ಕಾಣಿಪಾಕಂ: ಆಂಧ್ರ ಪ್ರದೇಶ ಚಿತ್ತೂರು ಜಿಲ್ಲೆಯ ಪ್ರಸಿದ್ದ ಪುಣ್ಯಕ್ಷೇತ್ರವಾದ ಕಾಣಿಪಾಕಂ ಶ್ರೀವರಸಿದ್ಧಿ ವಿನಾಯಕ ಸ್ವಾಮಿ ದೇವಾಲಯದ ಆಡಳಿತ ವ್ಯಾಪ್ತಿಯಲ್ಲಿರುವ ಶ್ರೀ ಮರಗದಬಿಂಕದೇವಿ ಸಮೇತ ಶ್ರೀ ಮಣಿಕಂಠೇಶ್ವರ ದೇವಸ್ಥಾನದಲ್ಲಿ ನಿರಂತರ ಚಂಡಿ ಹೋಮಕ್ಕೆ ದೇವಸ್ಥಾನದ ಆಡಳಿತ ಮಂಡಳಿ ಇವೊ ವೆಂಕಟಸುರೇಶಬಾಬು ವಿದ್ವಕ್ತವಾಗಿ ಚಾಲನೆ ನೀಡಿರುತ್ತಾರೆ. ದೇವಾಲಯದ ಅರ್ಚಕ ಸ್ವಾಮಿಗಳು ವೈದಿಕ ರಿತ್ಯ ವೇದಪಂಡಿತರ ಮಾರ್ಗದರ್ಶದಲ್ಲಿ ಶಾಸ್ತ್ರೋಕ್ತವಾಗಿ ಹೋಮ ನಡೆಸಿ ಪೂರ್ಣಾಹುತಿ ನೆರವೇರಿಸಿದರು. ಭಕ್ತಾದಿಗಳು ಚಂಡಿ ಹೋಮದಲ್ಲಿ ಪಾಲ್ಗೊಂಡು ಅಮ್ಮನವರ ಕೃಪೆಗೆ ಪಾತ್ರರಾಗುವಂತೆ ಅಧಿಕಾರಿಗಳು ಕೋರಿರುತ್ತಾರೆ.
ಆಷಾಡ ಹುಣ್ಣಿಮೆ ಶ್ರೀ ಮರಗದಬಿಂಕ ದೇವಿಗೆ ಶಾಕಾಂಬರಿ(ತರಕಾರಿ)ಅಲಂಕಾರ
ಕಾಣಿಪಾಕಂ ಶ್ರೀ ಮಣಿಕಂಠೇಶ್ವರ ದೇವಸ್ಥಾನದ ಅಮ್ಮನವರಾದ ಶ್ರೀ ಮರಗದಬಿಂಕ ದೇವಿಗೆ ಶಾಕಾಂಬರಿ ಅಲಂಕಾರ ಮಾಡಲಾಗಿತ್ತು. ಶ್ರೀ ಮಣಿಕಂಠೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಆಷಾಢ ಹುಣ್ಣಿಮೆ ನಿಮಿತ್ತ ದೇವಿಗೆ ಶಾಕಾಂಬರಿ ಅಲಂಕಾರ ಮಾಡಿದಲ್ಲದೆ ದೇವಾಲಯವನ್ನು ವಿವಿಧ ರೀತಿಯ ತರಕಾರಿಗಳಿಂದ ಸುಂದರವಾಗಿ ಅಲಂಕರಿಸಲಾಗಿದ್ದು ಶ್ರೀ ಮರಗದಾಂಬಿಕಾ ದೇವಿ ಹಾಗೂ ದೇವಾಲಯದ ಅವರಣದಲ್ಲಿ ನೆಲೆ ನಿಂತಿರುವ ಶ್ರೀ ದುರ್ಗಾದೇವಿಗೂ ವಿವಿಧ ಬಗೆಯ ತರಕಾರಿ ಹಾಗೂ ಹಣ್ಣುಗಳಿಂದ ಅಲಂಕರಿಸಿ ಭಕ್ತರಿಗೆ ದರ್ಶನ ಭಾಗ್ಯ ಕಲ್ಪಿಸಲಾಗಿತ್ತು. ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಿಯ ದರ್ಶನ ಪಡೆದು ಪುನಿತರಾದರು.
ಕಾರ್ಯಕ್ರಮದಲ್ಲಿ ಇಒ ಸುರೇಶಬಾಬು, ಇಇ ವೆಂಕಟನಾರಾಯಣ, ಎಇಒ ವಿದ್ಯಾಸಾಗರರೆಡ್ಡಿ, ಪದನಿಮಿತ್ತ ಸದಸ್ಯ ಹಾಗು ಪ್ರಧಾನ ಅರ್ಚಕ ಸೋಮಶೇಖರ್ ಗುರುಕುಲ,ಗಣೇಶ್ ಗುರುಕುಲ್,ಬಾಲಸುಬ್ರಮಣ್ಯಂ ಗುರುಗುಲ್,ಮೇಲ್ವಿಚಾರಕರಾದ ಕೋದಂಡಪಾಣಿ, ಶ್ರೀನಿವಾಸ್, ದೇವಸ್ಥಾನದ ಇನ್ಸ್ಪೆಕ್ಟರ್ ರಮೇಶ್ ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.
ಚಿತ್ತೂರು ಮೂಲದ ರಘು ಫ್ಲವರ್ ಡೆಕೋರೇಟರ್ ತಮ್ಮ 64 ಉದ್ಯೋಗಿಗಳೊಂದಿಗೆ ಶ್ರೀ ಮಣಿಕಂಠೇಶ್ವರ ಸ್ವಾಮಿ ದೇವಸ್ಥಾನವನ್ನು ಹಣ್ಣು ಮತ್ತು ತರಕಾರಿಗಳಿಂದ ಅಲಂಕರಿಸಿ ದೇವಸ್ಥಾನದ ಆವರಣದಲ್ಲಿ ಕುಂಬಳಕಾಯಿ,ಬದನೆಕಾಯಿ, ಸೋರೆಕಾಯಿ, ಕ್ಯಾರೆಟ್ ಮತ್ತು ಬೀಟ್ರೂಟ್ನಿಂದ ಮಾಡಿದ್ದ ವಿವಿಧ ದೇವತಾ ಮೂರ್ತಿಗಳು ಭಕ್ತರನ್ನು ವಿಶೇಷವಾಗಿ ಆಕರ್ಷಿಸಿತು.