ನ್ಯೂಜ್ ಡೆಸ್ಕ್: ಕೋಲಾರ ಮೀಸಲು ಲೋಕಸಭಾ ವ್ಯಾಪ್ತಿಯಲ್ಲಿನ ಮಾಜಿ ಶಾಸಕರಾಗಿರುವ ಇಬ್ಬರು ಪ್ರಭಾವಿ ಯುವ ರಾಜಕಾರಣಿಗಳು ಇಂದು ಕಾಂಗ್ರೆಸ್ ಪಕ್ಷಕ್ಕೆ ಮರು ಸೇರ್ಪಡೆಯಾಗಿದ್ದಾರೆ.
ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಚಿಂತಾಮಣಿಯ ಮಾಜಿ ಶಾಸಕ ಡಾ.ಎಂ.ಸಿ. ಸುಧಾಕರ್ ಅವರು ಇಂದು ದೇಹಲಿಯಲ್ಲಿ ಎಐಸಿಸಿ ವರಿಷ್ಠ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮರು ಸೇರ್ಪಡೆಯಾಗಿರುವುದು ಕೋಲಾರ ರಾಜಕೀಯ ವಲಯದಲ್ಲಿ ಇದೊಂದು ವಿಶೇಷ ಚರ್ಚೆಗೆ ಗ್ರಾಸವಾಗಿದೆ.
ಕೋಲಾರ ಲೋಕಸಭಾ ವ್ಯಾಪ್ತಿಯ ಕಾಂಗ್ರೆಸ್ ಪಕ್ಷದಲ್ಲಿನ ಭಿನ್ನಮತ ಒಳರಾಜಕೀಯದಿಂದ ಬೆಸೆತ್ತ ಚಿಂತಾಮಣಿ ಸುಧಾಕರ್ ಕಾಂಗ್ರೆಸ್ ಪಕ್ಷದಿಂದ ಅಂತರ ಕಾದುಕೊಂಡು ದೂರ ಉಳಿದು ಎರಡು ಚುನಾವಣೆಯನ್ನು ಎದುರಿಸಿ ಸೋಲು ಅನುಭವಿಸಿದ್ದರು.ನಂತರದ ಬೆಳವಣಿಗೆಯಲ್ಲಿ ಕಾಂಗ್ರೆಸ್ ಸೇರ್ಪಡೆ ಕುರಿತಾಗಿ ಉದಾಸೀನರಾಗಿದ್ದರು ರಾಜ್ಯ ಕಾಂಗ್ರೆಸ್ ಮುಖಂಡರ ಮಾತಿಗೂ ಸೊಪ್ಪುಹಾಕದೆ ದೂರ ಉಳಿದ ಅವರು ಕಾಂಗ್ರೆಸ್ ಸೇರ್ಪಡೆಯಾಗಬೇಕಾದರೆ ಕೋಲಾರ ಲೋಕಸಭಾ ವ್ಯಾಪ್ತಿಯಲ್ಲಿ ಪಕ್ಷಕ್ಕೆ ಆಗಿರುವ ತೊಂದರೆ ಇಲ್ಲಿನ ಪಕ್ಷ ವಿರೋಧಿ ಬೆಳವಣಿಗಳನ್ನು ಎಐಸಿಸಿ ವರಿಷ್ಠರ ಗಮನಕ್ಕೆ ತಂದು ಆ ನಂತರ ಮುಂದುವರಿಯುವುದಾಗಿ ಹೇಳಿದ್ದರು,ಇದಕ್ಕೆ ಸುಧಾಕರ್ ವಿರೋಧಿಗಳು ಇದು ಸಾದ್ಯವಾಗದ ಮಾತು ಎಂದು ಕುಹಕವಾಡಿದ್ದರು.
