ಕೋಲಾರ: ಪೋಲಿಸರು ಗಲಭೆ ಕೊರರಿಗೆ ಕಳ್ಳರಿಗೆ ವಂಚಕರಿಗೆ ಲಾಠಿ ಹಿಡಿದು ಬಾರಿಸಿ ಬುದ್ದಿ ಹೇಳುವುದೋ ಕಾನೂನು ಬಗ್ಗೆ ಪಾಠಮಾಡುವುದು ಸಾಮನ್ಯ ಆದರೆ ಕೋಲಾರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೇವರಾಜ್ ಲಾಠಿ ಪಕ್ಕಕ್ಕಿಟ್ಟು ಚಾಕಪಿಸ್ ಹಿಡಿದು ಮೇಷ್ಟು ಸ್ಥಾನದಲ್ಲಿ ನಿಂತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಜೀವಶಾಸ್ತ್ರದ ಪಾಠ ಮಾಡಿದ್ದಾರೆ.
ಕೋಲಾರ ತಾಲ್ಲೂಕಿನ ವೇಮಗಲ್ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶಿಕ್ಷಕ ಗೆಳೆಯರ ಬಳಗದ ವತಿಯಿಂದ ಎಫ್ಸನ್ ಕಂಪನಿ ಕೊಡುಗೆಯಾಗಿ ನೀಡಿರುವ ಲಕ್ಷಕ್ಕೂ ಹೆಚ್ಚು ನೋಟ್ ಪುಸ್ತಕ ವಿತರಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅವರು ಕಾರ್ಯಕ್ರಮದ ನಂತರ ಶಾಲ ಕೋಣೆಯೊಂದಕ್ಕೆ ಪ್ರವೇಶಿಸಿದರು ಅಲ್ಲಿ ಬೋರ್ಡ್ ಮೇಲೆ ಸೂಕ್ಷ್ಮ ಜೀವಿಗಳ ಉಪಯೋಗಗಳ ಶೀರ್ಷಿಕೆ ಇದ್ದುದನ್ನು ಕಂಡು ಕೆಲ ಹೊತ್ತು ವಿಙ್ಞಾದ ವಿಷಯದ ಕುರಿತಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು ನಂತರ ಕೂಡಲೇ ಚಾಕ್ಪೀಸ್ ಹಿಡಿದು ಸುಮಾರು 20 ನಿಮಿಷ ಪಾಠ ಮಾಡಿದರು.
ಪೊಲೀಸ್ ಅಧಿಕಾರಿಯಾಗುವ ಮುನ್ನ ಐದು ವರ್ಷಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಬಗ್ಗೆ ಸ್ಮರಿಸಿಕೊಂಡ ಅವರು ಸೂಕ್ಷ್ಮ ಜೀವಿಗಳಾದ ವೈರಸ್,ಬ್ಯಾಕ್ಟೀರಿಯಾ, ಪ್ರೋಟೋಜೋವಾ ಮತ್ತಿತರ ಸೂಕ್ಷ್ಮ ಜೀವಿಗಳ ಕುರಿತು ಸರಳ ಭಾಷೆಯಲ್ಲಿ ಸುಲಲಿತವಾಗಿ ಬೋಧನೆ ಮಾಡಿದ ಅವರು ಪೊಲೀಸ್ ಅಧಿಕಾರಿ ಎಂಬುದನ್ನು ಮರೆತು ಖಾಕಿ ಡ್ರಸ್ ನಲ್ಲೆ ಶಾಲಾ ಕೊಣೆಯಲ್ಲಿ ಶಿಕ್ಷಕರ ಪಾತ್ರ ನಿರ್ವಸಿ ಮಕ್ಕಳ ಮೆಚ್ಚುಗೆಗೆ ಪಾತ್ರರಾದರು.