ಶ್ರೀನಿವಾಸಪುರ: ತಾಲೂಕಿನ ರೋಣೂರು ಕ್ರಾಸನಲ್ಲಿರುವ ಖ್ಯಾತ ಶಾಲೆ ವಿಷನ್ ಇಂಡಿಯಾ ಪಬ್ಲೀಕ್ ಶಾಲೆಯಲ್ಲಿ ಸೆಂಟ್ರಲ್ ಬೋರ್ಡ ಆಫ್ ಸೆಕೆಂಡರಿ ಎಡುಕೇಷನ್ ಸಂಸ್ಥ್ತೆ(ಸಿಬಿಎಸ್.ಸಿ) ಯಲ್ಲಿ ನೊಂದಾಯಿತ ಸಂಸ್ಥೆಯಾಗಿದ್ದು 2021-2022 ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಧಾನೆ ಮಾಡಿರುವುದಾಗಿ ಶಾಲೆಯ ಕಾರ್ಯದರ್ಶಿ ಡಾ.ಕವಿತಾ ತಿಳಿಸಿದರು.
ಅವರು ತಮ್ಮ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ 10 ನೇತರಗತಿ ಸಿ.ಬಿ.ಎಸ್.ಸಿ ವಿದ್ಯಾರ್ಥಿಗಳು ಶೇ%100 ಪಲಿತಾಂಶ ಸಾಧಿಸಿ ಶಾಲೆಗೆ ಉತ್ತಮ ಹೆಸರು ತಂದಿರುತ್ತಾರೆ ಎಂದು ತಿಳಿಸಿದರು. ಪರಿಕ್ಷೇಗೆ ಕುಳತಿದ್ದ 31 ವಿದ್ಯಾರ್ಥಿಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ತೀðಣರಾಗಿರುತ್ತಾರೆ ರಕ್ಷಿತಾ ಎಂಬ ವಿದ್ಯಾರ್ಥಿ 500 ಕ್ಕೆ 486 ಅಂಕ ಗಳಿಸಿ ತಾಲೂಕಿಗೆ ಪ್ರಥಮ ಮತ್ತು ಕೋಲಾರ ಜಿಲ್ಲೆಗೆ ದ್ವೀತಿಯ ಸ್ಥಾನ ಗಳಿಸಿರುತ್ತಾಳೆ ಉಳಿದಂತೆ 8 ವಿದ್ಯಾರ್ಥಿಗಳು ಅತ್ಯನುತ್ತ ಶ್ರೇಣಿಯಲ್ಲಿ ಪಾಸಾಗಿದ್ದರೆ ಇನ್ನು 8 ವಿದ್ಯಾರ್ಥಿಗಳು ಉನ್ನತ ಮತ್ತು 12 ವಿದ್ಯಾರ್ಥಿಗಳು ಪ್ರಥಮದರ್ಜೆ ಹಾಗು ಮೂವರು ವಿದ್ಯಾರ್ಥಿಗಳು ದ್ವೀತಿದರ್ಜೆಯಲ್ಲಿ ಪಾಸಾಗಿದ್ದು ವಿದ್ಯಾರ್ಥಿಗಳ ಸಾಧನೆ ಇತರೆ ವಿಧ್ಯಾರ್ಥಿಗಳಿಗೆ ಆದರ್ಶವಾದರೆ ಪಾಠ ಮಾಡಿದ ಶಿಕ್ಷಕ ವೃಂದಕ್ಕೂ ಮತ್ತು ಆಡಳಿತ ಮಂಡಳಿಗೆ ಗೌರವ ತಂದಿದೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷ ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್,ಶಾಲೆ ಪ್ರಾಂಶುಪಾಲೆ ಅಸ್ಮಾತಬ್ಸಮ್, ಉಪಪ್ರಾಂಶುಪಾಲೆ ದೀಪ, ಕಾಲೇಜು ಪ್ರಾಚಾರ್ಯ ಕೃಷ್ಣಾರೆಡ್ಡಿ ಇದ್ದರು.