ನ್ಯೂಜ್ ಡೆಸ್ಕ್:ಬಹಳಷ್ಟು ಜನರಿಗೆ ಪ್ರತಿ ದಿನ ಮಲ ವಿಸರ್ಜನೆ(ಲೆಟ್ರಿನ್) ಸಮರ್ಪಕವಾಗಿ ಆಗದೆ ಕಷ್ಟ ಅನುಭವಿಸುತ್ತಿರುತ್ತಾರೆ.ಕೆಲವರಿಗೆ ಬೆಳಗಿನ ಮಲ ವಿಸರ್ಜನೆ ಇನ್ನೊಂದು ಸಮಯಕ್ಕೆ ಬದಲಾಯಿಸಿಕೊಂಡು ಹೋಗಿರುತ್ತದೆ, ಇನ್ನು ಕೆಲವರಿಗೆ ವಿಪರೀತ ಹೊಟ್ಟೆ ನೋವು ಕಾಡಿ ನಂತರ ಬಾತ್ರೂಮ್ ಕಡೆಗೆ ಮುಖ ಮಾಡುವ ಹಾಗೆ ಆಗುತ್ತದೆ.ಇದೆಲ್ಲವನ್ನು ಇನ್ನೊಬ್ಬರ ಬಳಿ ಹೇಳಿಕೊಳ್ಳಲು ಸಂಕೋಚ ಪಡುವ ಜನ ವೈದ್ಯರ ಹತ್ತಿರ ಹೋಗಲು ಹಿಂದೇಟು ಹಾಕುವಂತವರು ಇದ್ದಾರೆ.
ಕೆಲವರಿಗೆ ನಿತ್ಯದ ಜೀವನ ಪ್ರಾರಂಭವಾಗುವುದು ತಮ್ಮ ನಿತ್ಯಕರ್ಮ ಮುಗಿಸಿದ ನಂತರವೇ. ಒಂದು ವೇಳೆ ಯಾವುದೋ ಕಾರಣದಿಂದ ಈ ಪ್ರಕ್ರಿಯೆ ತಪ್ಪಿ ಹೋದರೆ, ಇಡೀ ದಿನ ಏನೋ ಕಳೆದುಕೊಂಡಂತೆ ಯಾವ ಕೆಲಸದ ಮೇಲೂ ಆಸಕ್ತಿ ತೋರದೆ ಜಡತ್ವ(ಗಿಡ್ಡಿನೆಸ್) ಅನುಭವಿಸುತ್ತಾರೆ.
ಹಾಗಾದರೆ ಸರಾಗವಾಗಿ ಮಲ ವಿಸರ್ಜನೆ ಆಗದೇ ಇದ್ದರೆ ಅದಕ್ಕೆ ಕಾರಣಗಳು ಏನಿರಬಹುದು ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇರುವುದು ಸಹಜ ಮಲಬದ್ಧತೆಯ ಸಮಸ್ಯೆ ಎದುರಿಸುತ್ತಿರುವವರಿಗೆ ಇದಕ್ಕೆ ಪರಿಹಾರ ಏನು ಹೇಗೆ ಎಂಬ ಕುತುಹಲ ಜೋತೆಗೆ ಇನ್ನೇನು ಎಂಬ ಕೋಲಾಹಲ ಸಹ ಏರ್ಪಾಡಾಗಿರುತ್ತದೆ.
ಈ ಸಮಸ್ಯೆಗೆ ಕಾರಣಗಳೇನು?
ಮಲ ವಿಸರ್ಜನೆಗೆ ತೊಂದರೆ ಉಂಟು ಮಾಡುವ ಕಾರಣ ಮನುಷ್ಯನ ವಯಸ್ಸು ಹೆಚ್ಚಿದಂತೆ ಮಲಬದ್ಧತೆಯ ಸಮಸ್ಯೆ ಕೂಡ ಹೆಚ್ಚಾಗುತ್ತದೆ. ಜೊತೆಗೆ ಹೆಚ್ಚು ನೀರು ಕುಡಿಯದೇ ಇರುವುದು ಸಹ ಕಾರಣ ಎನ್ನಬಹುದು ಸೇವಿಸಿದ ಆಹಾರ ನಮ್ಮ ದೇಹದ ಜೀರ್ಣಾಂಗದಲ್ಲಿ ಸರಿಯಾಗಿ ಜೀರ್ಣವಾಗಿ ಕರುಳಿನ ಮೂಲಕ ಚಲಿಸುವ ಸಂದರ್ಭದಲ್ಲಿ ಆಹಾರದಲ್ಲಿರುವ ಹಲವು ಬಗೆಯ ಬಹುತೇಕ ಸತ್ವಗಳು ಹೀರಿಕೊಳ್ಳಲ್ಪಡುತ್ತವೆ ನೀರು ಹೆಚ್ಚಿಗೆ ಕುಡಿಯದಿದ್ದರೆ ಮಲಬದ್ಧತೆಗೆ ಕಾರಣವಾಗಿ ದೇಹದಿಂದ ಮಲವನ್ನು ಸರಿಯಾಗಿ ಹೊರ ಹಾಕಲು ಸಾಧ್ಯವಾಗುವುದಿಲ್ಲ.
