ನ್ಯೂಜ್ ಡೆಸ್ಕ್:2023 ವಿಧಾನ ಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯವನ್ನು ಮತ್ತೆ ಗೆಲ್ಲಲೇ ಬೇಕು ಎಂದು ಬಿಜೆಪಿ ಹೈಕಮಾಂಡ್ ರಾಜಕೀಯ ಕಾರ್ಯತಂತ್ರ ರೂಪಿಸುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿದ್ದು ಇದರ ಅನ್ವಯ ರಾಜ್ಯ ಬಿಜೆಪಿ ಸಚಿವರ ಕಾರ್ಯವೈಖರಿ ಶೈಲಿ ಬದಲಿಸಿ ಆಡಳಿತಕ್ಕೆ ಚುರುಕು ಮುಟ್ಟಿಸುವ ಪ್ರಯತ್ನಕ್ಕೆ ಬಿಜೆಪಿ ಹೈಕಮಾಂಡ್ ಪ್ರಯತ್ನದಲ್ಲಿದೆ ಎನ್ನಲಾಗುತ್ತಿದೆ .
ಸಿಎಂ ಬೊಮ್ಮಾಯಿ ಕಾರ್ಯ ವೈಖರಿಯ ವೇಗಕ್ಕೆ ತಕ್ಕಂತೆ ಹಲವು ಸಚಿವರು, ಇಲಾಖೆಗಳು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸದಿರುವ ಬಗ್ಗೆ ಸರಕಾರ ಹಾಗೂ ಪಕ್ಷದಲ್ಲೇ ಅಸಮಾಧಾನವಿದೆ. ಇದೇ ರೀತಿ ಮುಂದುವರಿದರೆ ಮುಂಬರುವ ಚುನಾವಣೆಯಲ್ಲಿ ದೊಡ್ಡ ಬೆಲೆ ತೆರಬೇಕಾದೀತು ಎಂಬ ಆತಂಕ ಬಿಜೆಪಿ ಹೈಕಮಾಂಡಿಗಿದೆ ಈ ಹಿನ್ನಲೆಯಲ್ಲಿ ಸಚಿವರು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುವಂತೆ ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದೆ.
ಇನ್ನೊಂದೆಡೆ ಕೇಂದ್ರದ ಹಲವು ಸಚಿವರು ನಿಯಮಿತವಾಗಿ ರಾಜ್ಯ ಪ್ರವಾಸ ಕೈಗೊಂಡು ಕೇಂದ್ರದ ಯೋಜನೆಗಳ ಬಗ್ಗೆ ಜನ ಸಾಮಾನ್ಯರಿಗೆ ತಿಳಿಸಿ ಅವರಿಂದ ಜನಾಭಿಪ್ರಾಯ ಸಂಗ್ರಹಿಸುವ ಪ್ರಯತ್ನಕ್ಕೆ ಕಾರ್ಯತಂತ್ರ ರೂಪಿಸಲಾಗುತ್ತಿದೆ ಕೇಂದ್ರ ಬಿಜೆಪಿ ನಾಯಕರ ಭೇಟಿ ಜತೆಗೆ ರಾಜ್ಯ ಸರಕಾರದ ಸಚಿವರು ಕ್ರಿಯಾಶೀಲ ಕಾರ್ಯ ನಿರ್ವಹಣೆ ಮೂಲಕ ಜನರ ವಿಶ್ವಾಸ ಗಳಿಸಿ ಗಟ್ಟಿಗೊಳಿಸುವ ಕಾರ್ಯಕ್ಕೆ ಪಕ್ಷ ಸದ್ದಿಲ್ಲದೆ ಒತ್ತು ನೀಡಲಾಗುತ್ತಿದೆ.
