ನ್ಯೂಜ್ ಡೆಸ್ಕ್:ಆಂಧ್ರ ಪ್ರದೇಶದ ಪ್ರಖ್ಯಾತ ಪುಣ್ಯಕ್ಷೇತ್ರವಾಗಿ ಪ್ರಸಿದ್ದಿ ಪಡೆದು ರಾಹುಕೇತು ಪೂಜೆಗೆ ಖ್ಯಾತಿ ಪಡೆದಿರುವ ಶ್ರೀ ಪ್ರಸೂನಾಂಬಿಕಾ ದೇವಿ ಸಮೇತ ಶ್ರೀಕಾಳಹಸ್ತೀಶ್ವರ ದೇವಾಲಯ ಶಾತವಾಹನರು,ಪಲ್ಲವವರು,ಚೋಳರು ಮತ್ತು ವಿಜಯನಗರ ಸಾಮ್ರಾಜ್ಯಗಳ ಭಾಗವಾಗಿದ್ದು ಶಾತವಾಹನರ ಆಳ್ವಿಕೆಯ ಕಾಲದಲ್ಲಿ ಬಹುಶಃ ಇಲ್ಲಿ ಮರಮುಟ್ಟುಗಳಿಂದ ಚಿಕ್ಕ ಗುಡಿಯೊಂದನ್ನು ನಿಲ್ಲಿಸಿ, ಲಿಂಗವನ್ನು ಸ್ಥಾಪಿಸಿದ್ದಿರಬಹುದು ಎಂದು ಹೇಳಲಾಗಿದ್ದು ಕಾಲಾಂತರದಲ್ಲಿ ಕಾಳಹಸ್ತಿ ತೊಂಡಮಂಡಲದ ಪಲ್ಲವರ ಅಧೀನಕ್ಕೆ ಬಂತು. ವಾಸ್ತು ಮತ್ತು ಶಿಲ್ಪಶೈಲಿಯ ಆಧಾರದ ಮೇಲೆ ಪಲ್ಲವರ ಕಾಲದಲ್ಲಿ ಪ್ರಥಮವಾಗಿ ಶಿಲೆಗಳಿಂದ ಈ ದೇವಾಲಯದ ಕೆಲವು ಭಾಗಗಳು ನಿರ್ಮಿತವಾಗಿರಬಹುದು ಎಂದು ಅಂದಾಜಿಸಲಾಗಿದ್ದು, ಚೋಳರ ಕಾಲದಲ್ಲಿ ಯಾದವರಾಯ ನರಸಿಂಹದೇವ ಕಾಳಹಸ್ತಿಯ ದೇವಾಲಯಕ್ಕೆ ವಿಶೇಷ ಕೊಡುಗೆಯಿತ್ತುದಾಗಿ ತಿಳಿದು ಬರುತ್ತದೆ. ವಿಜಯನಗರದ ಕೃಷ್ಣದೇವರಾಯನ ಕಾಲದಲ್ಲಿ ಕಾಳಹಸ್ತಿಯ ದೇವಾಲಯ ವಿಶೇಷವಾಗಿ ಅಭಿವೃದ್ಧಿ ಹೊಂದಿತು. ಈತ ದೇವಾಲಯದ ಭವ್ಯವಾದ ಹಾಗೂ ಇಂದಿಗೂ ಪ್ರಸಿದ್ಧವಾಗಿರುವ ಗಾಳಿ ಗೋಪುರವನ್ನೂ ನೂರ್ಕಾಲು ಮಂಟಪವನ್ನೂ 1516ರಲ್ಲಿ ಕಟ್ಟಿಸಿದ. ಅವನ ಅನಂತರ ಆಳಿದ ಅಚ್ಯುತರಾಯನ ಪಟ್ಟಾಭಿಷೇಕ ಇಲ್ಲಿ ನಡೆಯಿತೆಂದು ಹೇಳಲಾತ್ತದೆ. ಅಚ್ಯುತರಾಯನ ಹೆಸರಿನ ಮಂಟಪವೊಂದನ್ನು ಅವನೇ ಕಟ್ಟಿಸಿದನೆಂದು ತೋರುತ್ತದೆ.