ಎಲ್ಲಾ ಬೆಳವಣಿಗೆಗಳ ನಡುವೆ ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಚಿಂತಾಮಣಿಯ ಮಾಜಿ ಶಾಸಕ ಡಾ.ಎಂ.ಸಿ. ಸುಧಾಕರ್ ಅವರು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಎಂ.ಎಲ್.ಸಿ ನಸೀರ್ ಅಹಮದ್,ಅನಿಲ್ ಕುಮಾರ್, ಗೌರಿಬಿದನೂರು ಶಾಸಕ ಶಿವಶಂಕರ ರೆಡ್ಡಿ,ಕೋಲಾರ ಶಾಸಕ ಶ್ರೀನಿವಾಸಗೌಡ, ಮಾಲೂರು ಶಾಸಕ ನಂಜೇಗೌಡ, ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಜೊತೆಗೂಡಿ ದೆಹಲಿಗೆ ತೆರಳಿದ್ದ ಅವರು ಅಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ, ರಣದೀಪ್ ಸಿಂಗ್ ಸುರ್ಜೆವಾಲ ಕೂಡಿ ಇಂದು ರಾಹುಲ್ ಗಾಂಧಿಯನ್ನು ಭೇಟಿಮಾಡಿ ಕಾಂಗ್ರೆಸ್ ಸೇರಿರುವ ಬಗ್ಗೆ ಡಾ.ಎಂ.ಸಿ.ಸುಧಾಕರ್@ಚಿಂತಾಮಣಿಸುಧಾಕರ್ ತಮ್ಮ ವೈಯುಕ್ತಿಕ ಜಾಲತಾಣಗಳಲ್ಲಿ ಫೋಟೊ
ಹಂಚಿಕೊಂಡಿದ್ದಾರೆ.ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಚಿಂತಾಮಣಿಯ ಮಾಜಿ ಶಾಸಕ ಡಾ.ಎಂ.ಸಿ. ಸುಧಾಕರ್ ಅವರ ಕಾಂಗ್ರೆಸ್ ಸೇರ್ಪಡೆ ಕುರಿತಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ
ಕೋಲಾರ ಮೀಸಲು ಲೋಕಸಭೆ ವ್ಯಾಪ್ತಿಯ ಕಾಂಗ್ರೆಸ್ ಪಕ್ಷದ ಸಂಘಟನೆ ಕುರಿತಾಗಿ ವಿಶೇಷ ಆಸಕ್ತಿ ವಹಿಸಿದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಕೊತ್ತೂರು ಮಂಜುನಾಥ್ ಹಾಗೂ ಚಿಂತಾಮಣಿಯ ಮಾಜಿ ಶಾಸಕ ಡಾ.ಎಂ.ಸಿ. ಸುಧಾಕರ್ ಅವರುಗಳನ್ನು ಕಾಂಗ್ರೆಸ್ಸಿಗೆ ಸೇರ್ಪಡೇ ಮಾಡಲೆ ಬೇಕೆಂದು ಶಪಥ ತೊಟ್ಟಂತೆ ಶತ ಪ್ರಯತ್ನ ನಡೆಸಿದ ಅವರು ಇಂದಿನ ಭೇಟಿಯ ಮೂಲ ಕಾರಣಕರ್ತರು ಎಂದು ಹೇಳಲಾಗುತ್ತಿದೆ.
ಕೋಲಾರ ಮೀಸಲು ಲೋಕಸಭಾ ವ್ಯಾಪ್ತಿಯ ಕಾಂಗ್ರೆಸ್ ಪಕ್ಷದ ಬೆಳವಣಿಗೆ ದೆಹಲಿಯಲ್ಲಿಯೇ ನಡೆಯುತ್ತಿದ್ದರು ಅಲ್ಲೇ ದೆಹಲಿಯಲ್ಲಿದ್ದ ಮಾಜಿ ಕೇಂದ್ರ ಸಚಿವ ಮುನಿಯಪ್ಪ ತಮ್ಮ ವಿರೋಧಿಗಳು ಕಾಂಗ್ರೆಸ್ ಸೇರುವುದನ್ನು ತಡೆಯುವುದು ಸಾದ್ಯವಾಗಿಲ್ಲ ಎಂಬ ಮಾತು ಕಾಂಗ್ರೆಸ್ ವಲಯದಿಂದ ಕೇಳಿಬರುತ್ತಿದೆ.
ಈ ಬಗ್ಗೆ ಹೆಚ್ಚು ಮಾತನಾಡಲು ಆಸಕ್ತಿ ತೋರದ ಕೆ.ಹೆಚ್.ಮುನಿಯಪ್ಪ ಹೈಕಮಾಂಡ್ ಮಾತಿಗೆ ಬದ್ದರಾಗಿರುತ್ತೇವೆ ಎಲ್ಲದಕ್ಕೂ ಕಾಲವೆ ಉತ್ತರ ನೀಡುತ್ತದೆ ಎಂದು ಮಾರ್ಮಿಕವಾಗಿ ನುಡಿದಿರುತ್ತಾರೆ.
ಕಾರ್ಯಕರ್ತರ ಹರ್ಷೋದ್ಘಾರ ಪಟಾಕಿ ಸಿಡಿಸಿ ಸಂಭ್ರಮ.
ಮಾಜಿ ಶಾಸಕ ಡಾ.ಎಂ.ಸಿ. ಸುಧಾಕರ್ ಕಾಂಗ್ರೆಸ್ ಸೇರ್ಪಡೆಯಾಗಿದ ಬಗ್ಗೆ ಫೋಟೋ ವೈರಲ್ ಆಗುತ್ತಿದ್ದಂತೆ ಅವರ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿದೆ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ ಚಿಂತಾಮಣಿ ನಗರದಲ್ಲಿ ಸಂಭ್ರಮಾಚರಣೆ ಮಾಡಿರುತ್ತಾರೆ ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಸ್ಕೂಲ್ ಸುಬ್ಬಾರೆಡ್ಡಿ, ಈರುಳ್ಳಿ ಶಿವಣ್ಣ, ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ನಡಂಪಲ್ಲಿ ಶ್ರೀನಿವಾಸ್, ದಲಿತ ಸೇನೆ ಪ್ರಧಾನ ಕಾರ್ಯದರ್ಶಿ ಬೀಡಾ ಶ್ರೀನಿವಾಸ್, ಅರ್.ಎಂ.ಜೆ. ಶ್ರೀನಿವಾಸ್,ರಘುನಾಥಗೌಡ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.