ರಾಜ್ಯ ಸರ್ಕಾರದ ಮಂತ್ರಿಗಳ ಕಾರ್ಯ ನಿರ್ವಹಣೆ ಮೌಲ್ಯಮಾಪನ
ಚುನಾವಣೆ ವರ್ಷದ ಕಾರಣಕ್ಕೆ 2022 – 23ನೇ ಸಾಲಿನ ಬಜೆಟ್ನ ಘೋಷಣೆಗಳು, ಕಾರ್ಯಕ್ರಮಗಳನ್ನು ತ್ವರಿತವಾಗಿ ಜಾರಿಗೊಳಿಸಲು ಒತ್ತು ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ ತಾವೇ ಖುದ್ದು ಇಲಾಖಾವಾರು ಬಜೆಟ್ ಅನುಷ್ಠಾನದ ಪ್ರಗತಿ ಪರಿಶೀಲನೆ ನಡೆಸಿದ್ದಾರೆ. ಬಜೆಟ್ ಘೋಷಿತ ಬಹುಪಾಲು ಘೋಷಣೆಗಳಿಗೆ ಸರಕಾರಿ ಆದೇಶ ಹೊರಡಿಸಿ ಏಕಕಾಲಕ್ಕೆ ಎಲ್ಲಾ ಇಲಾಖೆಗಳ ಕಾರ್ಯಕ್ರಮಗಳ ಜಾರಿಗೆ ಆದ್ಯತೆ ನೀಡಲಾತ್ತಿದೆ.
ಬಸವರಾಜ ಬೊಮ್ಮಾಯಿ ಅವರು ಸಿಎಂ ಆದ ಬಳಿಕ ಸಂಪುಟ ರಚನೆ ಹಾಗು ವಿಸ್ತರಣೆಯಾಗಲಿ, ಪುನಾರಚನೆಯಾಗಲಿ ಅಗಿಲ್ಲ ಹಾಗಾಗಿ ಎಲ್ಲಾ ಸಚಿವರ ಅವಧಿ ಪೂರ್ಣಾವಧಿಯಾಗುವ ಸಂಬವ ಇದೆ ಎನ್ನಲಾಗುತ್ತಿದೆ. ಈ ಕಾರಣಕ್ಕೆ ಬಜೆಟ್ ಘೋಷಣೆಗಳ ಜತೆಗೆ ಕೇಂದ್ರ ಸರಕಾರದ ಕಾರ್ಯಕ್ರಮಗಳ ಅನುಷ್ಠಾನಕ್ಕೂ ಗಮನ ಹರಿಸುವ ಕುರಿತಾಗಿ ಸಚಿವರ ಕಾರ್ಯನಿರ್ವಹಣೆ ಮೂಲಕ ಮೌಲ್ಯಮಾಪನದ ಮಾಡುವ ನಿಟ್ಟಿನಲ್ಲಿ ಚಿಂತಿಸಲಾಗುತ್ತಿದೆ.
ಮೌಲ್ಯಮಾಪನದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡದ ಸಚಿವರ ತಲೆದಂಡ ಮಾಡದೆ ಉಳಿದ ಅವಧಿಯಲ್ಲಿ ಆಯಾ ಇಲಾಖೆ ಮಂತ್ರಿಗಳ ಕಾರ್ಯವನ್ನು ಕ್ರಿಯಾಶೀಲವಾಗಿಸಿ ಉತ್ತೇಜಿಸುವುದು. ಕಾರ್ಯಕ್ರಮಗಳ ಪ್ರಯೋಜನ ಫಲಾನುಭವಿಗಳಿಗೆ ತಲುಪಿದೀಯಾ ಇಲ್ಲವ ಎಂದು ಪರಿಶೀಲಿಸುವ ಬಗ್ಗೆ ಮಾರ್ಗದರ್ಶನ ನೀಡುವ ಚಿಂತನೆ ಇದೆ ಎಂದು ಹೇಳಲಾಗುತ್ತಿದೆ.
