ಶ್ರೀನಿವಾಸಪುರ: ಶ್ರಮವಹಿಸಿ ಜೀವನ ಮಾಡುವಂತವರು ಉನ್ನತ ಸ್ಥಾನ ಗಳಿಸುತ್ತಾರೆ ಅವರ ಬದುಕು ಸುಗಮವಾಗಿರುತ್ತದೆ ಎಂದು ಶೃಂಗೇರಿ ಶಾರದ ಪೀಠದ ಜಗದ್ಗುರು ಶಂಕರಾಚಾರ್ಯ 37 ನೇ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮಿಗಳು ಆರ್ಶೀವಚನ ನೀಡಿ ಮಾತನಾಡಿದರು.
ಲೋಕ ಕಲ್ಯಾಣಾರ್ಥವಾಗಿ ವಿಜಯಿಯಾತ್ರದ ಪ್ರವಾಸದಲ್ಲಿರುವ ಅವರು ಶ್ರೀನಿವಾಸಪುರ ಶಂಕರ ಮಠ 100 ವರ್ಷಗಳು ಕಳೆದಿರುವ ಹಿನ್ನಲೆಯಲ್ಲಿ ಇಲ್ಲಿನ ಆಡಳಿತ ಮಂಡಳಿ ಶತಮಾನೋತ್ಸವ ಆಚರಿಸಿದ್ದು ಪ್ರಯುಕ್ತ ಶಂಕರಮಠದ ವಿಮಾನ ಗೋಪುರದ ಕುಂಭಾಭಿಷೇಕ, ಶ್ರೀನಿವಾಸಪುರ ಪಟ್ಟಣದ ಶ್ರೀ ವಾಸವಿ ದೇವಾಲಯ,ರಾಯಲ್ಪಾಡಿವಿನ ಶ್ರೀ ಕಾಶಿ ವಿಶ್ವನಾಥ ದೇವಾಲಯದ ವಿಶೇಷ ಪೂಜಾ ಕಾರ್ಯಕ್ರಮಗಳು ಸೇರಿದಂತೆ ಪ್ರಖ್ಯಾತ ಕುರುಡುಮಲೆ ಶ್ರೀ ವಿನಾಯಕ ದೇವಾಸ್ಥಾನದಲ್ಲಿನ ದೇವರ ದರುಶನ ಪೂಜಾ ಕಾರ್ಯಕ್ರಮಗಳು ಮತ್ತು ಮುಳಬಾಗಿಲು ಶಂಕರ ಮಠ ನಿರ್ಮಾಣಕ್ಕೆ ಶಿಲನ್ಯಾಸ ಪೂಜಾ ಕಾರ್ಯಕ್ರಮಗಳು ನೇರವೇರಿಸಿ ಶ್ರೀನಿವಾಸಪುರದಲ್ಲಿ ಭಕ್ತರನ್ನು ಉದ್ದೇಶಿಸಿ ಅನುಗ್ರಹ ಭಾಷಣ ಮಾಡಿ ಮಾತನಾಡಿದರು.
ನಮ್ಮ ಪ್ರಯತ್ನ ಸಫಲವಾಗಬೇಕೆಂದರೆ ಭಗವಂತನ ಅನುಗ್ರಹ ಮುಖ್ಯ, ಸನಾತನ ಧರ್ಮದಲ್ಲಿ ಅಚರಣೆಗಿಂತಲೂ ನಮ್ಮ ವೇದಗಳು ಸಂಸೃತಿ ಪರಂಪರೆ ಎಲ್ಲರಿಗೂ ತಲುಪುವಂತಾಗಬೇಕು ಇವು ಐಕ್ಯಮತದಿಂದ ನಡೆಯಬೇಕಾದ ಕಾರ್ಯಗಳು ಎಂದರು. ಅನಾದಿಕಾಲದಿಂದಲೂ ಋಷಿಮುನಿಗಳು ಆಚರಣೆಗೆ ತಂದ ವಿಚಾರಗಳು ಎಲ್ಲವು ಸಮಂಜಸವೇ ಆಗಿದೆ ಅವರು ಹಾಕಿಕೊಟ್ಟಿರುವಂತ ನಿಯಮ, ನಿಷ್ಠೆ ಆಚಾರ ವಿಚಾರಗಳು ಗುರುಪರಂಪರೆಯ ಮಾರ್ಗದರ್ಶನದಲ್ಲಿ ಆಚರಣೆಯಾಗಬೇಕು ಎಂದ ಅವರು ಇತ್ತಿಚಿನ ದಿನಗಳಲ್ಲಿ ಭೂಮಂಡಲವನ್ನು ಕಾಡಿದ ಕೊರೋನಾ ಎಂಬ ಮಹಾಮಾರಿ ಹಿಂದಿನ ದಿನಮಾನಗಳಲ್ಲಿದ್ದ ವೈಜ್ಞಾನಿಕ ಪದ್ದತಿಗಳ ಆಚರಣೆಯನ್ನು ಜ್ಞಾಪಿಸಿದೆ ಎಂದು ಹೇಳಿದರು.
ಪ್ರತಿಯೊಬ್ಬರು ತಮ್ಮ ತಮ್ಮ ಜೀವನದಲ್ಲಿ ಗುರುಭಕ್ತಿಯನ್ನು ಆಚರಣೆಯಲ್ಲಿಟ್ಟುಕೊಂಡು ನೆಮ್ಮದಿಯ ಜೀವನವನ್ನು ನಡೆಸುವಂತೆ ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಕೆ.ಆರ್.ರಮೇಶ್ ಕುಮಾರ್,ಸಮುದಾಯದ ಹಿರಿಯ ಮುಖಂಡ ಅಡ್ಡಗಲ್ ಕೃಷ್ಣಮೂರ್ತಿ, ಶ್ರೀನಿವಾಸಪುರ ತಹಶೀಲ್ದಾರ್ ಶರೀನ್ತಾಜ್, ಶಿಡ್ಲಘಟ್ಟ ತಹಶೀಲ್ದಾರ್ ರಾಜೀವ್, ಖ್ಯಾತ ಜ್ಯೋತಿಷಿ ವೆಲ್ಲಾಲ ಸತ್ಯನಾರಾಯಣಶಾಸ್ತ್ರಿ,ಕಾಣಿಪಾಕಂ ಗಣೇಶ ಅರ್ಚಕಮ್, ಶ್ರೀನಿವಾಸಪುರ ಶೃಂಗೇರಿ ಮಠದ ಮುಖ್ಯಸ್ಥರಾದ ಶ್ರೀನಿವಾಸನ್,ಕೃಷ್ಣ,ಮಂಜುನಾಥ್, ಸುಬ್ರಮಣ್ಯಂ ವಿಪ್ರ ಸಂಘದ ಗೋಪಿನಾಥರಾವ್, ದಿವಾಕರ್, ಬಿ.ಜೆಪಿ ಮುಖಂಡ ಲಕ್ಷ್ಮಣಗೌಡ, ರಾಮಾಂಜಿ, ವೇದಬ್ರಹ್ಮ ನರೇಶ್ ಸೋಮಯಾಜಿ.ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್,ಮಾಜಿ ಸದಸ್ಯ ಜಿ.ರಾಜಣ್ಣ. ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಆಶೋಕ್,ಮುಂತಾದವರು ಭಾಗವಹಿಸಿದ್ದರು.