ನ್ಯೂಜ್ ಡೆಸ್ಕ್:2023 ರ ಚುನಾವಣೆಗೆ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಳೆದವಾರ ಭೇಟಿ ಮಾಡಿದ್ದ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಕೈ ಪಕ್ಷದ ಹಿರಿಯ ಮುಖಂಡರಾದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಕೃಷ್ಣಬೈರೇಗೌಡ, ಮಾಜಿ ಸಚಿವ ಶಿವಶಂಕರ ರೆಡ್ಡಿ ಶಾಸಕರಾದ ಶ್ರೀನಿವಾಸಗೌಡ, ವಿ ಮುನಿಯಪ್ಪ,ಶರತ್ ಬಚ್ಚೇಗೌಡ, MLC ಗಳಾದ ನಸೀರ್,ಅನಿಲ್ ಕುಮಾರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದ ಗೌಡ,ಚಿಂತಾಮಣಿ ಸುಧಾಕರ,ಕೊತ್ತೂರುಮಂಜುನಾಥ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್ ಹಾಗು ಪ್ರಮುಖ ದಲಿತ ಮುಖಂಡರು ಸಹ ಭಾಗಿಯಾಗಿ ಕಳೆದ ವಾರ ಮನವಿ ಮಾಡಿದ್ದರು.
ಕೋಲಾರದಲ್ಲಿ ಸ್ಪರ್ಧೆಸುವಂತೆ ಆಹ್ವಾನ ನೀಡಿದ್ದರು ಇವರ ಮನವಿಗೆ ಸ್ಫಂದನೆ ನೀಡಿದ್ದ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದ ಮತದಾರರ ಅಭಿಪ್ರಾಯ ಪಡೆದು ಕ್ಷೇತ್ರದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವೆ ಎಂದಿದ್ದರು.
ರಮೇಶ್ ಕುಮಾರ್ ನಿಯೋಗ ಭೇಟಿಯಾದ ನಂತರ ಕೋಲಾರದಲ್ಲಿ ಚುನಾವಣೆಗೆ ಸ್ಪರ್ಧಿಸುವಂತೆ ಕೋಲಾರ ನಗರ ಸಭೆ ಅಧ್ಯಕ್ಷರು ಮತ್ತು ಜಿಲ್ಲಾ ಕುರುಬ ಸಮುದಾಯದ ಅನೇಕ ಮುಖಂಡರು ಪ್ರಮುಖ ನಾಯಕರು ಮನವಿ ಸಲ್ಲಿಸಿ ಸಿದ್ದರಾಮಯ್ಯ ಮೇಲೆ ಒತ್ತಡ ಹಾಕುತ್ತಿದ್ದಾರೆ ಈ ಎಲ್ಲಾ ಬೆಳವಣಿಗೆಯ ನಡುವೆ ಬುಧವಾರ ಮತ್ತೊಮ್ಮೆ ಮಾಜಿ ಸ್ಪೀಕರ್ ರಮೇಶ್ ಕುಮಾರ್, MLC ಅನಿಲ್ ಕುಮಾರ್, ನಸೀರ್ ಅಹಮದ್ ನೇತೃತ್ವದಲ್ಲಿ ಕೋಲಾರ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ್ಯ,ಉಪಾಧ್ಯಕ್ಷ್ಯರು ಸದಸ್ಯರು ನೂರಾರು ಸಂಖ್ಯೆಯಲ್ಲಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ತೆರಳಿ ಕೋಲಾರದಲ್ಲಿ ಸ್ಪರ್ಧೆ ಮಾಡುವಂತೆ ಮತ್ತೊಮ್ಮೆ ಮನವಿ ಮಾಡಿದ್ದಾರೆ.