ವ್ಯಾಯಾಮ ಮಲ ವಿಸರ್ಜನೆಗೆ ಸಹಕಾರಿ!
ಮನುಷ್ಯನ ಆಹಾರ ಸೇವನೆಯಲ್ಲಿ ನಾರಿನ ಅಂಶ ಕಡಿಮೆಯಾದರೂ ನಿಯಮಿತ ವ್ಯಾಯಾಮ ಇಲ್ಲವಾದಗಲೂ ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗದೆ ಮಲಬದ್ದತೆಗೆ ಕಾರಣವಾಗುತ್ತದೆ ಎಂಬುದು ತಙ್ಞರ ಅಭಿಪ್ರಾಯ!
ಇದರಲ್ಲಿ ನಮ್ಮ ಜೀರ್ಣಾಂಗ ಮತ್ತು ಕರುಳಿನ ಭಾಗ ಕೂಡ ಸೇರಿದೆ. ಪ್ರತಿ ದಿನ ವ್ಯಾಯಾಮ ಮಾಡುವ ವ್ಯಕ್ತಿಗೆ ಮಲ ವಿಸರ್ಜನೆ ಕಷ್ಟವಾಗುವುದಿಲ್ಲ ಮತ್ತು ಎಂದಿಗೂ ಮಲಬದ್ಧತೆಯ ಸಮಸ್ಯೆ ಬರುವುದಿಲ್ಲ.
ಮಲ ವಿಸರ್ಜನೆಗೆ ಅವಸರವಾದಾಗ ಅದನ್ನು ತಡೆ ಹಿಡಿಯುವಂತ ಕೆಲಸ ಮಾಡಿದರೆ ಸಹ ಸರಾಗವಾಗಿ ಮಲವಿಸರ್ಜನೆಯಾಗಲು ಸಮಸ್ಯೆಯಾಗುತ್ತದೆ ಎಂದು ಹೇಳಬಹುದು.
ಮಾನಸಿಕ ಒತ್ತಡ,ಆತಂಕ ಕೂಡ ಕರುಳಿನ ಚಲನೆಯನ್ನು ಅನಿಯಮಿತವಾಗಿ ಮಾಡುತ್ತದೆ ಇದ ಕೂಡ ನಿಯಮಿತ ಮಲವಿಸರ್ಜನೆಯಾಗಲು ತೊಂದರೆಯಾಗುತ್ತದೆ.
ಸಾಕಷ್ಟು ನೀರು ಕುಡಿಯಿರಿ
ಮನುಷ್ಯನಿಗೆ ನೀರು ಕುಡಿಯುವ ಅಭ್ಯಾಸ ತುಂಬ ಒಳ್ಳೆಯದು. ನಮ್ಮ ದೇಹ ತನ್ನ ಮುಕ್ಕಾಲು ಪಾಲು ನೀರಿನ ಅಂಶವನ್ನು ಹೊಂದಿರುವುದರಿಂದ ಅದರ ಕಾರ್ಯಕ್ಷಮತೆಗೆ ನೀರಿನ ಅವಶ್ಯಕತೆ ತುಂಬಾ ಇರುತ್ತದೆ.
ಅದರಲ್ಲೂ ಬೇಸಿಗೆ ಮತ್ತು ಚಳಿಗಾಲದ ಸಮಯದಲ್ಲಿ ಹೆಚ್ಚಿನ ಪ್ರಮಾಣದ ನೀರು ಕುಡಿಯಲೇಬೇಕು. ನೀರಿನ ಸೇವನೆಯಲ್ಲಿ ಸ್ವಲ್ಪ ಬದಲಾವಣೆಯಾದರೂ ಮಲಬದ್ಧತೆಯ ಸಮಸ್ಯೆ ಕಟ್ಟಿಟ್ಟ ಬುತ್ತಿ.
ಮಧ್ಯಾಹ್ನದ ಸಮಯದಲ್ಲಿ ನೀರು ಕುಡಿಯುವಾಗ ಅದಕ್ಕೆ ಸ್ವಲ್ಪ ನಿಂಬೆ ಹಣ್ಣನ್ನು ಹಿಂಡಿ ಕುಡಿಯುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಪ್ರಾರಂಭವಾದ ಹೊಟ್ಟೆ ನೋವು ನಿವಾರಣೆಯಾಗುತ್ತದೆ. ಕೇವಲ ನೀರನ್ನು ಮಾತ್ರವಲ್ಲದೆ ಹಣ್ಣಿನ ತಾಜಾ ರಸಗಳನ್ನು ಕೂಡ ಸೇವಿಸವುದರಿಂದ ಸರಾಗವಾಗಿ ಮಲ ವಿಸರ್ಜನೆಯಾಗುತ್ತದೆ.