ವಿಧಾನಸಭೆ ಚುನಾವಣೆಗೆ ವರ್ಷಕ್ಕಿಂತ ಕಡಿಮೆ ಅವಧಿಯಿರುವ ಹೊತ್ತಿನಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರದ ‘ಸಮನ್ವಯ ಬೈಠಕ್’ ನಡೆಸುವುದು ಸಂಪ್ರದಾಯ ಈ ಹಂತದಲ್ಲಿ ವಸ್ತುನಿಷ್ಠವಾಗಿ ಸಚಿವರ ಮೌಲ್ಯಮಾಪನ ನಡೆಯಲಿದೆ. ಲೋಪಗಳು, ಕೊರತೆಗಳನ್ನು ಸರಿಪಡಿಸಿಕೊಳ್ಳಲು ಸಲಹೆ ನೀಡಿ ಉಳಿದ ಸಮಯದಲ್ಲಿ ಪಕ್ಷ ಬಲವರ್ಧನೆಗೆ ಅನಕೂಲವಾಗಿ ಸಮರ್ಥವಾಗಿ ಬಳಸಿಕೊಳ್ಳುವ ಬಗ್ಗೆಯೂ ಸಮಾಲೋಚನೆ ನಡೆಯಲಿದೆ. ಸರಕಾರ, ಪಕ್ಷಕ್ಕೆ ಮುಜುಗರವಾಗುವಂತಹ ಮಾತು, ನಡೆ ಇಲ್ಲದಂತೆ ಎಚ್ಚರ ವಹಿಸುವುದು,ಅವ್ಯವಹಾರ,ಅಧಿಕಾರ ದುರ್ಬಳಕೆ, ಕರ್ತವ್ಯ ಲೋಪ ಸೇರಿದಂತೆ ಯಾವುದೇ ವಿವಾದಗಳಿಗೆ ಸಿಲುಕದಂತೆ ಎಚ್ಚರದಿಂದಿರುವ ಬಗ್ಗೆಯೂ ಸೂಚನೆ ನೀಡಲಾಗುತ್ತದೆ. ಇದೆಲ್ಲದಕ್ಕೂ ರಾಷ್ಟ್ರಪತಿ ಚುನಾವಣೆ ನಂತರವಷ್ಟೆ ಈ ಪ್ರಕ್ರಿಯೆ ನಡೆಯುವ ನಿರೀಕ್ಷೆ ಇದೆ ಎನ್ನಲಾಗಿದೆ.
ಮೋದಿ ಹೆಸರಿನೊಂದಿಗೆ ಕೇಂದ್ರ ಸಚಿವರ ದಂಡಯಾತ್ರೆ!
ರಾಜ್ಯ ಸರಕಾರದ ಸಚಿವರನ್ನು ಕ್ರಿಯಾಶೀಲಗೊಳಿಸುವ ಜತೆ ಜತೆಗೆ ಕೇಂದ್ರ ಸಚಿವರು ಮೋದಿ ಹೆಸರಿನೊಂದಿಗೆ ರಾಜ್ಯದಲ್ಲಿ ದಂಡಯಾತ್ರೆ ಕೈಗೊಳ್ಳಲಿದ್ದಾರೆ. ತಿಂಗಳಿಗೆ ಇಬ್ಬರಿಂದ ಮೂವರು ಕೇಂದ್ರ ಸಚಿವರು ರಾಜ್ಯ ಪ್ರವಾಸ ಕೈಗೊಂಡು ಜಿಲ್ಲಾವಾರು ಭೇಟಿ ನೀಡಲಿದ್ದಾರೆ.
ಮುಖ್ಯವಾಗಿ ಎಂಟು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಕೊಡುಗೆ, ಜನಪರ ಯೋಜನೆಗಳಿಂದಾಗಿರುವ ಅನುಕೂಲ, ಬದಲಾದ ಭಾರತದ ಚಿತ್ರಣದ ಕುರಿತಾಗಿ ನೇರವಾಗಿ ಜನರಿಗೆ ಸಚಿವರೇ ಮಾಹಿತಿ ನೀಡಲಿದ್ದಾರೆ. ತಮ್ಮ ಇಲಾಖೆಯ ಕಾರ್ಯಕ್ರಮಗಳ ಅನುಷ್ಠಾನ ಪ್ರಗತಿ ಪರಿಶೀಲನೆಯನ್ನೂ ನಡೆಸಲಿದ್ದಾರೆ. ಕೇಂದ್ರದ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿ ತಳಮಟ್ಟದಲ್ಲಿ ಕಾರ್ಯಕ್ರಮದ ಅನುಷ್ಠಾನ ಸ್ಥಿತಿಗತಿ, ಲೋಪದೋಷಗಳ ಕುರಿತಾದ ಅಭಿಪ್ರಾಯಗಳನ್ನು ಸಂಗ್ರಹಿಸಿ ರಾಷ್ಟ್ರೀಯ ನಾಯಕರಿಗೆ ತಲುಪಿಸಲಿದ್ದಾರೆ. ಇದರಿಂದ ಅನುಷ್ಠಾನ ಹಂತದಲ್ಲಿನ ಲೋಪಗಳನ್ನು ಸರಿಪಡಿಸಿಕೊಳ್ಳಲು ಸಹಕಾರಿಯಾಗಲಿದೆ.
