ಶ್ರೀನಿವಾಸಪುರ:ಶ್ರೀನಿವಾಸಪುರ ಕ್ಷೇತ್ರಕ್ಕೆ ಹಿಡಿದಿರುವ ಶನಿ ಹೋಗಿ ಗುರು ಬರಬೇಕು ಎಂದರೆ ಇಲ್ಲಿನ ಶಾಸಕರು ಮನೆ ದಾರಿ ಹಿಡಿಯಬೇಕು ಆಗ ಕ್ಷೇತ್ರಕ್ಕೆ ಒಳ್ಳೆಯ ದಿನಗಳು ಬರಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು ಅವರು ಸೋಮವಾರ ಪಟ್ಟಣದ ಮಾರುತಿ ಸಭಾ ಭವನದಲ್ಲಿ ಬಿಜೆಪಿ ಜನೊತ್ಸವ ಕಾರ್ಯಕ್ರಮದ ತಾಲೂಕು ಬಿಜೆಪಿ ಕಾರ್ಯಕರ್ತರೊಂದಿಗೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಈ ಕ್ಷೇತ್ರ ನನಗೆ ವಿಶೇಷ ಇಲ್ಲಿ ಒಳ್ಳೆಯವರು ಶಾಸಕರಾಗಿದ್ದಾರೆ ಕೆಟ್ಟವರು ಶಾಸಕರಾಗಿದ್ದಾರೆ ಈಗ ಕ್ಷೇತ್ರದಲ್ಲಿ ಒಳ್ಳೆಯವರು ಇಲ್ಲ ಎಂದು ಶಾಸಕ ರಮೇಶ್ ಕುಮಾರ್ ಹೆಸರು ಪ್ರಸ್ತಾಪಿಸದೆ ಪರೋಕ್ಷವಾಗಿ ಅವರ ವಿರುದ್ದ ವಾಗ್ದಾಳಿ ನಡೆಸಿದ ಸಚಿವರು ಮಾಡಿರುವ ಅಕ್ರಮ ಆಸ್ತಿಗಳ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರ ಮುಂದೆ ಒಪ್ಪಿಕೊಂಡಿದ್ದಾರೆ ಅವರ ಮಾತುಗಳ ಅಧಾರದಲ್ಲಿ ಅವರು ಮಾಡಿರುವ ಅಕ್ರಮಗಳ ತನಿಖೆಯಾಗಲಿ, ಭ್ರಷ್ಟಾಚಾರವನ್ನು ಬಹಿರಂಗವಾಗಿ ಒಪ್ಪಿಕೊಂಡಿರುವ ವ್ಯಕ್ತಿ ಹೇಳೋದು ಒಂದು ಮಾಡೋದು ಇನ್ನೊಂದು ಇದು ಅವರ ಗುಣ ಲಕ್ಷಣ ಉಳ್ಳ ಇಂತಹ ವ್ಯಕಿಯನ್ನು ನಾನು ಎಲ್ಲೂ ಕಂಡಿಲ್ಲ ನೀವು ಯಾವುದೇ ಕಾರಣಕ್ಕೂ ಇಂತಹ ವ್ಯಕ್ತಿಗೆ ಮತ ಹಾಕಬೇಡಿ ಎಂದು ಬಹಿರಂಗವಾಗಿ ಹೇಳಿದರು.
ಭಾರತದಲ್ಲಿ ಕಾಂಗ್ರೆಸ್ ಕಣ್ಮರೆಯಾಗುತ್ತಿದೆ ಎಂದು ವ್ಯಂಗ್ಯವಾಡಿದ ಸಚಿವ ಮುಂದೆ ಇಲ್ಲಿಯೂ ಸಂಪೂರ್ಣವಾಗಿ ಕಣ್ಮರೆಯಾಗುತ್ತದೆ ಎಂದರು.
