ಕೋಲಾರ:ಕೋಲಾರ ತಾಲೂಕಿನ ಪ್ರತಿಷ್ಠಿತ ಪಂಚಾಯಿತಿಯಾಗಿ ಖ್ಯಾತಿ ಪಡೆದಿರುವ ನರಸಾಪುರ ಗ್ರಾಮ ಪಂಚಾಯಿತಿ ಪಿಡಿಒ ರವಿ ಅಲಿಯಾಸ್ ಹೋಳೂರುರವಿ ವ್ಯಕ್ತಿಯೊಬ್ಬನಿಂದ ಲಂಚ ತಗೆದುಕೊಳ್ಳುತ್ತಿರುವಾಗ ಎಸಿಬಿ ಬಲೆಗೆ ಸಿಕ್ಕಿಬಿದ್ದಿರುತ್ತಾನೆ.
ಕೋಲಾರ ತಾಲೂಕು ನರಸಾಪುರ ಗ್ರಾಮಪಂಚಾಯಿತಿ ಕೈಗಾರಿಕ ಪ್ರದೇಶವಾಗಿ ಪ್ರಖ್ಯಾತಿ ಪಡೆದಿದೆ ಇಲ್ಲಿ ಕಾರ್ಯನಿರ್ವಹಿಸುವ ಪಂಚಾಯಿತಿ ಪಿಡಿಒ ರವಿ ಜಮೀನಿನ ಖಾತೆ ಮಾಡಿಕೊಡುವ ಸಂಬಂದ ಮೆಹುಬೂಬ್ ಪಾಷ ಎನ್ನುವರಿಂದ 50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದು ಅದರ ಮೊದಲ ಕಂತು ಎನ್ನುವಂತೆ 45 ಸಾವಿರ ರೂಪಾಯಿಗಳನ್ನು ಭಾನುವಾರವಾದರೂ ಕೋಲಾರ ನಗರದ ಧರ್ಮರಾಯ ನಗರದಲ್ಲಿರುವ ತನ್ನ ನಿವಾಸದ ಬಳಿ ಹಣ ತಗೆದುಕೊಳ್ಳುತ್ತಿರುವಾಗ ಎಸಿಬಿ ದಾಳಿ ಮಾಡಿದ್ದು ಹಣವನ್ನು ವಶಕ್ಕೆ ಪಡೆದು ಲಂಚಬಾಕ ಪಿಡಿಒ ರವಿಯನ್ನು ಎಸಿಬಿ ಪೋಲಿಸರು ಬಂದಿಸಿರುತ್ತಾರೆ.
ಎಸಿಬಿ ಡಿವೈಎಸ್ಪಿ ಸುಧೀರ್, ಇನ್ಸ್ಪೆಕ್ಟರ್ ಮಂಜುನಾಥ್, ಮತ್ತು ಪಾರೂಕ್ ನೇತೃತ್ವದಲ್ಲಿ ದಾಳಿ ಮಾಡಿರುತ್ತಾರೆ.
ಲಂಚ ಪಡೆದು ಎಸಿಬಿ ಪೋಲಿಸರ ಅಥಿತಿಯಾಗಿರುವ ಲಂಚಬಾಕ ಪಿಡಿಒ ರವಿ ಹೋಳೂರು ಮೂಲದವನಾಗಿದ್ದು ಈ ಹಿಂದೆ ಶ್ರೀನಿವಾಸಪುರ ತಾಲೂಕಿನ ನಂಬಿಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಅಧಿಕಾರಿಯಾಗಿ ಮೂರು ವರ್ಷ ಕೆಲಸ ಮಾಡಿದ್ದು ಅಲ್ಲಿಯೂ ಸಹ ಭ್ರಂಮ್ಹಾಂಡ ಭ್ರಷ್ಟಾಚಾರ ಮಾಡಿದ್ದ ಎಂಬ ಆರೋಪ ಇದೆ.