ಶ್ರೀನಿವಾಸಪುರ:ತಾಲೂಕಿನಲ್ಲಿ ಕಲ್ಲುಕ್ವಾರಿ ಹೊಂದಿರುವ ಪ್ರಭಾವಿ ವ್ಯಕ್ತಿಯೊಬ್ಬ ಆಂಧ್ರದ ಮದನಪಲ್ಲಿಯಲ್ಲಿ ಶಾಸಕನಾಗಲು ಪೈಪೋಟಿ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.
ಶ್ರೀನಿವಾಸಪುರ ತಾಲೂಕು ತಾಡಿಗೊಳ್ ಗೆಟ್ ನಿಂದ ಗೌವನಿಪಲ್ಲಿ ರಸ್ತೆಯ ಕೊಡಿಪಲ್ಲಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕೊಂಡಾಮರಿ ಗ್ರಾಮದ ಬಳಿ ಎರಡು ದಶಕಗಳ ಹಿಂದೆ ಕಲ್ಲುಕ್ವಾರಿ ನಡೆಸಲು ಬಂದಂತ ಶ್ರೀರಾಮನೆನಿ ಜಯರಾಮ ನಾಯ್ಡು ಇಂದು ಪ್ರಭಾವಿ ವ್ಯಕ್ತಿಯಾಗಿ ಬೆಳೆದಿದ್ದಾರೆ.
ಮೂಲತಃ ಹಳೇ ಚಿತ್ತೂರು ಜಿಲ್ಲೆಯ ಪುಲಿಚರ್ಲ ಗ್ರಾಮದವರಾದ ಜಯರಾಮ ನಾಯ್ಡು ಕಲ್ಲುಕ್ವಾರಿ ನಡೆಸಲು ಕ್ವಾರಿ ನಡೆಸುವ ಬಗ್ಗೆ ಅನುಭವ ಇರುವಂತ ಬೆಂಗಳೂರಿನ ಷಣ್ಮುಗ ಎನ್ನುವ ವ್ಯಕ್ತಿಯ ಸಹಾಯದಿಂದ ಶ್ರೀನಿವಾಸಪುರ ತಾಲೂಕಿನಲ್ಲಿ ಕಲ್ಲುಕ್ವಾರಿ ಪರವಾನಗಿ ಪಡೆದು ಶ್ರೀನಿವಾಸಪುರ ತಾಲೂಕಿನ ಸ್ಥಳೀಯ ರಾಜಕೀಯ ಮುಖಂಡರ ಸಹಕಾರದಿಂದ ಕ್ವಾರಿ ನಡೆಸುತ್ತಿದ್ದು ಗೆದ್ದೇತ್ತಿನ ಬಾಲ ಹಿಡಿದವರಂತೆ ಅಯಾ ಸಂದರ್ಭದ ಅನುಸಾರವಾಗಿ ಸ್ಥಳೀಯವಾಗಿ ಅಧಿಕಾರದಲ್ಲಿರುವಂತ ಲೊಕಲ್ ಮುಖಂಡರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ನಾಯ್ಡು ಪ್ರಭಾವಿಯಾಗಿ ಬೆಳೆಯುತ್ತ ಹೋದ ನಂತರ ತನ್ನ ವ್ಯಾಪಾರ ವ್ಯವಹಾರಗಳನ್ನು ಬೆಂಗಳೂರಿನವರಿಗೂ ವಿಸ್ತರಿಸುತ್ತ ಬೆಳೆದಿದ್ದು ರಾಜಕೀಯವಾಗಿ ಒಂದು ಕೈ ನೋಡೇ ಬಿಡೋಣ ಎಂಬಂತೆ ರಾಜಕೀಯದಲ್ಲೂ ಮಿಂಚಲು ತಯಾರಾಗಿ ಆಂಧ್ರದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮದನಪಲ್ಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ದಿಸಲು ತಾಲಿಮು ನಡೆಸುತ್ತಿದ್ದಾರೆ.ಮದನಪಲ್ಲಿ ವಿಧಾನಸಭಾ ಕ್ಷೇತ್ರದ ತೆಲಗುದೇಶಂ ಅಭ್ಯರ್ಥಿಯಾಗಲು ಹೊರಟಿರುವ ಇವರಿಗೆ ಎಂ.ಎಲ್.ಎ ಟಿಕೆಟ್ ಅಷ್ಟೇನೂ ಸುಲಭವಾಗಿ ಸಿಗುವ ಅವಕಾಶ ಇಲ್ಲ ಎನ್ನಲಾಗುತ್ತಿದೆ,ಮದನಪಲ್ಲಿ ಕ್ಷೇತ್ರದಲ್ಲಿ ತನ್ನದೇ ಆದ ಪ್ರಭಾವ ಹೊಂದಿರುವ ಮಾಜಿ ಶಾಸಕ ದೊಮ್ಮಲಪಾಟಿರಮೇಶ್ ಕ್ಷೇತ್ರದಲ್ಲಿ ಎರಡು ಬಾರಿ ಸೋತರೂ ಪಕ್ಷದ ಮೇಲೆ ತನ್ನದೆ ಆದ ಹಿಡಿತ ಹೊಂದಿದ್ದಾರೆ ನಿರಂತರವಾಗಿ ಕಾರ್ಯಕರ್ತರೊಂದಿಗೆ ಸಂಪರ್ಕ ಹೊಂದಿದ್ದಾರೆ ಈ ಎಲ್ಲಾ ಬೆಳವಣಿಗೆಯಲ್ಲೂ ಜಯರಾಮ ನಾಯ್ಡು ತೆಲಗುದೇಶಂ ಮುಖ್ಯಸ್ಥ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ರೊಂದಿಗೆ ನೇರಸಂಪರ್ಕದಲ್ಲಿದ್ದು ಪಕ್ಷದ ಟಿಕೆಟ್ ಪಡೆಯುವ ಭರವಸೆಯಿಂದ ಇದ್ದಾರೆ ಜುಲೈ 6 ರಂದು ಮದನಪಲ್ಲಿಯಲ್ಲಿ ನಡೆಯುವ ತೆಲಗುದೇಶಂ ಪಕ್ಷದ ಕ್ಷೇತ್ರಮಟ್ಟದ ಸಮಾವೇಶ ಮಿನಿಮಹಾನಾಡು ಕಾರ್ಯಕ್ರಮದಲ್ಲಿ ಮಾಜಿ ಶಾಸಕ ದೊಮ್ಮಲಪಾಟಿ ರಮೇಶ್ ಪೈಪೋಟಿ ಎನ್ನುವಂತೆ ಜನರನ್ನು ಸೇರಿಸಿ ಶಕ್ತಿಪ್ರದರ್ಶನ ಮಾಡುವ ಬಗ್ಗೆ ಬಿಝಿಯಾಗಿದ್ದಾರೆ.