ಜತೆಗೆ ಪಕ್ಷದ ಚಟುವಟಿಕೆಯಲ್ಲೂ ಪಾಲ್ಗೊಳ್ಳಲಿರುವ ಕೇಂದ್ರ ಸಚಿವರು ಕೆಲ ದಿನ ರಾಜ್ಯದಲ್ಲಿ ಬೀಡುಬಿಟ್ಟು ಸಭೆ, ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ರಾಜ್ಯ ಸಚಿವರನ್ನು ಜೊಡಿಸಿಕೊಂಡು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿದರೆ ಸರಕಾರದ ವರ್ಚಸ್ಸು ವೃದ್ಧಿಗೆ ಸಹಕಾರಿಯಾಗುವ ನಿರೀಕ್ಷೆ ಇದೆ ಎಂದು ತಿಳಿಸಿವೆ.
ರಾಜ್ಯಕ್ಕೆ ಬಿಜೆಪಿ ಸಿಎಂಗಳ ದಂಡು
ಕೇಂದ್ರ ಸಚಿವರು ಅಲ್ಲದೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು ಸಹ ರಾಜ್ಯ ಪ್ರವಾಸ ಕೈಗೊಳ್ಳುವ ಕುರಿತಾಗಿ ಬಿಜೆಪಿ ರಾಷ್ಟ್ರೀಯ ನಾಯಕರ ಮಟ್ಟದಲ್ಲಿ ಚರ್ಚೆಯಾಗಿದೆ. ಮುಖ್ಯವಾಗಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ರಾಜ್ಯಕ್ಕೆ ಹಲವು ಸುತ್ತಿನಲ್ಲಿ ಭೇಟಿ ನೀಡಿ ಕಾರ್ಯಕರ್ತರನ್ನು ಹುರಿದುಂಬಿಸುವ ಜತೆಗೆ ಜನರ ವಿಶ್ವಾಸ ಗಳಿಸುವ ಪ್ರಯತ್ನ ನಡೆಸುವ ಬಗ್ಗೆಯೂ ಸಮಾಲೋಚನೆ ನಡೆದಿದೆ ಎನ್ನಲಾಗಿದೆ.
Breaking News
- ಶ್ರೀನಿವಾಸಪುರ ಕಸಬಾ ಸೊಸೈಟಿ ಅಧ್ಯಕ್ಷ ಗಾದಿ ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಚುನಾವಣೆ!
- ಶ್ರೀನಿವಾಸಪುರ ಜೆ.ತಿಮ್ಮಸಂದ್ರ ಪಂಚಾಯಿತಿ ಅಧ್ಯಕ್ಷರಾಗಿ ಕಲ್ಲೂರು ಶಂಕರರೆಡ್ಡಿ
- ಚಿಂತಾಮಣಿ ವ್ಯಕ್ತಿ ಆಂಧ್ರದ ರಸ್ತೆ ಅಪಘಾತದಲ್ಲಿ ಸಾವು
- ಶ್ರೀನಿವಾಸಪುರ ಕನಕದಾಸರ ಜಯಂತಿಗೆ ಗೈರಾದ ಅಧಿಕಾರಿಗಳ ವಿರುದ್ದ ಶಾಸಕ ಗರಂ!
- ಶ್ರೀನಿವಾಸಪುರ ಸರ್ಕಾರಿ ನೌಕರರ ಸಂಘದ ಹೊಸ BOSS ಭೈರೇಗೌಡ
- ಶ್ರೀನಿವಾಸಪುರದಲ್ಲಿ ಕಾರ್ತಿಕ ಹುಣ್ಣಿಮೆ ವಿಶೇಷ ಗಿರಿಜಾ ಕಲ್ಯಾಣ
- RCS ಮಂಡಿ ವತಿಯಿಂದ ಬೆಂಗಳೂರು ಕೃಷಿ ಮೇಳಕ್ಕೆ ಬಸ್ಸುಗಳ ವ್ಯವಸ್ಥೆ.
- ಅಮೇರಿಕಾದ ರಾಷ್ಟ್ರೀಯ ಗುಪ್ತಚರ ಮುಖ್ಯಸ್ಥೆ ಹಿಂದು ತುಳಸಿ ಗಬ್ಬಾರ್ಡ್!
- ವೈಷ್ಣೋದೇವಿ ಯಾತ್ರೆಗೂ ಸಹಾಯಧನ ಮಂತ್ರಿ ರಾಮಲಿಂಗಾರೆಡ್ಡಿ ಘೋಷಣೆ
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ಎರಡು ಪ್ರತ್ಯೇಕ ಅಪಘಾತ ಒರ್ವ ಸಾವು!
Friday, November 22