ದೇಹಕ್ಕೆ ವ್ಯಾಯಾಮ,ನಡಗೆ ಅಗತ್ಯ
ವಿಶೇಷವಾಗಿ ಮಲಬದ್ಧತೆಯ ಸಮಸ್ಯೆಯನ್ನು ಎದುರಿಸುತ್ತಿರುವವರು ಬೇರೆಯವರಿಗೆ ಹೋಲಿಸಿದರೆ ಸ್ವಲ್ಪ ಹೆಚ್ಚಿನ ಸಮಯ ವ್ಯಾಯಾಮಕ್ಕೆ ಮೀಸಲಿಡುವುದು ಒಳ್ಳೆಯದು ಇದರಿಂದ ತಮ್ಮ ದೈಹಿಕ ಸದೃಢತೆಯನ್ನು ಕಾಪಾಡಿಕೊಳ್ಳುವುದರ ಜೊತೆಗೆ ತಾವು ಸೇವಿಸಿದ ಆಹಾರ ಹೊಟ್ಟೆಯಲ್ಲಿ ಸರಿಯಾಗಿ ಜೀರ್ಣವಾಗಲು ಸಹಾಯವಾಗುತ್ತದೆ. ಹಾಗಾಗಿ ವ್ಯಾಯಾಮವನ್ನು ತಮ್ಮ ಜೀವನದ ಒಂದು ಭಾಗ ಎಂದು ತಿಳಿದುಕೊಳ್ಳಬೇಕು.
ದಿನಕ್ಕೆ ಕನಿಷ್ಟ 30 ನಿಮಿಷಗಳ ವ್ಯಾಯಾಮ ಅಥಾವ ನಡಿಗೆ(ವಾಕಿಂಗ್) ಮಾಡುವುದರಿಂದ ದೇಹದ ಸಮತೋಲನೆಗೆ ಸಹಕಾರಿ
ಪ್ರತಿ ವಿಚಾರದಲ್ಲೂ ಸೂಕ್ತ ತಜ್ಞರ ಅಭಿಪ್ರಾಯ ಸಲಹೆ ಪಡೆದು ವಯಸ್ಸಿನ ಅನುಗುಣದಂತೆ ವ್ಯಾಯಾಮಗಳನ್ನು ಮಾಡುವುದರ ಜೊತೆಗೆ ಅವರು ಹೇಳುವ ಆಹಾರಗಳನ್ನು ನಿಮ್ಮ ಅಗತ್ಯಕ್ಕೆ ತಕ್ಕಂತೆ ಸೇವಿಸುತ್ತಾ ಬಂದರೆ ನಿಮ್ಮ ಕರುಳಿನ ಚಲನೆ ಸರಿಯಾದ ರೀತಿಯಲ್ಲಿ ನಡೆದು ಮಲಬದ್ಧತೆಯ ಸಮಸ್ಯೆ ದೂರವಾಗುತ್ತದೆ.
ಒಣ ದ್ರಾಕ್ಷಿ ಹೆಚ್ಚು ಸೇವಿಸಿ
ಒಣ ದ್ರಾಕ್ಷಿ ನಿಮ್ಮ ಪ್ರತಿ ದಿನದ ಜೀವನ ಶೈಲಿಯ ಆಹಾರ ಪದ್ಧತಿಯಲ್ಲಿ ಅಭ್ಯಾಸವಾದರೆ ನಿಮ್ಮ ಮಲಬದ್ಧತೆಯ ಸಮಸ್ಯೆ ಸುಲಭವಾಗಿ ನಿವಾರಣೆಯಾಗುತ್ತದೆ ಒಣ ದ್ರಾಕ್ಷಿಯಲ್ಲಿ ಕರುಳಿನ ಚಲನೆಯನ್ನು ಉತ್ತಮಗೊಳಿಸುವ ಅದ್ಭುತ ಶಕ್ತಿ ಇದೆ. ನೈಸರ್ಗಿಕವಾದ ಕೆಲವು ಅಂಶಗಳು ನಿಮ್ಮ ಕರುಳಿನ ಚಲನೆಯನ್ನು ಸರಾಗವಾಗಿಸುತ್ತದೆ.
ಮಾನಸಿಕ ಒತ್ತಡದ ನಿಯಂತ್ರಣ ಬಹಳ ಅಗತ್ಯ!
ಮಾನಸಿಕವಾಗಿ ತುಂಬಾ ಉದ್ವೇಗಕ್ಕೆ ಒಳಗಾದಾಗ, ಬಹಳ ಆತಂಕದ ಸಂದರ್ಭವನ್ನು ಎದುರಿಸಿದಾಗ ತಕ್ಷಣವೇ ವಾಶ್ರೂಮ್ ಕಡೆಗೆ ಹೆಜ್ಜೆ ಹಾಕುತ್ತಾರೆ.ಇದು ಹೆಚ್ಚು ಹೆಣ್ಣುಮಕ್ಕಳಲ್ಲಿ ಕಂಡು ಬರುತ್ತದೆ ಎನ್ನುತ್ತಾರೆ.
ಸಂಗ್ರಹ ಬರವಣಿಗೆ: ವಿನಿತಾಶ್ರೀನಿವಾಸ್.