ಶ್ರೀನಿವಾಸಪುರ:ಶ್ರೀನಿವಾಸಪುರದ ಎ.ಪಿ.ಎಂ.ಸಿ ಮಾವು ಮಾರುಕಟ್ಟೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ವ್ಯಕ್ತಿಯೊಬ್ಬರ ಮೇಲೆ ಯುವಕರ ಗುಂಪು ಹಲ್ಲೆಮಾಡಿರುವ ಘಟನೆ ಶನಿವಾರ ತಡ ಸಂಜೆ ನಡೆದಿರುತ್ತದೆ.
ಹಲ್ಲೆ ಗೊಳಗಾದ ವ್ಯಕ್ತಿಯನ್ನು ಎ.ಪಿ.ಎಂ.ಸಿ ಮಾವು ಮಾರುಕಟ್ಟೆಯಲ್ಲಿ ಶೌಚಾಲಯ ನಿರ್ವಹಣೆ ಮಾಡುವ ಮೊಗಿಲಹಳ್ಳಿಶಿವಪ್ಪ ಎಂದು ಗುರುತಿಸಲಾಗಿದ್ದು ಗಾಯಾಳು ಶಿವಪ್ಪನನ್ನು ಶ್ರೀನಿವಾಸಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿವಪ್ಪ ಶ್ರೀನಿವಾಸಪುರದ ಎ.ಪಿ.ಎಂ.ಸಿ ಮಾವು ಮಾರುಕಟ್ಟೆಯಲ್ಲಿ ಶೌಚಾಲಯ ನಿರ್ವಹಣೆ ಗುತ್ತಿಗೆ ಪಡೆದಿದ್ದು ಸ್ಥಳದಲ್ಲಿಯೇ ಪ್ಲಾಸಟಿಕ್ ಕವರ್ ನಲ್ಲಿ ಟೆಂಟ್ ಹಾಕಿಕೊಂಡು ವಾಸವಿರುತ್ತಾನೆ ಶನಿವಾರ ಸಂಜೆ ತಹೇಲ್ ಎನ್ನುವ ವ್ಯಕ್ತಿ ತನ್ನ ಬೊಲೇರೋ ವಾಹನ ತಿರುಗಿಸುವಾಗ ವಾಹನ ಶಿವಪ್ಪನ ಟೆಂಟ್ ಗೆ ತಲುಲಿದೆ ಇದನ್ನು ಶಿವಪ್ಪ ವಿರೋಧಿಸಿದ್ದಾನೆ ಇದರಿಂದ ಇಬ್ಬರ ನಡುವೆ ಮಾತಿನ ಚಕಮುಖಿ ನಡೆದು ಕೈ ಕೈ ಮೀಲಾಯಿಸುವ ಹಂತ ತಲುಪಿದೆ ಸ್ಥಳದಲ್ಲಿದ್ದವರು ಇಬ್ಬರನ್ನು ಸಮಾಧಾನ ಪಡಿಸಿದ್ದಾರೆ ನಂತರ ತಹೇಲ್ ತನ್ನ ಸ್ನೇಹಿತ ಶಬ್ರೇಜ್ ಖಾನ್ ಹಾಗು ಇತರನ್ನು ಸ್ಥಳಕ್ಕೆ ಕರೆಸಿಕೊಂಡು ಶಿವಪ್ಪನ ಮೇಲೆ ಕಟ್ಟಿಗೆ ಮತ್ತು ದೊಣ್ಣೆಗಳಿಂದ ಹಲ್ಲೆ ನಡೆಸಿರುತ್ತಾನೆ ಈ ಸಂದರ್ಭದಲ್ಲಿ ಶಿವಪ್ಪನಿಗೆ ತಲೆ, ಬೆನ್ನು ಎದೆಗೆ ಮತ್ತು ತಲೆಗೆ ಗಾಯವಾಗಿದೆ ಇತನ ರಕ್ಷಣೆಗೆ ಬಂದ ಆತನ ಕುಟುಂಬಿಕರಿಗೂ ಗಾಯಗಳಾಗಿದ್ದು ಎಲ್ಲರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿರುವುದಾಗಿ ಶಿವಪ್ಪ ಹೇಳುತ್ತಾನೆ.
ಘಟನಾ ಸ್ಥಳಕ್ಕೆ ಮುಳಬಾಗಿಲು ಡಿವೈಎಸ್ಪಿ ಜೈ ಶಂಕರ್ ಇನ್ಸೆಪೆಕ್ಟರ್ ನಾರಯಣಸ್ವಾಮಿ ಭೇಟಿ ನೀಡಿ ಪರಶಿಲಿಸಿರುತ್ತಾರೆ ಸ್ಥಳದಲ್ಲಿ ಪೋಲಿಸರನ್ನು ನಿಯೋಜಿಸಿರುತ್ತಾರೆ.
ಗಲಾಟೆಗೆ ಕಾರಣವಾದವರ ವಿರುದ್ದ ಕ್ರಮ
ಸಾರ್ವಜನಿಕವಾಗಿ ಗಲಾಟೆ ಮಾಡಿಕೊಂಡಿರುವ ಬಗ್ಗೆ ಪೋಲಿಸರು ಹಾಗು ಸಾರ್ವಜನಿಕರಿಂದ ಬಂದ ಮಾಹಿತಿಯಂತೆ ಶಿವಪ್ಪ ಹಾಗು ಗಲಬೆಗೆ ಕಾರಣವಾಗಿರುವಂತ ತಹೇಲ್ ಮತ್ತು ಈತನಿಗೆ ಸಾತ್ ನೀಡಿರುವ ಎ.ಎ.ಕೆ ಮಂಡಿಯವರಿಗೆ ನೋಟಿಸ್ ನೀಡಿ ಅವರುಗಳಿಂದ ವಿವರಣೆ ಪಡೆದು ನಂತರ ಕ್ರಮ ಜರುಗಿಸುವುದಾಗಿ ಎ.ಪಿ.ಎಂ.ಸಿ ಕಾರ್ಯದರ್ಶಿ ಉಮಾ vcsnewz.com ಸುದ್ದಿ ಸಂಸ್ಥೆಗೆ ತಿಳಿಸಿರುತ್ತಾರೆ.