ವಿಧಾನಪರಿಷತ್ ಮುಖ್ಯ ಸಚೇತಕ ವೈ.ಎ.ನಾರಯಣಸ್ವಾಮಿ ಮಾತನಾಡಿ ಸಿದ್ದರಾಮೋತ್ಸ ನಡೆದ ದಿನವೆ ಕರ್ನಾಟಕದ ಜನತೆಗೆ ತಿಳಿಯಲಿದೆ ಕಾಂಗ್ರೆಸ್ ಪರಿಸ್ಥಿತಿ ಮೆನೆಯೊಂದು ಮೂರು ಬಾಗಿಲಲ್ಲ ಹತ್ತು ಬಾಗಿಲು ನಂತಾಗಿರುವ ಕಾಂಗ್ರೆಸ್ ಪಕ್ಷ ಮುಳಗುವ ಹಡಗಿನಂತಾಗಿದೆ ಆ ಪಕ್ಷದ ಮುಖಂಡರು ಬೌದ್ಧಿಕವಾಗಿ ದಿವಾಳಿಯಾಗಿದ್ದಾರೆ ಮಹಿಳೆಯರ ಮೇಲಿನ ದೌರ್ಜನ್ಯವನ್ನು ವಿಧಾನಸಭೆಯಲ್ಲಿ ಸಮರ್ಥಿಸಿಕೊಳ್ಳುತ್ತಾರೆ 3-4 ತಲೆಮಾರಿಗಾಗುವಷ್ಟು ಆಕ್ರಮವಾಗಿ ಸಂಪಾಧನೆ ಮಾಡಿರುವುದಾಗಿ ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ ಎಂದರು ಭಾರತದಲ್ಲಿ ಪ್ರಥಮವಾಗಿ ಎನ್ನುವಂತೆ ರೈತರ ಪರ ಬಡ್ಜೆಟ್ ಮಂಡಿಸಿದ ಏಕೈಕ ಮುಖ್ಯಮಂತ್ರಿ ಯಡಿಯೂರಪ್ಪನವರು ಅವರಿಂದ ರಾಜ್ಯದ ಅಭಿವೃದ್ದಿಯಾಗಿದೆ ಕೋಲಾರದ ಮುದುವಾಡಿಯವರಿಗೂ ಬಂದ ಕೆ.ಸಿ.ವ್ಯಾಲಿ ಯೋಜನೆಯ ಕೆರೆಗಳಿಗೆ ನೀರು ತುಂಬುವ ಯೋಜನೆಯ ಮುಂದಿನ ಕೆರೆಗಳಿಗೆ ನೀರು ಹರಿಯಲು ಹಣ ಬಿಡುಗಡೆ ಮಾಡಿದ್ದು ಬಿಜೆಪಿ ಸರ್ಕಾರ ಎಂದರು ಭಾರತೀಯ ಜನತಾ ಪಕ್ಷದ ಸರ್ಕಾರ ರೈತಪರ ನೀಲುವುಗಳಿಂದ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಸಿಗುತ್ತಿದೆ ಕರ್ನಾಟಕದ ಪ್ರತಿ ರೈತನಿಗೂ ಕೇಂದ್ರ ಹಾಗು ರಾಜ್ಯ ಸರ್ಕಾರದಿಂದ 10 ಸಾವಿರ ರೂಪಾಯಿಗಳು ಸಿಗುತ್ತಿದೆ ಎಂದರು.
ಕೋಲಾರದ ಮಾಜಿ ಶಾಸಕ ವರ್ತೂರುಪ್ರಕಾಶ್ ಮಾತನಾಡಿ ಈ ಕ್ಷೇತ್ರದ ಶಾಸಕರ ಪಾಪದ ಕೊಡ ತುಂಬಿದೆ ಈ ಬಾರಿ ಅವರು ಕನಿಷ್ಠ 25 ಸಾವಿರ ಮತಗಳ ಅಂತರದಲ್ಲಿ ಸೋಲುತ್ತಾರೆ ಮನೆಗೆ ಹೋಗುವುದು ಗ್ಯಾರಂಟಿ ಎಂದು ಹೇಳಿದರು.
ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ವೇಣುಗೋಪಾಲ್ ಮಾತನಾಡಿ ಬಿಜೆಪಿ ಸರ್ಕಾರದ ಸಾಧನಾ ಸಮಾವೇಶ ಜನೋತ್ಸವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರದಿಂದ ಕಾರ್ಯಕರ್ತರು ಆಗಮಿಸುವಂತೆ ಹೇಳಿದರು.
ಕಾರ್ಯಕ್ರಮದಲ್ಲಿ ಕೆ.ಜಿ.ಎಫ್ ಮಾಜಿ ಶಾಸಕ ಸಂಪಂಗಿ, ಬಂಗಾರಪೇಟೆ ಮಾಜಿ ಶಾಸಕ ನಾರಯಣಸ್ವಾಮಿ,ತಾಲೂಕು ಬಿಜೆಪಿ ಅಧ್ಯಕ್ಷ ಆಶೋಕರೆಡ್ಡಿ, ಲಕ್ಷ್ಮಣಗೌಡ, ರೋಣೂರುಚಂದ್ರಶೇಖರ್, ಬಿಜೆಪಿ ಶಿವಣ್ಣ,ಪಣಸಮಾಕನಹಳ್ಳಿ ಟಿ.ನಾರಯಣಸ್ವಾಮಿ,ಪುರಸಭೆ ಸದಸ್ಯ ರಾಮಾಂಜಿ,ಶಿವಶಂಕರಗೌಡ ಮುಂತಾದವರು ಇದ್ದರು.
ಇದೇ ಸಂದರ್ಭದಲ್ಲಿ ಶ್ರೀನಿವಾಸಪುರದಲ್ಲಿ ಸಬ್ ಇನ್ಸೆಪೇಕ್ಟರ್ ಆಗಿ ಇಲ್ಲೇ ನಿವೃತ್ತಿ ಹೊಂದಿದ ನಾರಯಣಪ್ಪ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸಮಕ್ಷಮದಲ್ಲಿ ಬಿಜೆಪಿ ಸೇರಿದರು.