ಶ್ರೀನಿವಾಸಪುರ: ಪಿಯುಸಿ ಪರಿಕ್ಷೇಯಲ್ಲಿ ಸೋಮಯಾಜಲಹಳ್ಳಿಯ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿರುವುದಾಗಿ ಪ್ರಾಚಾರ್ಯ ನಾರಯಣಪ್ಪ ತಿಳಿಸಿದ್ದಾರೆ. ಅವರು ಸುದ್ದಿಗಾರರೊಂದಿಗೆ ಮಾತನಾಡಿ 2021-22 ಸಾಲಿನ ಪಿ.ಯು ಪರಿಕ್ಷೇಯಲ್ಲಿ ಕಾಲೇಜಿನ 48 ವಿದ್ಯಾರ್ಥಿಗಳಲ್ಲಿ ಮೂರು ಜನ ವಿದ್ಯಾರ್ಥಿಗಳು ಡಿಸ್ಟಂಕ್ಷನ್ ನಲ್ಲಿ ಪಾಸಾಗಿದ್ದು ವಿಜ್ಙಾನ ವಿಭಾಗದ 55.55% ಕಲಾವಿಭಾಗದ 66.07% ವಾಣಿಜ್ಯ ವಿಭಾಗದ 63.92% ವಿಧ್ಯಾರ್ಥಿಗಳು ಸಾಧನೆ ಮಾಡಿದ್ದು ಕಲಾ ವಿಭಾಗದ ವಿಧ್ಯಾರ್ಥಿನಿ ಗಂಗೋತ್ರಿ 556 ಅಂಕಗಳನ್ನು ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ ಈಕೆ ರಾಜ್ಯಶಾಸ್ತ್ರದಲ್ಲಿ ಮತ್ತು ಮಾಹಿತಿ ತಂತ್ರಘ್ಙಾನದಲ್ಲಿ ತಲಾ 100 ಅಂಕಗಳನ್ನು ಪಡೆದಿರುತ್ತಾಳೆ.ವಿಜ್ಙಾನ ವಿಭಾಗದ ವಿಧ್ಯಾರ್ಥಿನಿ ಲಿಖಿತ 540 ಅಂಕ ಪಡೆದಿದ್ದರೆ ವಾಣಿಜ್ಯ ವಿಭಾಗದಲ್ಲಿ ನವೀನ್ ಎಂಬ ವಿಧ್ಯಾರ್ಥಿ 524 ಅಂಕ ಪಡೆದಿದ್ದಾರೆ. ಕಾಲೇಜಿಗೆ ಮತ್ತು ಬೋಧಕರಿಗೆ ಉತ್ತಮ ಹೆಸರು ತಂದಿದ್ದಾರೆ ಇವರ ಸಾಧನೆ ಸೋಮಯಾಜಲಹಳ್ಳಿ ಗ್ರಾಮಕ್ಕೆ ಗೌರವ ತಂದಿದೆ ಎನ್ನುತ್ತಾರೆ ಪ್ರಾಚಾರ್ಯರು. ಈ ಸಂದರ್ಭದಲ್ಲಿ ಉಪನ್ಯಾಸಕ ಲಕ್ಷ್ಮಣರೆಡ್ಡಿ,ನಾಗರಾಜ್ ಇತರರು ಇದ್ದರು.