ಚೋಳರ ಕಾಲದಲ್ಲಿ ಆಲಯ ನಿರ್ಮಾಣವಾಗಿದ್ದು ಲಿಂಗವೆಂದು ನಂತರ ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಗೋಪುರಗಳು ನಿರ್ಮಾಣ ಕಾರ್ಯವಾಯಿತು ಎನ್ನಲಾಗಿದ್ದು ಇಲ್ಲಿರುವ ಶಿವಲಿಂಗ ವಾಯುವ್ಯಲಿಂಗವೇಂದು ಪ್ರಸಿದ್ದಿ ಪಡೆದಿದೆ ಇಲ್ಲಿಯ ಈಶ್ವರನ ಸನ್ನಿಧಾನದಲ್ಲಿ ಸರ್ಪದೋಷದ ನಿವಾರಣೆಗೆ ಮಾಡಿಸುವ ರಾಹುಕೇತು ಪೂಜೆ ಪ್ರಖ್ಯಾತಿ ಪಡೆದಿದೆ ಪೂಜೆ ಮಾಡಿಸಲು ವಿಶೇಷವಾಗಿ ಕರ್ನಾಟಕದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಹೋಗುವುದು ಸಾಮನ್ಯ ಇಲ್ಲಿನ ರಾಹುಕಾಲದ ಪೂಜೆಗೆ ವಿವಿಧ ಧರಗಳನ್ನು ನಿಧಿಸಿದ್ದು 500/- ರೂಪಾಯಿಗಳಿಂದ ಹಿಡಿದು ರೂ 750/-,ರೂ1500/- ರೂ2500/- ಅತ್ಯಧಿಕ ಎನ್ನುವಂತೆ ರೂ5000/- ಮೌಲ್ಯದ ಟಿಕೆಟ್ಗಳನ್ನು ನಿಗದಿಪಡಿಸಲಾಗಿದೆ.
ನೂತನವಾಗಿ ಜಾರಿಗೆ ತಂದಿರುವಂತ 5 ಸಾವಿರ ಮೊತ್ತದ ರಾಹುಕೇತು ಪೂಜೆ ದೇವಾಲಯ ಸಿಬ್ಬಂದಿ ವರ್ತನೆಯಿಂದ ಭಕ್ತರಿಗೆ ಗೊಂದಲದ ಗೂಡಾಗಿ ಪರಿಣಮಿಸಿದೆ.ರಾಹುಕೇತು ಪೂಜೆ ಮಾಡಲು ದೇಶ ವಿದೇಶಗಳಿಂದ ಭಕ್ತಾದಿಗಳು ಸಹಸ್ರ ಸಂಖ್ಯೆಯಲ್ಲಿ ಆಗಮಿಸುತ್ತಾರೆ ಆಧಿಕ ಮೌಲ್ಯದ ಟಿಕೆಟ್ಗಳನ್ನು ಖರೀದಿಸಿದ ಭಕ್ತರು ನಿಗದಿತ ಮಂಟಪಗಳಲ್ಲಿ ಪೂಜೆಗೆ ಕೂರುತ್ತಾರೆ ಆದರೂ ಪೂಜಾ ಸಾಮಾಗ್ರಿಗಳನ್ನು ನೀಡಬೇಕಾದ ದೇವಾಲಯ ಸಿಬ್ಬಂದಿ ಸಮರ್ಪಕವಾಗಿ ನೀಡದೆ ದುಡ್ಡಿಗಾಗಿ ಸತಾಯಿಸುವುದು ಮಾಡುತ್ತಾರೆ ಎಂದು ಭಕ್ತರು ಆರೋಪಿಸುತ್ತಾರೆ.5 ಸಾವಿರ ರೂಗಳ ಟಿಕೆಟ್ ಪಡೆದ ಭಕ್ತರನ್ನು ಭಗವಂತನ ಸನ್ನಿಧಿಯಲ್ಲಿ ಸಹಸ್ರಲಿಂಗದ ಮುಂಭಾಗದಲ್ಲಿ ರಾಹುಕೇತು ಸರ್ಪದೋಷ ನಿವಾರಣೆ ಪೂಜೆಗೆ ಕೂರಿಸುವುದು ಸಾಮಾನ್ಯ ಆದರೆ ದೇವಾಲಯ ಸಿಬ್ಬಂದಿ ಅಷ್ಟು ಮೊತ್ತದ ಟಿಕೆಟ್ ಪಡೆದ ಭಕ್ತರಿಗೆ ಪೀಠದ ವ್ಯವಸ್ಥೆ ಮಾಡಬೇಕಿದ್ದರು ಪೀಠಗಳನ್ನು ಬದಿಗಿಟ್ಟು ತಮಗೆ ಬೇಕಾದವರು ಹಣ ಕೊಟ್ಟವರಿಗೆ ಹಾಗೂ ಶಿಫಾರಸ್ಸುಗಳೊಂದಿಗೆ ಬಂದವರಿಗೆ ಮಾತ್ರ ಪೂಜಾ ಸಾಮಗ್ರಿಗಳನ್ನು ಕೊಟ್ಟು ಪೀಠದ ಮೇಲೆ ಕೂರಿಸಲಾಗುತ್ತದೆ.5 ಸಾವಿರ ರೂಗಳ ಟಿಕೆಟ್ ಖರೀದಿಸಿದ ಭಕ್ತರಿಗೂ ದೇವಾಲಯ ಸಿಬ್ಬಂದಿ ಕಾಟ ತಪ್ಪಿದ್ದಲ್ಲ ಎನ್ನುತ್ತಾರೆ ಭಕ್ತರು. ಸಹಸ್ರ ಲಿಂಗದಲ್ಲಿ ಭಕ್ತರು ನಾಲ್ಕು ಕಡೆ ಕುಳಿತುಕೊಳ್ಳಲು ಅವಕಾಶ ಇದ್ದರು ಸಹಸ್ರಲಿಂಗ ಮೂರ್ತಿಯ ಮುಂದೆ ಸಾಮಾನ್ಯ ಭಕ್ತ ಕೂರದಂತೆ ತಡೆಯುತ್ತಾರೆ. ನೆಮ್ಮದಿಯಾಗಿ ಭಗವಂತನ ದರ್ಶನ ಮಾಡಲು ಶಿಫಾರಸ್ಸಿನ ಪತ್ರ ಕೇಳುತ್ತ ಭಕ್ತರನ್ನು ಸತಾಯಿಸುತ್ತಾರೆ.ವಿಐಪಿಗಳು ಮತ್ತು ಶಿಫಾರಸಿನ ಮೇರೆಗೆ ಬರುವಂತವರಿಗೆ ಹಾಗು ಬ್ರೋಕರುಗಳ ಮೂಲಕ ಬರುವಂತವರಿಗೆ ಅವರು ಬಂದ ತಕ್ಷಣ ತಟ್ಟೆ ಹಿಡಿದು ಪೂಜೆ ಮಾಡಿಸುವ ಅರ್ಚಕರು,ಸಾಮಾನ್ಯ ಭಕ್ತರು ಬಂದರೆ ಇನ್ನೊಂದಷ್ಟು ಜನ ಬರುವರಿಗೂ ಕಾಯಿರಿ ಎಂದು ಉದಾಸಿನವಾಗಿ ನಡೆಸಿಕೊಳ್ಳುತ್ತಾರೆ.
ದೊಡ್ಡ ಮೊತ್ತದ ಟಿಕೆಟ್ ಖರೀದಿಸಿದ ಸಾಮಾನ್ಯ ಭಕ್ತರು ಭಗವಂತನ ಸನ್ನಿಧಾನದಲ್ಲಿ ಕನಿಷ್ಠ ಅಂತರಾಲಯ ದರ್ಶನಕ್ಕೂ ಅವಕಾಶ ಕಲ್ಪಿಸದೆ ಪರದಾಡಿಸುತ್ತಾರೆ. 1000 ರೂಗಳ ರುದ್ರಾಭಿಷೇಕ ಮಾಡಿಸುವ ಭಕ್ತರಿಗೆ 1ಕೆ.ಜಿ ಪುಳಿಹೋರ, ಎರಡು ಚಿಕ್ಕ ಲಡ್ಡು, ಎರಡು ವಸ್ತ್ರ, ಪಂಚಾಮೃತ ನೀಡುವ ದೇವಾಲಯ ಮಂದಳಿಯವರು ರಾಹುಕೇತು ಪೂಜೆ ಮಾಡುವವರು 2000/- ಹಾಗು 5000/- ಮೌಲ್ಯದ ಟಿಕೆಟ್ ಪಡೆಯುವಂತ ಭಕ್ತರಿಗೆ ಕನಿಷ್ಠ ಶೀಘ್ರ ದರ್ಶನಕ್ಕೂ ಅವಕಾಶ ನೀಡದಿರುವುದು ತುಂಬಾ ಶೋಚನೀಯ ಎನ್ನುತ್ತಾರೆ ಕರ್ನಾಟಕದ ಭಕ್ತರು.