ ಕರ್ನಾಟಕದಲ್ಲಿ ಆದ ಬದಲಾವಣೆ ಕುರಿತಾಗಿ ಪಕ್ಷದ ವರಿಷ್ಠರು ಸಭೆಯಲ್ಲಿ ಮಾತನಾಡಲಿದ್ದಾರೆ ಎಂದರು.
ರಾಜ್ಯದ ವಿವಿಧ ನದಿಗಳ ನೀರನ್ನು ಹೊತ್ತು ಬರುವಂತ ಜನತಾಜಲಧಾರೆ ಪವಿತ್ರವಾದ ರಥ ಶ್ರೀನಿವಾಸಪುರಕ್ಕೆ ಈ ತಿಂಗಳ 25 ರಂದು ಆಗಮಿಸಲಿದ್ದು, ಅಂದು ಪಟ್ಟಣದಲ್ಲಿ ಬೃಹತ್ ಸಭೆ ನಡೆಯಲಿದೆ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಪಕ್ಷದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ, ಸೇರಿದಂತೆ ಪ್ರಮುಖ ಮುಖಂಡರು ಆಗಮಿಸಲಿದ್ದಾರೆ ಜನತಾಜಲಧಾರೆ ರಥ ಪಟ್ಟಣದ ಮುಳಬಾಗಿಲು ವೃತ್ತಕ್ಕೆ ಆಗಮಿಸಲಿದ್ದು ಅಲ್ಲಿಂದ ಕನಕಮಂದಿರದ ಹತ್ತಿರ ಮೈಧಾನದ ಬಳಿ ಆಯೋಜಿಸುವಂತ ಸಭೆಗೆ ಬೃಹತ್ ಮೆರವಣಿಗೆ ಮೂಲಕ ಸಾಗಲಿದೆ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಬೇಕಿದ್ದು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಬೆಂಬಲಿಸಿಸುವ ಜವಾಬ್ದಾರಿ ಇದೆ ಎಂದರು.
ಸಭೆಯಲ್ಲಿ ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿನಾರಯಣಸ್ವಾಮಿ,ಮುಖಂಡರಾದ ಬಿ.ವಿ.ಶಿವಾರೆಡ್ಡಿ, ಅಂಬೇಡ್ಕರ್ ಪಾಳ್ಯ ರವಿ,ಗಾಯಿತ್ರಿಮುತ್ತಪ್ಪ ಮುಂತಾದವರು ಇದ್ದರು.
ಬೈಕ್ ರ್ಯಾಲಿ
ಸೋಮವಾರ ಶ್ರೀನಿವಾಸಪುರಕ್ಕೆ ಆಗಮಿಸುವ ಜನತಾಜಲಧಾರೆ ರಥವನ್ನು ಪಟ್ಟಣದ ಎಪಿಎಂಸಿ ಬಳಿಯಿಂದ ಮುಳಬಾಗಿಲು ವೃತ್ತಕ್ಕೆ ಬೈಕ್ ರ್ಯಾಲಿಯ ಮೂಲಕ ಕರೆದುಕೊಂಡು ಹೋಗುವುದಾಗಿ ಯುವ ಮುಖಂಡ ಸಂತೋಷ್ ತಿಳಿಸಿದ್ದಾರೆ.