ಮನವಿಗೆ ಸ್ಪಂದಿಸಿ ಉತ್ತರ ನೀಡಿರುವ ಸಿದ್ದರಾಮಯ್ಯ ಅವರು, ಚಾಮುಂಡೇಶ್ವರಿ ಕ್ಷೇತ್ರದ ಜನರು ನನ್ನ ತಿರಸ್ಕರಿಸಿದರು. ಅಂತಹ ಸಂದರ್ಭದಲ್ಲಿ ನನ್ನ ಕೈ ಹಿಡಿದಿದ್ದು ಬಾದಾಮಿ ಕ್ಷೇತ್ರದ ಜನರು. ರಾಜ್ಯ ರಾಜಕೀಯದಲ್ಲಿ ತೊಡಗಿಸಿಕೊಂಡಿರುವ ಕಾರಣ ಬೆಂಗಳೂರಿಗೆ ಹತ್ತಿರದಲ್ಲೆ ಇರುವ ಕ್ಷೇತ್ರದಲ್ಲಿ ನಿಲ್ಲಬೇಕೆಂಬ ಯೋಚನೆಯಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬಾದಾಮಿ ಜನತೆ ಜೊತೆ ಚರ್ಚೆ
ಆದರೆ ರಾಜಕೀಯ ಪುನರ್ಜನ್ಮ ನೀಡಿ ಕೈ ಹಿಡಿದ ಬಾದಾಮಿ ಕ್ಷೇತ್ರದ ಜನತೆ, ಮುಖಂಡರ ಜೊತೆಗೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವೆ ಎಂದು ಪುನರಚ್ಚರಿಸಿರುವ ಸಿದ್ದರಾಮಯ್ಯ ನಿಮ್ಮೆಲ್ಲರ ಪ್ರೀತಿಯ ಆಹ್ವಾನಕ್ಕೆ ಧನ್ಯವಾದಗಳು ಎಂದಿದ್ದಾರಂತೆ.
ಸಿದ್ದರಾಮಯ್ಯ ಅವರಿಗಾಗಿ ಕ್ಷೇತ್ರ ತ್ಯಾಗಕ್ಕೆ ಮುಂದಾದ ಆಕಾಂಕ್ಷಿಗಳ ಪಟ್ಟಿ
ಕೋಲಾರದಲ್ಲಿ ಸ್ಪರ್ದಿಸಲು ಕೈ ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿರುವ ಮಾಜಿ ಶಾಸಕ ಕೊತ್ತೂರು ಮಂಜುನಾಥ್, ಹಾಲಿ ಜೆಡಿಎಸ್ ಶಾಸಕ ಶ್ರೀನಿವಾಸ ಗೌಡ, ನಿವೃತ್ತ ಅಬಕಾರಿ ಇಲಾಖೆ ಹಿರಿಯ ಅಧಿಕಾರಿ ಎಲ್.ಎ ಮಂಜುನಾಥ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ ಸೇರಿದಂತೆ ಇನ್ನು ಹಲವರು ಕೋಲಾರ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಸ್ಪರ್ಧಿಸಲು ತುದಿಗಾಲಲ್ಲಿ ನಿಂತಿದ್ದು ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ದೆಸಿಸಲು ಬರುವುದಾದರೆ ನಾವು ಕ್ಷೇತ್ರ ಬಿಟ್ಟು ಕೊಡ್ತೀವಿ ಎನ್ನುವ ಟಿಕೆಟ್ ಆಕಾಂಕ್ಷಿಗಳು.
ಎಲ್ಲರೂ ಒಗ್ಗಟ್ಟಾಗಿ ನಿಂತು ನಿಮ್ಮನ್ನು ಗೆಲ್ಲಿಸುತ್ತೇವೆ ಎಂದು ಸಿದ್ದರಾಮಯ್ಯ ಬಳಿಗೆ ತೆರಳಿ ಮಾತು ಕೊಟ್ಟಿದ್ದಾರಂತೆ.
ವಿಶೇಷ ವರದಿ:ಚ.ಶ್ರೀನಿವಾಸಮೂರ್ತಿ