ಶ್ರೀನಿವಾಸಪುರ:-ಆಂಧ್ರದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯುಡುಗೆ ಶ್ರೀನಿವಾಸಪುರದಲ್ಲಿ ತೆಲಗುದೆಶಂ ಹಾಗು ನಂದಮೂರಿ ಕುಟುಂಬದ ಅಭಿಮಾನಿಗಳು ಘನ ಸ್ವಾಗತ ನೀಡಿದರು.
ಆಂಧ್ರದ ಮದನಪಲ್ಲಿ ನಗರದಲ್ಲಿ ಇಂದು ಬುಧವಾರ ಆಯೋಜಿಸಿದ್ದ ತೆಲಗುದೇಶಂ ಪಕ್ಷದ ರಾಜಂಪೇಟ ಲೋಕಸಭಾ ಕ್ಷೇತ್ರ ಮಟ್ಟದ ಸಮಾವೇಶ ಮಿನಿಮಹಾನಾಡು ಹಾಗು ಬಾರಿ ಬಹಿರಂಗ ಸಭೆ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೈದರಾಬಾದ್ ನಿಂದ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿ ನಂತರ ರಸ್ತೆಮಾರ್ಗದಲ್ಲಿ ವಿಜಯಪುರ ಬೈಪಾಸ್,ಹೆಚ್ ಕ್ರಾಸ್,ಮಾಡಿಕೆರೆ ಕ್ರಾಸ್ ತಾಲೂಕಿನ ತಾಡಿಗೊಳ್ ಕ್ರಾಸ್ ಮೂಲಕ ಮದನಪಲ್ಲಿಗೆ ತೆರಳುತ್ತಿದ್ದ ಅವರಿಗೆ
ಶ್ರೀನಿವಾಸಪುರ ತಾಲೂಕು ಕೋಡಿಪಲ್ಲಿ ಪಂಚಾಯಿತಿ ವ್ಯಾಪ್ತಿಯ ಕೊಂಡಾಮರಿ ಬಳಿಯ ಕಲ್ಲುಕ್ವಾರಿ ಮಾಲಿಕ ಹಾಗು ಮದನಪಲ್ಲಿ ವಿಧಾನಸಭಾ ಕ್ಷೇತ್ರದ ತೆಲಗುದೇಶಂ ಪಕ್ಷದ ಅಭ್ಯರ್ಥಿ ಅಕಾಂಕ್ಷಿಯಾಗಿರುವ ಜಯರಾಮ ನಾಯ್ಡು ತಮ್ಮ ಅನುಯಾಯಿಗಳೊಂದಿಗೆ ತಾಡಿಗೊಳ್ ಕ್ರಾಸ್(ಪೈ ಕ್ರಾಸ್) ಬಳಿ ಚಂದ್ರಬಾಬು ನಾಯುಡು ಅವರಿಗೆ ದೊಡ್ಡದಾದ ಗಜಗಾತ್ರದ ಸೇಬಿನ ಹಾರ ಹಾಕಿ ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ದೊಡ್ದ ಸಂಖ್ಯೆಯಲ್ಲಿ ಶ್ರೀನಿವಾಸಪುರ ತಾಲೂಕಿನ ಯುವಕಾಂಗ್ರೆಸ್ ಕಾರ್ಯಕರ್ತರು ಜಯರಾಮ ನಾಯ್ಡುಗೆ ಸಾತ್ ನೀಡಿದರು. ಈ ಸಂದರ್ಭದಲ್ಲಿ ಚಂದ್ರಬಾಬು ಎರಡು ಬೆರಳಿನಿಂದ ವಿಜಯದ ಸಂಕೇತದ ಮೂಲಕ ಜನರತ್ತ ಕೈ ಬೀಸಿದ ಅವರಿಗೆ ಜನತೆ ಜೈ ಬಾಬು ಸಿ ಎಂ ಎಂಬ ನಿನಾದಗಳನ್ನು ಕೂಗಿದರು. ತಾಲೂಕು ಯುವ ಮುಖಂಡರಾದ ಕಲ್ಲೂರುಮಂಜು,ಕೊಡಿಪಲ್ಲಿವಿಶ್ವರೆಡ್ಡಿ. ಗೌನಿಪಲ್ಲಿ ಜಾಮಕಾಯಿಲ ವೆಂಕಟೇಶ್,ನರಸಿಂಹಮೂರ್ತಿ,ಕೊತ್ತೂರುನಾಗರಾಜ್, ದೊರೆಸ್ವಾಮಿರೆಡ್ಡಿ, ಎಲ್.ವಿ.ಶ್ರೀರಾಮ್, ತಾಲುಕು ಪಂಚಾಯಿತಿ ಮಾಜಿ ಅಧ್ಯಕ್ಷ ನರೇಶ್,ಸೇರಿದಂತೆ ಯುವಸಮೂಹ ನೇರಿದಿದ್ದರು.
ರಾಯಲ್ಪಾಡನಿಂದಲೆ ಬೈಕ್ ರ್ಯಾಲಿ ಆರಂಭ.
ಆಂಧ್ರದ ಮದನಪಲ್ಲಿ ಸೇರಿದಂತೆ ಚಿತ್ತೂರು ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ತೆಲಗುದೇಶಂ ಯುವಕಾರ್ಯಕರ್ತರು ಕರ್ನಾಟಕದ ಗಡಿಭಾಗ ರಾಯಲ್ಪಾಡು ಬಳಿ ಜಮಾವಣೆಗೊಂಡು ಅಲ್ಲಿಂದಲೇ ಬೈಕ್ ರ್ಯಾಲಿ ಮೂಲಕ ಚಂದ್ರಬಾಬು ಅವರನ್ನು ಮದನಪಲ್ಲಿ ನಗರಕ್ಕೆ ಕರೆದೊಯಿದರು.
ನುಕುನುಗ್ಗಲಿನಲ್ಲಿ ಜೇಬುಗಳ್ಳರಿಗೆ ಹಬ್ಬ
ತಾಡಿಗೊಳ್ ಕ್ರಾಸ್ ನಲ್ಲಿ ನಡೆದ ಚಂದ್ರಬಾಬು ಸ್ವಾಗತ ಕಾರ್ಯಕ್ರಮದಲ್ಲಿ ನುಕುನುಗ್ಗಲು ಉಂಟಾಗಿದ್ದು ಈ ಸಂದರ್ಭದಲ್ಲಿ ಜೇಬುಗಳ್ಳರು ತಮ್ಮ ಕೈಚಳಕ ತೊರಿಸಿ ಹಲವರಿಂದ ಹಣ,ಬ್ಯಾಂಕ್ ಕಾರ್ಡಗಳು ಮೊಬೈಲುಗಳನ್ನು ಎಗರಿಸಿದ್ದಾರೆ.
ವರದಿ:ನಂಬಿಹಳ್ಳಿಸುರೇಶ್